Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.05.2026
Share:

By Village Missionary Movement

Friday, 22-May-2026

ಧೈನಂದಿನ ಧ್ಯಾನ(Kannada) – 22.05.2026

 

ಗರ್ವ

 

"ನಾಶನಕ್ಕೆ ಮುಂದಾಗಿ ಗರ್ವ ಹೋಗುತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು" - ಜ್ಞಾನೋಕ್ತಿ 16:18

 

ಶಾಂತ ತುಂಬಾ ಸುಂದರವಾಗಿ ಹಾಡುತ್ತಾಳೆ. ತನ್ನ ಮಧುರವಾದ ಧ್ವನಿಗಾಗಿ ಮತ್ತು ಅನೇಕ ಗಾಯನ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದಿದ್ದಕ್ಕಾಗಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಪುನೀತ ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿಲ್ಲವಾದರೂ, ಆಲಯ ಮತ್ತು ಸಂಡೇ ಸ್ಕೂಲ್ ನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದ್ದಾಳೆ. ಒಮ್ಮೆ, ಪುನೀತ ಮತ್ತು ಶಾಂತ ರಾಜ್ಯ ಮಟ್ಟದಲ್ಲಿ ಶಾಲೆಯಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ಹೆಸರುಗಳನ್ನು ನೀಡಿದರು. ಶಾಂತ ತನ್ನ ಸ್ನೇಹಿತರ ಬಳಿ, "ಅವಳ ಧ್ವನಿಯನ್ನು ನೋಡಿ, ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಳಿಗೆ ಏನು ಅರ್ಹತೆ ಇದೆ?" ಎಂದು ಪುನೀತ ಜೋರಾಗಿ ಹೇಳಿದಳು. ಪುನೀತಾಳನ್ನು ಸೋಲಿಸಿ 10,000 ರೂ.ಗಳ ಪ್ರಥಮ ಬಹುಮಾನವನ್ನು ಗೆಲ್ಲುತ್ತೇನೆ ಎಂದು ಅವಳು ಹೆಮ್ಮೆಯಿಂದ ಹೇಳಿದಳು. ಆದರೆ ಪುನೀತ ಏನೂ ಹೇಳದೆ ಸದ್ದಿಲ್ಲದೆ ಹೊರಟುಹೋದಳು. ಸ್ಪರ್ಧೆಯ ದಿನದಂದು ಪ್ರಾರ್ಥಿಸಿ ದೇವರ ಪ್ರಸನ್ನತೆಯೊಂದಿಗೆ, ಹಾಡಿ ಮೊದಲ ಬಹುಮಾನವನ್ನು ಗೆದ್ದಳು. ದೇವರಿಗೆ ಏನೂ ಅಸಾಧ್ಯವಲ್ಲ. ಶಾಂತಳಿಗೆ ಸಮಾಧಾನಕರ ಬಹುಮಾನವೂ ಸಿಗಲಿಲ್ಲ. ಆತನು ಬಲಿಷ್ಠರನ್ನು ಆಸನಗಳಿಂದ ತಳ್ಳಿ ತಾಳ್ಮೆಯುಳ್ಳವರನ್ನು ಹೆಚ್ಚಿಸುವವರು ಎಂಬುದನ್ನು ಅರಿತುಕೊಂಡಳು.

 

ಸತ್ಯವೇದದಲ್ಲಿ, ಹದಿನಾರನೇ ವಯಸ್ಸಿನಲ್ಲಿ ಅರಸನಾದ ಯೆಹೂದದ ರಾಜ ಉಜ್ಜೀಯನನ್ನು ಕರ್ತನು ಉನ್ನತೀಕರಿಸಿದರು, ಏಕೆಂದರೆ ಅವರು ತನ್ನ ತಂದೆ ಅಮಚ್ಯನಂತೆ ಕರ್ತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದರು. ಅವರು ಫಿಲಿಷ್ಟಿಯರು, ಅಮ್ಮೋನಿಯರು, ಅರಬ್ಬಿಯರು ಮತ್ತು ಮೆಗೂನ್ಯರನ್ನು ಸೋಲಿಸಿದ್ದರಿಂದ ಅನೇಕ ಕಾಣಿಕೆಗಳು ಬಂದವು. ಕಣಿವೆಗಳಲ್ಲಿ ಮತ್ತು ಬಯಲು ಪ್ರದೇಶಗಳಲ್ಲಿ ಅನೇಕ ದ್ರಾಕ್ಷಿತೋಟಗಳನ್ನು ನೆಟ್ಟರು. ಅವರ ಬಳಿ ಮೂರು ಲಕ್ಷದ ಏಳು ಸಾವಿರದ ಐನೂರು ಜನರ ಸೈನ್ಯವಿತ್ತು, ಅವರು ಬಲಶಾಲಿಯಾದಾಗ ತನಗೆ ಕೇಡು ಉಂಟಾಗುವಷ್ಟು ಮಟ್ಟಿಗೆ ಅವರ ಹೃದಯವು ಅಹಂಕಾರದಿಂದ ತುಂಬಿ ಯಾಜಕರು ಅವರನ್ನು ಎಚ್ಚರಿಸಿದಾಗಲೂ, ಧೂಪಪೀಠದ ಬಳಿ ಹೆಮ್ಮೆಯಿಂದ ಧೂಪ ಕಳಶವನ್ನು ಹಿಡಿದು ನಿಂತಾಗ, ಅರಸನಾದ ಉಜ್ಜೀಯನ ಹಣೆಯ ಮೇಲೆ ಕುಷ್ಠರೋಗವು ಕಾಣಿಸಿಕೊಂಡಿತು. ಅವರು ಬೇಗನೆ ಅವನನ್ನು ಹೊರಹಾಕಿದರು. ಐವತ್ತೆರಡು ವರ್ಷಗಳ ಕಾಲ ರಾಜನೆಂದು ಪರಿಗಣಿಸಲ್ಪಟ್ಟಿದ್ದ ವ್ಯಕ್ತಿ, ಗರ್ವಪಟ್ಟ ಒಂದೇ ಕ್ಷಣದಲ್ಲಿ, ಆಲಯದಿಂದ ತೊರೆಯಲ್ಪಟ್ಟು ಒಂಟಿ ಮನೆಯಲ್ಲಿ ವಾಸಮಾಡಿದನು.

 

ಪ್ರಿಯ ದೇವ ಜನರೇ, "ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ." (1 ಪೇತ್ರ 5:5). ಮನುಷ್ಯನ ಅಹಂಕಾರವು ಅವನನ್ನು ಕೆಡವುತ್ತದೆ, ಆದರೆ ತಾಳ್ಮೆಯುಳ್ಳವನು ಉನ್ನತೀಕರಿಸಲ್ಪಡುತ್ತಾನೆ. ನಾವು ಕರ್ತನ ಮುಂದೆ ನಮ್ಮನ್ನು ತಗ್ಗಿಸಿಕೊಂಡಾಗ, ಆತನು ನಮ್ಮನ್ನು ಮೇಲಕ್ಕೆತ್ತುತ್ತಾರೆ. ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ಉನ್ನತಿಗೆ ಮೊದಲು ತಾಳ್ಮೆ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

VBS ಸೇವೆಗೆ ಅನುಕೂಲಕರ ಸಮಯ ಮತ್ತು ವಾತಾವರಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet