Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.05.2026
Share:

By Village Missionary Movement

Saturday, 16-May-2026

ಧೈನಂದಿನ ಧ್ಯಾನ(Kannada) – 16.05.2026

 

ಸಂತೋಷ

 

“...ಪರನು ತನ್ನ (ಹೃದಯದ) ಸಂತೋಷದಲ್ಲಿ ಸೇರುವದಿಲ್ಲ" - ಜ್ಞಾನೋಕ್ತಿ 14:10

 

ಒಬ್ಬ ಬೋಧಕರು ‘ದಂಪತಿಗಳಿಗಾಗಿ ಏರ್ಪಡಿಸಿದ್ದ ಸಭೆಯಲ್ಲಿ' ಮಾತನಾಡುತ್ತಿದ್ದರು. ಆಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ಮಹಿಳೆಯನ್ನು ನೋಡಿ, ನಿಮ್ಮ ಗಂಡ ನಿಮ್ಮನ್ನು ಸಂತೋಷವಾಗಿ ಇಟ್ಟುಕೊಂಡಿದ್ದಾರ? ಎಂದು ಕೇಳಿದರು. ಹೆಂಡತಿ ಇಲ್ಲ ಎಂದು ಹೇಳಿದರು. ತಕ್ಷಣ ಅವಳ ಪತಿ ಮತ್ತು ಅಲ್ಲಿದ್ದ ಎಲ್ಲರೂ ಆಘಾತದಿಂದ ನೋಡಿದರು. ಹೆಂಡತಿ ಮುಂದುವರಿಸಿದರು, ನನ್ನ ಸಂತೋಷವು ನನ್ನ ಗಂಡನ ಮೇಲೆ ಅವಲಂಬಿತವಾಗಿಲ್ಲ. ಅದು ಯಾವುದೇ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಅವಲಂಬಿತವಾಗಿದ್ದರೆ, ಬದಲಾಗುತ್ತಿರುವ ಜಗತ್ತಿನಲ್ಲಿ, ನಮ್ಮ ಸುತ್ತಲಿನ ವಿಷಯಗಳು ಬದಲಾದಾಗ, ಸಂತೋಷವೂ ಬದಲಾಗುತ್ತದೆ. ನಾನು ನನ್ನ ಯೌವನದಲ್ಲಿ ಯೇಸು ಕ್ರಿಸ್ತನಿಗೆ ನನ್ನ ಹೃದಯವನ್ನು ತೆರೆದುಕೊಟ್ಟೆ. ಆಗ ನನ್ನ ಹೃದಯವು ಸಂತೋಷದಿಂದ ತುಂಬಿತ್ತು. ಆ ದಿನದಿಂದ, ನಾನು ಯಾವಾಗಲೂ ಸಂತೋಷವಾಗಿರಲು ನಿರ್ಧರಿಸಿದ್ದೇನೆ. ಯಾವುದೇ ಸಂದರ್ಭಗಳು ಬದಲಾದರೂ, ದೇವರು ನನ್ನನ್ನು ಯಾವುದೇ ಪರಿಸ್ಥಿತಿಯಲ್ಲಿ ಇರಿಸಿದರೂ, ನಾನು ಸಂತೋಷವಾಗಿರುತ್ತೇನೆ. ಏಕೆಂದರೆ ಯೇಸು ಯಾವಾಗಲೂ ನನ್ನೊಂದಿಗಿದ್ದಾರೆ, ಎಂದು ಹೇಳಿದರು. ತಕ್ಷಣ ಸಭಾಂಗಣವು ಚಪ್ಪಾಳೆಯಿಂದ ನಡುಗಿತು. ಅರಸನಾದ ದಾವೀದನು, ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು.

 

ಆದದರಿಂದ ನನ್ನ ಹೃದಯವು ಉಲ್ಲಾಸಪಡುತ್ತದೆ ಎನ್ನುತ್ತಾರೆ. ಉನ್ನತವಾದ ಸ್ಥಿತಿಯಲ್ಲಿದ್ದರೂ, ಎಲ್ಲವನ್ನೂ ಹೊಂದಿದವನಾಗಿದ್ದರೂ ಅದರಿಂದ ಸಂತೋಷ ಎಂಬುದಲ್ಲ. ಕರ್ತನು ನನ್ನ ಬಲಪಾರ್ಶ್ವದಲ್ಲಿ ಇರುವುದೇ ನನ್ನ ಸಂತೋಷ ಎನ್ನುತ್ತಾರೆ. ಸೈನ್ಯದ ಬಲ ಇರುವುದರಿಂದ ಅಲ್ಲ, ಅವರು ನನ್ನ ಬಲಪಾರ್ಶ್ವದಲ್ಲಿ ಇರುವುದರಿಂದ ನಾನು ಕದಲುವುದಿಲ್ಲ. ಮತ್ತು ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ ಎನ್ನುತ್ತಾರೆ. ಪರಿಪೂರ್ಣ ಸಂತೋಷ ಎಂಬುದು ಉಕ್ಕಿ ಹರಿಯುವ ಸಂತೋಷವಾಗಿದೆ. ಶಾಶ್ವತ ಭಾಗ್ಯ ಎಂಬುದು ಯಾವಾಗಲೂ ನೆಲೆಗೊಂಡಿರುವಂತಹ, ಯಾರೂ ಕಸಿದುಕೊಳ್ಳಲು ಸಾಧ್ಯವಾಗದ ಸಂತೋಷವಾಗಿದೆ.

 

ಪ್ರಿಯರೇ, ಜೀವನದಲ್ಲಿ ಯಾವುದೇ ರೀತಿಯ ಸಂತೋಷ ಅಥವಾ ಉತ್ಸಾಹವಿಲ್ಲ ಎಂದು ನೀವು ದುಃಖಿಸುತ್ತಿದ್ದೀರಾ? ಹಾಗಾದರೆ ನೀವು ಯಾವುದನ್ನು ಸಂತೋಷ ಎಂದು ಪರಿಗಣಿಸುತ್ತೀರ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ನಿಮ್ಮ ಸಂತೋಷವು ಜನರು ಮತ್ತು ವಸ್ತುಗಳ ಮೇಲೆ ಅವಲಂಬಿತವಾಗಿದ್ದರೆ, ಅದು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಆದರೆ ಎಂದಿಗೂ ಬದಲಾಗದ ಮತ್ತು ನಮ್ಮನ್ನು ಎಂದಿಗೂ ಮರೆಯದ ಯೇಸು ನಮ್ಮ ಸಂತೋಷವಾಗಿದ್ದರೆ, ದಾವೀದನಂತೆ, ನಾವು ಸಿಂಹಾಸನದ ಮೇಲಿದ್ದರೂ, ಕುರಿಗಳ ಹಿಂದೆ ಇದ್ದರೂ ಅಥವಾ ಗುಹೆಯಲ್ಲಿದ್ದರೂ ನಾವು ಸಂತೋಷವಾಗಿರಬಹುದು. ಪೌಲ ಮತ್ತು ಸೀಲರಂತೆ, ಕಟ್ಟುಗಳಲ್ಲಿಯೂ, ಸೆರೆಯಲ್ಲಿಯೂ ಹಾಡಿ ಸ್ತುತಿಸಬಹುದು. ರಕ್ಷಕನಾದ ಯೇಸು ನಮ್ಮೊಳಗೆ ಇದ್ದರೆ, ಕಡಿಮೆಯಾಗದ, ನೆಲೆಯಾಗಿರುವ ಸಂತೋಷ ನಮ್ಮೊಳಗೆ ಇರುತ್ತದೆ. ಯೇಸುವನ್ನು ಗಟ್ಟಿಯಾಗಿ ಹಿಡಿದುಕೊಳ್ಳೋಣ, ಸಂತೋಷವನ್ನು ಪಡೆಯೋಣ ಕರ್ತನ ಆಶೀರ್ವಾದವನ್ನು ಪಡೆದುಕೊಳ್ಳೋಣ.

- Mrs.ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

VBS ಸೇವೆಗೆ, ಸ್ವಯಂಸೇವಕರಾಗಿ ಸೇರುವವರನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş