By Village Missionary Movement
Saturday, 30-May-2026ಧೈನಂದಿನ ಧ್ಯಾನ(Kannada) – 30.05.2026
ದೇವರಿಗಾಗಿ ನಮ್ಮ ಕೊಡುಗೆ
“...ಕರ್ತನು - ನೀನು ಹಿಂಸೆಪಡಿಸುವ ಯೇಸುವೇ ನಾನು." - ಅಪೊಸ್ತಲ 9:5
ದೇವರನ್ನು ಅರಿಯದ ಕುಟುಂಬಕ್ಕೆ ಸೇರಿದ ಸಹೋದರಿಯೊಬ್ಬರು ತಮ್ಮ ಜೀವನದಲ್ಲಿ ಅನೇಕ ಹೋರಾಟಗಳು ಮತ್ತು ಸಮಸ್ಯೆಗಳನ್ನು ಎದುರಿಸಿದರು. ಅವರ ಪತಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು, ಆದ್ದರಿಂದ ಅವರು ತನಗಾಗಿ ಯಾರೂ ಇಲ್ಲ ಎಂದು ಭಾವಿಸಿ ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು. ಒಂದು ದಿನ, ಮನೆಯೊಳಗೆ ಬಾಗಿಲು ಮುಚ್ಚಿ ಅಳುತ್ತಿದ್ದಾಗ, ತನ್ನನ್ನು ಪ್ರೀತಿಸಲು ಮತ್ತು ಸಹಾಯ ಮಾಡಲು ಯಾರೂ ಇಲ್ಲ ಎಂದು ಸೋತುಹೋದ ಸಮಯದಲ್ಲಿ ಅವರಿಗೆ ಒಂದು ಧ್ವನಿ ಕೇಳಿಸಿತು. ಅದೇನೆಂದರೆ, “ಯೇಸು ಕ್ರಿಸ್ತನಿಂದಲೂ, ತಂದೆಯಾದ ದೇವರಿಂದಲೂ ನಿನಗೆ ಶುಭವೂ ಕೃಪೆಯೂ ಉಂಟಾಗಲಿ ಎಂಬುದೇ. ಆ ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಅವಳು ಭಯಭೀತಳಾಗಿ ಕಣ್ಣೀರು ತುಂಬಿದ್ದ ಕಣ್ಣುಗಳಿಂದ ಕಾಣಲ್ಪಟ್ಟಳು. ಹತ್ತಿರದ ಜನರ ಬಳಿ ಇದರ ಬಗ್ಗೆ ವಿಚಾರಿಸಿದಾಗ ಇದು ಬೈಬಲ್‌ನಲ್ಲಿ ಬರೆಯಲ್ಪಟ್ಟ ದೇವರ ವಾಕ್ಯ ಎಂದು ಹೇಳಿದರು. ಯೇಸುವಿನ ಬಗ್ಗೆ ತಿಳಿಯಲು ಹತ್ತಿರದ ಚರ್ಚ್‌ಗೆ ಹೋಗಲು ಪ್ರಾರಂಭಿಸಿದಳು. ಯೇಸು ಒಂಟಿತನ ಮತ್ತು ಕಳೆಗುಂದಿದ ನನ್ನನ್ನು ಹುಡುಕಿಕೊಂಡು ಬಂದಿದ್ದಾರೆಂದು ನಂಬಿದಳು ಅವರಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಳು ಮತ್ತು ದೇವರ ಸೇವೆಯನ್ನು ಮಾಡಲು ಪ್ರಾರಂಭಿಸಿದಳು. ಕರ್ತನು ಅವಳ ಜೀವನವನ್ನು ಆಶೀರ್ವಾದವಾಗಿ ಮಾರ್ಪಡಿಸಿದರು.
ಬೈಬಲ್‌ನಲ್ಲಿಯೂ ಸಹ, ಅಪೊಸ್ತಲರ ಕೃತ್ಯಗಳು 9:1-27 ರಲ್ಲಿ, ಸೌಲನು ಯೇಸುವಿನ ಶಿಷ್ಯರನ್ನು ಭಯಭೀತಗೊಳಿಸಿ ಹಿಂಸಿಸಿ ಸಭೆಗಳನ್ನು ನಾಶಮಾಡಿದರು. ಅವನು ಯೇಸುವನ್ನು ಹಿಂಬಾಲಿಸಿದ ಶಿಷ್ಯರನ್ನು ಬಂಧಿಸಿ ಸೆರೆಹಿಡಿಯಲು ಪ್ರಯತ್ನಿಸಿದರು. ಒಂದು ದಿನ, ದಮಸ್ಕು ಎಂಬ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದಾಗ, ಫಕ್ಕನೆ ಆಕಾಶದೊಳಗಿಂದ ಒಂದು ಬೆಳಕು ಅವನ ಸುತ್ತಲು ವಿುಂಚಿತು. ಸೌಲನು ನೆಲಕ್ಕೆ ಬಿದ್ದರು. ಆಗ ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆ ಪಡಿಸುತ್ತೀ ನೀನು ಹಿಂಸೆಪಡಿಸುವ ಯೇಸುವೇ ನಾನು. ಮುಳ್ಳುಗೋಲುಗಳ ವಿರುದ್ಧ ಒದೆಯುವುದು ನಿನಗೆ ಕಷ್ಟವೇ ಎಂದು ಹೇಳಿದರು. ಸೌಲನು ಮೂರು ದಿನಗಳ ಕಾಲ ಕುರುಡನಾಗಿದ್ದು ತಿನ್ನದೇ, ಕುಡಿಯದೇ ಇದ್ದರು. ಸೌಲನು ಕರ್ತನ ಮುಂದೆ ತನ್ನನ್ನು ತಗ್ಗಿಸಿಕೊಂಡು, ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ ಎಂದು ಕೇಳಿದರು. ಸೌಲನ ಹೃದಯ ಬದಲಾಗಿ ಸೌಲನು ಪೌಲನಾಗಿ ಮಾರ್ಪಟ್ಟರು. ಯೇಸುವನ್ನು ವಿರೋಧಿಸಿದವರು ಸುವಾರ್ತೆಯನ್ನು ಹರಡಿದರು. ಅವರು ಬರೆದ ಪತ್ರಿಕೆಗಳು ಬೈಬಲ್‌ನಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿವೆ. ಅವರು ತನ್ನ ಜೀವನದ ಕೊನೆಯಲ್ಲಿ, “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ" ಎಂದರು. ಅವರು ತನ್ನ ಜೀವನವನ್ನು ಯೇಸುವಿಗೆ ಅರ್ಪಿಸಿ ಕರ್ತನಿಗಾಗಿ ರಕ್ತಸಾಕ್ಷಿಯಾಗಿ ಮರಣಹೊಂದಿದರು.
ಪ್ರಿಯರೇ, ಸೌಲನಿಗೆ ನೇರವಾಗಿ ಕರ್ತನ ಧ್ವನಿ ಬಂದಾಗ, ಅವರು ತನ್ನನ್ನು ತಗ್ಗಿಸಿಕೊಂಡರು. ಅದೇ ರೀತಿ, ಕರ್ತನ ಧ್ವನಿ ನಮ್ಮ ಬಳಿಗೆ ಬಂದಾಗ, ನಾವು ನಮ್ಮನ್ನು ತಗ್ಗಿಸಿಕೊಂಡು ಕರ್ತನಿಗೆ ವಿಧೇಯರಾಗಬೇಕು. ಕರ್ತನೇ, ನನ್ನ ಕಣ್ಣುಗಳನ್ನು ತೆರೆಯಿರಿ. ನನ್ನ ಪಾಪ ಕ್ರಿಯೆಗಳನ್ನು ನನ್ನಿಂದ ತೆಗೆದುಹಾಕಿರಿ ಎಂದು ಕೇಳಿದಾಗ, ಮಾರ ದಂತಹ ಕಹಿಯಾಗಿರುವ ನಮ್ಮ ಜೀವನವನ್ನು ಸಿಹಿಯಾಗಿ ಮಾರ್ಪಡಿಸುತ್ತಾರೆ.
- S. ಸಿಂಧು
ಪ್ರಾರ್ಥನಾ ಅಂಶ:
ಟ್ಯೂಷನ್ ಸೆಂಟರ್ ಗೆ ಬರುವ ಮಕ್ಕಳ ಹೃದಯದಲ್ಲಿ ಕೇಳಿದ ವಾಕ್ಯಗಳು ಕ್ರಿಯೆ ಮಾಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482