Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.06.2026
Share:

By Village Missionary Movement

Monday, 01-Jun-2026

ಧೈನಂದಿನ ಧ್ಯಾನ(Kannada) – 01.06.2026

 

ಹೊಸ ಶೈಕ್ಷಣಿಕ ವರ್ಷ

 

"ನನ್ನ ಪ್ರೀತಿಸತ್ಯತೆಗಳು ಅವನೊಡನೆ ಇರುವವು; ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವದು" - ಕೀರ್ತನೆ 89:24

 

ನಾವು ವಾಸಿಸುವ ಲೋಕ ಇಂದು ಗೊಂದಲ, ಅನೇಕ ಒತ್ತಡಗಳು ಗಮನ ಚದುರುವಿಕೆಗಳಿಂದ ತುಂಬಿದೆ. ಆದರೂ ಕರ್ತನು ತನ್ನ ಮಕ್ಕಳನ್ನು ತನಗಾಗಿ ಪ್ರಕಾಶಿಸಲು, ನಂಬಿಕೆಯಲ್ಲಿ ಬೇರೂರಲು ಮತ್ತು ಬುದ್ಧಿವಂತಿಕೆ ಮತ್ತು ಧೈರ್ಯದಿಂದ ವರ್ತಿಸುವಂತೆ ಕರೆಯುತ್ತಿದ್ದಾರೆ.

 

ದೇವರು ಈ ಲೋಕದಲ್ಲಿ ನಮ್ಮ ಮಕ್ಕಳನ್ನು ತನ್ನ ನಾಮ ಮಹಿಮೆಗಾಗಿ ಉಪಯೋಗಿಸಲು ಸಾಧ್ಯ. ಅವರು ಎದುರಿಸುವ ಸವಾಲುಗಳು, ಆಯ್ಕೆಗಳು, ಗೆಳೆಯರ ಒತ್ತಡ ಮತ್ತು ಅನಿಶ್ಚಿತ ಸಂದರ್ಭಗಳನ್ನು ಎದುರಿಸಿದಾಗ, ದೇವರು ಅವರಿಗೆ ದೃಢವಾಗಿ ನಿಲ್ಲಲು ಶಕ್ತಿಯನ್ನು ನೀಡುತ್ತಾರೆ. ದೇವರ ಯೋಜನೆಯಲ್ಲಿ ನಡೆಯಲು ಆತನು ಆರಿಸಲ್ಪಟ್ಟವರು, ಅಭಿಷೇಕಿಸಲ್ಪಟ್ಟವರು ಪ್ರತ್ಯೇಕಿಸಲ್ಪಟ್ಟವರು. ಕರ್ತನ ವಾಗ್ದಾನವನ್ನು ಸ್ವತಂತ್ರಿಸಿಕೊಳ್ಳಲು ಕರೆಯಲ್ಪಟ್ಟವರು ಎಂಬ ನಂಬಿಕೆ ಮೊದಲು ನಮಗಿದ್ದಾಗ, ನಾವು ಅವರಿಗಾಗಿ ಪ್ರಾರ್ಥಿಸಿ ಅವರನ್ನು ದೇವರಿಗೆ ಇಷ್ಟವಾದ ಹಾದಿಯಲ್ಲಿ ಮುನ್ನಡೆಸಲು ಸಾಧ್ಯವಾಗುತ್ತದೆ.

 

ಕರ್ತನ ಯೋಜನೆಯಲ್ಲಿ ಅವರಿದ್ದಾರೆ. ಆದ್ದರಿಂದ ಅವರ ನಂಬಿಕೆ, ಅವರ ಶ್ರೇಣಿಗಳು, ಖ್ಯಾತಿ ಅಥವಾ ಸಾಧನೆಗಳಿಂದ ಬರಬಾರದು. ಬದಲಾಗಿ, "ನೀನು ನನ್ನವನು" ಎಂದು ಕರೆಯುವ ದೇವರ ಬದಲಾಗದ ನಿಜ ಗುಣಮಟ್ಟದ ಮೇಲೆಯೇ ಇರಲಿ.

 

ಸತ್ಯವೇದದಲ್ಲಿ, ಅಪೊಲ್ಲೋಸನನ್ನು ಸುಶಿಕ್ಷಿತ ವ್ಯಕ್ತಿ ಎಂದು ಪರಿಚಯಿಸಲಾಗಿದೆ. ಅವರು ವಾಗ್ಮಿಯಾಗಿದ್ದರು. ಆದರೂ, ಅವರು ಹೆಚ್ಚಿನದನ್ನು ಕಲಿಯಲು ಮತ್ತು ವಿನಮ್ರನಾಗಿರಲು ಉತ್ಸುಕರಾಗಿದ್ದರು. ಅಪೊಲ್ಲೋಸನಂತೆ ನಮ್ಮ ಮಕ್ಕಳು ಚೆನ್ನಾಗಿ ಅಧ್ಯಯನ ಮಾಡಲಿ ಮತ್ತು ಅದೇ ಸಮಯದಲ್ಲಿ ದೇವರ ವಾಕ್ಯದಲ್ಲಿ ಬೆಳೆಯಲಿ. ಅದು ಅವರಿಗೆ ನಮ್ರತೆ ಮತ್ತು ಸೌಮ್ಯತೆಯನ್ನು ಕಲಿಸುತ್ತದೆ. ದೇವರು ಅವರನ್ನು ಈ ಲೋಕಕ್ಕೆ ಕರೆತಂದ ಉದ್ದೇಶವು ಅವರ ಆಯ್ಕೆಗಳು ಮತ್ತು ಆಕಾಂಕ್ಷೆಗಳಲ್ಲಿ ಈಡೇರಲಿ. ಅವರು ಯೇಸು ಕ್ರಿಸ್ತನಿಗಾಗಿ ಪ್ರಕಾಶಿಸುವ ವಿದ್ಯಾರ್ಥಿಗಳಾಗಿ ಪ್ರಜ್ವಲಿಸಲಿ. ಅವರು ನಮ್ಮನ್ನು ಜ್ಞಾನವುಳ್ಳವರಾಗಿರಲು ಮಾತ್ರವಲ್ಲದೆ, ಉಪ್ಪಾಗಿ, ಬೆಳಕಾಗಿ ಆತನ ಪ್ರತಿರೂಪವನ್ನು ಪ್ರತಿಬಿಂಬಿಸಲು ಕರೆಯುತ್ತಿದ್ದಾರೆ. ನಿಜವಾದ ಶಿಕ್ಷಣ ಎಂಬುದು ಮಾಹಿತಿಯನ್ನು ತಿಳಿದುಕೊಳ್ಳುವುದರ ಬಗ್ಗೆ ಮಾತ್ರವಲ್ಲ, ಕತ್ತಲೆಯ ಜಗತ್ತಿನಲ್ಲಿ ಯೇಸು ಕ್ರಿಸ್ತನ ಚಿಂತನೆಯೊಂದಿಗೆ ನಮ್ಮ ಆಲೋಚನಾ ಜೀವನದಲ್ಲಿ ಹೊಳೆಯಬೇಕು. ಆಗ ಯೇಸು ಕ್ರಿಸ್ತನಂತೆ, ನಾವು ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ಕೊಡಲು ಸಾಧ್ಯ. ವಿದ್ಯಾರ್ಥಿ ಜೀವನವು ಕರ್ತನು ನೀಡಿದ ನಿಧಿಯಾಗಿದೆ. ಈ ಋತುವಿನಲ್ಲಿ ಶಿಕ್ಷಣ, ಪ್ರತಿಭೆ ಮತ್ತು ಶಕ್ತಿಯ ಮೂಲಕ ದೇವರ ರಾಜ್ಯವು ಮಹಿಮೆ ಹೊಂದುತ್ತದೆ. ಆಮೆನ್.

- Rev. S. ಜ್ಯೋತಿ ನಾಯಗಂ 

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಿಗಾಗಿ, ಸೇವಕರ ಪ್ರಯಾಣದ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel