By Village Missionary Movement
Friday, 15-May-2026ಧೈನಂದಿನ ಧ್ಯಾನ(Kannada) – 15.05.2026
ಸುವಾರ್ತೆಯನ್ನು ಹೇಳಲು ಹಿಂಜರಿಯಬೇಡ
"ಕ್ರಿಸ್ತನ ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವದಿಲ್ಲ;..." - ರೋಮಾ 1:16
ಕಾರ್ಲೋಸ್ ಎಂಬ ವ್ಯಕ್ತಿ ಬ್ರೆಜಿಲ್‌ನಲ್ಲಿ ಮಾತಾ ಗ್ರೊಸೊ ಎಂಬ ಪಟ್ಟಣಕ್ಕೆ ಲಾರಿಯಲ್ಲಿ ಪ್ರಯಾಣಿಸಿದರು. ಲಾರಿ ಚಾಲಕ ಕಾರ್ಲೋಸ್‌ನೊಂದಿಗೆ ಮಾತನಾಡಲು ಎಷ್ಟೇ ಪ್ರಯತ್ನಿಸಿದರೂ, ಅವರು ಮೌನವಾಗಿದ್ದರು ಮತ್ತು ವಿದಾಯ ಹೇಳಿ ಹೋಗಲು ಪ್ರಯತ್ನಿಸಿದರು. ಆದರೆ ಕಾರ್ಲೋಸ್ ಇಳಿಯುವಾಗ, ಲಾರಿ ಚಾಲಕ ಅವರಿಗೆ ಒಂದು ಸಣ್ಣ ಹೊಸ ಒಡಂಬಡಿಕೆಯನ್ನು ನೀಡಿ, "ದಯವಿಟ್ಟು ನಿಮಗೆ ಸಮಯ ಸಿಕ್ಕಾಗ ಇದನ್ನು ಓದಿ" ಎಂದು ಹೇಳಿದರು. ಕಾರ್ಲೋಸ್ ಬೇಕಾಬಿಟ್ಟಿಯಾಗಿ ಅದನ್ನು ತೆಗೆದುಕೊಂಡು ಯೋಚಿಸುತ್ತಲೇ ಹೊರಟುಹೋದರು.
ಹಲವು ತಿಂಗಳುಗಳ ನಂತರ, ಲಾರಿ ಚಾಲಕ ಚರ್ಚ್‌ಗೆ ಹೋದಾಗ, ಅಲ್ಲಿ ಆಕಸ್ಮಿಕವಾಗಿ ಕಾರ್ಲೋಸ್‌ನನ್ನು ನೋಡಿದರು. ಲಾರಿ ಚಾಲಕ ಅವರ ಬಳಿ, "ನಿಮಗೆ ನಾನು ಗೊತ್ತಾ?" ಎಂದು ಕೇಳಿದರು. ಅದಕ್ಕೆ ಕಾರ್ಲೋಸ್, ಗೊತ್ತಾ ಅಂತ ಕೇಳ್ತಿದೀರ?" ನೀವು ನನಗೆ ನೀಡಿದ ಹೊಸ ಒಡಂಬಡಿಕೆಯನ್ನು ನಾನು ಸ್ವೀಕರಿಸಿದ ಆ ದಿನ, ನಾನು ಒಬ್ಬ ವ್ಯಕ್ತಿಯನ್ನು ಕೊಲ್ಲಲು ಹೊರಟಿದ್ದೆ. ನಂತರ ಯಾರೋ ನನ್ನ ಅಂಗಿಯನ್ನು ಎಳೆಯುತ್ತಿರುವಂತೆ ನನಗೆ ಅನಿಸಿತು. ನಾನು ತಿರುಗಿ ನೋಡಿದಾಗ, ನನಗೆ ಯಾರೂ ಕಾಣಲಿಲ್ಲ. ನಾನು ಆಘಾತದಿಂದ ಅಲ್ಲಿ ಕುಳಿತಿದ್ದೆ, ಆದರೆ ಸ್ವಲ್ಪ ಸಮಯದ ನಂತರ ನೀವು ನನಗೆ ನೀಡಿದ ಹೊಸ ಒಡಂಬಡಿಕೆಯನ್ನು ತೆರೆದು ಓದಲು ಪ್ರಾರಂಭಿಸಿದೆ. ನಾನು ಅದನ್ನು ಓದುತ್ತಾ, ಓದುತ್ತಾ ಆ ಮನುಷ್ಯನನ್ನು ಕೊಲ್ಲಬಾರದು ಎಂಬ ಯೋಚನೆಯೇ ನನ್ನ ನಿರ್ಧಾರವಾಗಿತ್ತು. ಈಗ ಒಂದು ಮಾನಸಾಂತರ ಹೊಂದಿದ ವ್ಯಕ್ತಿಯಾಗಿದ್ದೇನೆ ಎಂದು ಸಂತೋಷದಿಂದ ಹೇಳಿದರು.
ಪ್ರೀತಿಯ ದೇವರ ಮಕ್ಕಳೇ! ಆ ಲಾರಿ ಚಾಲಕ ನೀಡಿದ ಹೊಸ ಒಡಂಬಡಿಕೆಯಿಂದ ಆ ದಿನ ಎರಡು ಜೀವಗಳು ಉಳಿಸಲ್ಪಟ್ಟವು. ಲಾರಿ ಚಾಲಕ ಅದನ್ನು ನೀಡಲು ಹಿಂಜರಿದಿದ್ದರೆ, ಒಬ್ಬರು ಕೊಲೆಗಾರರಾಗುತ್ತಿದ್ದರು ಮತ್ತು ಇನ್ನೊಬ್ಬರು ಕೊಲ್ಲಲ್ಪಡುತ್ತಿದ್ದರು. ಆದರೆ ಈಗ ಒಬ್ಬರು ಯೇಸು ಕ್ರಿಸ್ತನಲ್ಲಿ ನಿತ್ಯ ಜೀವವನ್ನು ಪಡೆದಿದ್ದಾರೆ. ಇನ್ನೊಬ್ಬರು ಲೋಕದಲ್ಲಿ ಬದುಕಲು ಜೀವವನ್ನು ಪಡೆದಿದ್ದಾರೆ. ನಾವು ಸಹ ಸುವಾರ್ತೆಯನ್ನು ಸಾರಲು ನಾಚಿಕೆಪಡಬಾರದು. ಇದು ನಮ್ಮ ಕೆಲಸ. ನಾವು ನಮ್ಮ ಕೆಲಸವನ್ನು ಚೆನ್ನಾಗಿ ಮಾಡಿದರೆ, ಕರ್ತನು ತನ್ನ ಕೆಲಸವನ್ನು ಸಹ ಪೂರ್ಣಗೊಳಿಸುತ್ತಾರೆ. ಬೈಬಲ್ ಹೇಳುವುದು ಅದನ್ನೇ: ನನ್ನ ಬಾಯಿಂದ ಹೊರಡುವ ನನ್ನ ವಾಕ್ಯವು ನಾನು ಯಾವದನ್ನು ಮೆಚ್ಚು ತ್ತೇನೋ ಅದನ್ನು ಅದು ಮಾಡುವದು (ಯೆಶಾಯ 55:11). ಆದ್ದರಿಂದ, ನಾವು ಹಿಂಜರಿಕೆಯಿಲ್ಲದೆ ಸುವಾರ್ತೆಯನ್ನು ಸಾರೋಣ. ದಾರಿತಪ್ಪಿ ಅಳೆಯುತ್ತಿರುವವರನ್ನುಸರಿಯಾದ ಮಾರ್ಗದಲ್ಲಿ ನಡೆಸಿ ನಿತ್ಯ ಜೀವದ ದಡಕ್ಕೆ ಸೇರಿಸೋಣ.
- Mrs. ಸೆಲ್ವಾ ಬೆಂಜಮಿನ್
ಪ್ರಾರ್ಥನಾ ಅಂಶ:
VBS ಸೇವೆಗಾಗಿ ಅನೇಕ ಯೌವನಸ್ಥರು ನಮ್ಮೊಂದಿಗೆ ಸೇರಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482