Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.06.2026
Share:

By Village Missionary Movement

Tuesday, 02-Jun-2026

ಧೈನಂದಿನ ಧ್ಯಾನ(Kannada) – 02.06.2026

 

ಮಕ್ಕಳು ಆಶೀರ್ವದಿಸಲ್ಪಡಲು

 

“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು." - ಜ್ಞಾನೋಕ್ತಿ 22:6

 

ಒಂದು ಕ್ರೈಸ್ತ ಬೋಧಕ ಪೋಷಕರಿಗೆ ಜನಿಸಿದ ನಾನು ಮತ್ತು ನನ್ನ ಸಹೋದರಿ ದೇವರ ಮಹಾ ಕೃಪೆಯಿಂದ ನಮ್ಮ ಪೋಷಕರ ಶಿಸ್ತು, ಪ್ರೀತಿ ಮತ್ತು ಮಾದರಿ ಜೀವನಶೈಲಿಯ ಮೂಲಕ ಚೆನ್ನಾಗಿ ನಡೆಸಲ್ಪಟ್ಟೆವು. ಅವರುಗಳು ಎದುರಿಸಿದ ಸವಾಲುಗಳು ಮತ್ತು ಹೋರಾಟಗಳ ಮೂಲಕ, ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಕಲಿತುಕೊಂಡೆವು. ನಮ್ಮ ತಂದೆ ತನ್ನ ಶಿಕ್ಷಕ ಕರ್ತವ್ಯಗಳ ಜೊತೆಗೆ ಸಭೆಯ ಬೋಧಕರಾಗಿಯೂ ಇದ್ದರು. ಆದ್ದರಿಂದ, ಅವರು ತಮ್ಮ ಸೇವೆಯ ಮೂಲಕ ಪ್ರೀತಿಯಿಂದ ನಮಗೆ ಜೀವನ ಪಾಠಗಳನ್ನು ಕಲಿಸಿದರು. ಅವರು ನಮ್ಮನ್ನು ರಾತ್ರಿ ಪ್ರಾರ್ಥನೆಗಳು, ಮಿಷನರಿ ದರ್ಶನ ಕೂಟಗಳು, ಬೈಬಲ್ ಅಧ್ಯಯನಗಳು, ಸಂಗೀತ ತರಬೇತಿಗಳು ಮತ್ತು ಸಂಬಂಧಿಕರ ಮನೆಗಳಿಗೆ ಕರೆದೊಯ್ದು ಸಾಮಾಜಿಕ ಶಿಷ್ಟಾಚಾರದಲ್ಲಿ ನಮಗೆ ತರಬೇತಿ ನೀಡಿದರು. ನಮ್ಮ ತಾಯಿ ಕಟ್ಟುನಿಟ್ಟಾಗಿದ್ದರು. ಅವರು ನಮಗೆ ನೈತಿಕತೆ, ಉಡುಗೆ ತೊಡುಗೆಗಳು ಮತ್ತು ಹಣ, ಸಮಯ ಮತ್ತು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಹೇಗೆ ನಿರ್ವಹಿಸಬೇಕೆಂದು ಕಲಿಸಿದರು. 

 

ಈ ಎಲ್ಲಾ ಕಾರ್ಯಗಳು ನನ್ನ ಮತ್ತು ನನ್ನ ಸಹೋದರಿಯನ್ನು ಎಲ್ಲಾ ವಿಷಯಗಳಲ್ಲಿ, ನಾವು ದೇವರಿಗೆ ಭಯಪಡುವ ಮೂಲಕ ದೇವರೊಂದಿಗೆ ಸೇರಿ ಜೀವನದ ಎಲ್ಲಾ ಸವಾಲುಗಳನ್ನು ಎದುರಿಸಲು ಮತ್ತು ಜಯಿಸಲು ಕಲಿಸಿಕೊಟ್ಟವು. ಅದನ್ನೇ ನಮ್ಮ ಮಕ್ಕಳಿಗೆ ಮತ್ತು ನಾವು ಬೋಧಿಸಿ ಮುನ್ನಡೆಸುತ್ತಿರುವ ಚಿಕ್ಕ ಮಕ್ಕಳು, ಯೌವನಸ್ದರು ಮತ್ತು ವಯಸ್ಕರಿಗೆ ಕಲಿಸುತ್ತಿದ್ದೇವೆ. ಕೀರ್ತನೆ 103:17 ರಲ್ಲಿ ಹೇಳುವಂತೆ, "ಯೆಹೋವನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯವು ಯುಗಯುಗಾಂತರಗಳವರೆಗೂ ಇರುತ್ತದೆ. ಎಂಬ ವಾಕ್ಯವು ನಮ್ಮ ಜೀವನದಲ್ಲಿ ಹಾಗೆಯೇ ನೆರವೇರಿದೆ.

 

ಆದ್ದರಿಂದ, ಹೊಸ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಿಸಿರುವ ನಮ್ಮ ಚಿಕ್ಕಮಕ್ಕಳು ಮತ್ತು ಯೌವನಸ್ಥರು ಆಶೀರ್ವದಿಸಲ್ಪಡುವಂತೆ ಅವರನ್ನು ಬೆಳೆಸುವ ಪೋಷಕರು, ಹಿರಿಯರು ಮತ್ತು ಶಿಕ್ಷಕರು ಹಾಗೂ ಬೋಧಕರಾಗಿರುವ ನಾವು, ಮಾದರಿಯ ಜೀವನವನ್ನು ನಡೆಸಲು, ದೇವರ ಭಯವನ್ನು ಕಲಿಸಲು ಮತ್ತು ನಮ್ಮ ಮಕ್ಕಳ ಅಧ್ಯಯನ ಮತ್ತು ಇತರ ಪ್ರತಿಭೆಗಳ ಬೆಳವಣಿಗೆಯನ್ನು ನಿರಂತರವಾಗಿ ಗಮನಿಸುತ್ತಿರಲು ಅರ್ಪಿಸಿಕೊಳ್ಳೋಣ. 

 

ಈ ಶೈಕ್ಷಣಿಕ ವರ್ಷವು ನಮ್ಮ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ಆಶೀರ್ವಾದದ ವರ್ಷವಾಗಲಿ ಎಂದು ನಾವು ಪ್ರಾರ್ಥಿಸೋಣ ಮತ್ತು ಹಾರೈಸೋಣ. ಕರ್ತನು ಸ್ವತಃ ನಮ್ಮ ಮಕ್ಕಳನ್ನು ಕರ್ತನು ನೀಡಿದ ದರ್ಶನದ ಯೋಜನೆಯಲ್ಲಿ ನೆಲೆಗೊಳಿಸಿ ಆಶೀರ್ವದಿಸಲಿ.

- Mrs. ಮೆರ್ಸಿ ಅಲೆಕ್ಸಾಂಡರ್

 

ಪ್ರಾರ್ಥನಾ ಅಂಶ:

ನಮ್ಮ ಸೇವಕರ ಮಕ್ಕಳ ಶೈಕ್ಷಣಿಕ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel