By Village Missionary Movement
Thursday, 14-May-2026ಧೈನಂದಿನ ಧ್ಯಾನ(Kannada) – 14.05.2026
ಜೀವಂತವಾಗಿ ಎದ್ದರು
"ಭಕ್ತಿಯನ್ನೂ ಭಕ್ತಿಗೆ... ಪ್ರೀತಿಯನ್ನೂ ಕೂಡಿಸಿರಿ" - 2 ಪೇತ್ರ 1:7
ಹಿಟ್ಲರ್ ರಷ್ಯಾವನ್ನು ವಶಪಡಿಸಿಕೊಂಡಾಗ, ಅಲ್ಲಿದ್ದ ಎಲ್ಲಾ ಚರ್ಚುಗಳನ್ನು ಕೆಡವಿ ನೆಲಸಮ ಮಾಡಲಾಯಿತು. ಆದರೆ ಹೇಗೋ ಒಂದೇ ಒಂದು ಚರ್ಚ್ ಉಳಿದುಕೊಂಡಿತು. ಅದೇ ಸಮಯದಲ್ಲಿ, ಯೇಸುವಿನ ಪುನರುತ್ಥಾನದ ಹಬ್ಬವೂ ಬಂದಿತು. ಹಬ್ಬದ ದಿನದಂದು, ಚರ್ಚ್ ಜನರಿಂದ ತುಂಬಿತ್ತು. ಉತ್ಸಾಹದಿಂದ ಬೋಧಿಸುತ್ತಿದ್ದ ಬೋಧಕರನ್ನು ಆ ಮುಂಜಾನೆ ಬಂಧಿಸಲಾಯಿತು. ಪೊಲೀಸರು ಅವರನ್ನು ಕರೆದೊಯ್ಯುವ ಮೊದಲು, ಅವರು ತನ್ನ ಸಭೆಗೆ ಕೇವಲ ಮೂರೇ ಮೂರು ಮಾತುಗಳನ್ನು ಮಾತನಾಡಲು ಅನುಮತಿ ಕೇಳಿದರು. ಅವರು ಮೂರು ಮಾತುಗಳಿಗಿಂತ ಹೆಚ್ಚು ಮಾತನಾಡಬಾರದು ಎಂಬ ಷರತ್ತಿನ ಮೇಲೆ ಅನುಮತಿ ನೀಡಿದರು. ಬೋಧಕರು ತನ್ನ ಸಭೆಯನ್ನು ನೋಡಿ, ತನ್ನ ಧ್ವನಿಯನ್ನು ಎತ್ತಿ, "ಯೇಸು ಜೀವಂತವಾಗಿದ್ದಾರೆ, ಹಲ್ಲೇಲೂಯಾ" ಎಂದು ತನ್ನ ಎಲ್ಲಾ ಶಕ್ತಿಯಿಂದ ಸಂತೋಷದಿಂದ ಕೂಗಿದರು. ಈ ಮಾತುಗಳು ಕಿಡಿಗಳು ಮತ್ತು ಬಂದೂಕಿನಂತೆ ಭಕ್ತರ ಹೃದಯಗಳನ್ನು ಭೇದಿಸಿದವು. ಆದ್ದರಿಂದ, ಪ್ರತಿಯೊಬ್ಬ ವಿಶ್ವಾಸಿಯ ಹೃದಯದಿಂದ ಭಯ ಹೊರಹಾಕಲ್ಪಟ್ಟಿತು ಮತ್ತು ಅವರು ಧೈರ್ಯದ ಮನೋಭಾವದಿಂದ ತುಂಬಿದರು. ಅವರು "ಯೇಸು ಜೀವಂತವಾಗಿದ್ದಾರೆ, ಹಲ್ಲೇಲೂಯಾ" ಎಂದು ಕೂಗಲು ಪ್ರಾರಂಭಿಸಿದರು. ಈ ಮೂರು ಮಾತುಗಳು ಕ್ರೈಸ್ತ ಧರ್ಮವನ್ನು ನಾಶಮಾಡಲು ಬಯಸುವ ರಾಷ್ಟ್ರವನ್ನು ನಡುಗಿಸಿತು. ಈ ಮಾತುಗಳನ್ನು ಕೇಳಿದ ಪ್ರತಿಯೊಬ್ಬ ವ್ಯಕ್ತಿಯ ಹೃದಯವು ದೇವರಿಗಾಗಿ ಹೊತ್ತಿ ಉರಿಯಿತು. ಒಂದು ತಲಾಂತನ್ನು ಪಡೆದ ಮನುಷ್ಯನು ಭಯದಿಂದ ಅದನ್ನು ಹೂತುಹಾಕಿದನು. ಭಯ ಅಗತ್ಯವಾಗಿದ್ದರೂ, ಕೆಲವೊಮ್ಮೆ ಅದು ದೇವರಿಗಾಗಿ ಕೆಲಸ ಮಾಡುವುದನ್ನು ತಡೆದುಬಿಡುತ್ತದೆ. ಭಯದಲ್ಲಿ ಬದುಕುತ್ತಿದ್ದ ಅರಿಮಥಿಯಾದ ಯೋಸೇಫನಿಗೆ ಒಂದು ಅಸಾಧ್ಯವಾದ ಧೈರ್ಯ ಮತ್ತು ಉತ್ಸುಕ ಬಂದು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಕೇಳಿದನು. ಈ ಧೈರ್ಯ ಹೇಗೆ ಬಂತು? ಅದು ಯೇಸುವಿನ ಮೇಲೆ ಅವರಿಗಿದ್ದ ಪ್ರೀತಿಯೇ. ಇವರು ತನಗಾಗಿ ಇಟ್ಟುಕೊಂಡಿದ್ದ ತನ್ನ ಹೊಸ ಸಮಾಧಿಯನ್ನು ಯೇಸುವಿಗೆ ಕೊಟ್ಟರು. ಯಾವುದೇ ರೀತಿಯ ಪ್ರತಿಫಲವನ್ನು ನಿರೀಕ್ಷಿಸದೆ ತನ್ನ ಸಮಾಧಿಯನ್ನು ಯೇಸುವಿಗೆ ನೀಡಿದ ಅರಿಮಥಿಯಾದ ಯೋಸೇಫನಿಗೆ ಯೇಸು ಜೀವಂತವಾಗಿ ಎದ್ದ ನಂತರ, ಸಮಾಧಿಯು ಅವರ ಬಳಿಗೇ ಬಂತು. ನಾವು ಸಹ ನಮ್ಮದನ್ನು ಕರ್ತನಿಗೆ ಕೊಡೋಣ.
ಇದನ್ನು ಓದುತ್ತಿರುವ ಪ್ರಿಯ ದೇವರ ಮಕ್ಕಳೇ! ದೇವರು ನಮಗೆ ಅನೇಕ ತಲಾಂತುಗಳು ಮತ್ತು ಸಾಮರ್ಥ್ಯಗಳನ್ನು ನೀಡಿದ್ದಾರೆ. ನಾವು ಅವುಗಳನ್ನು ಹೇಗೆ ಬಳಸುತ್ತಿದ್ದೇವೆ? ನಮಗೆ ಅಮೂಲ್ಯವಾದದ್ದನ್ನು ದೇವರಿಗೆ ಸಂಪೂರ್ಣವಾಗಿ ಮತ್ತು ಪೂರ್ಣ ಹೃದಯದಿಂದ ನೀಡೋಣ. ಇತರರು ನಮ್ಮನ್ನು ಹೊಗಳಬೇಕು ಎಂದೋ, ಇತರರ ಬಲವಂತದಿಂದಾಗಿಯೋ ನಾವು ಕೊಡುವುದಾದರೆ, ಅದರಲ್ಲಿ ಯಾವುದೇ ಪ್ರಯೋಜನವಿಲ್ಲ. ಅದನ್ನು ದೇವರ ಲೆಕ್ಕದಲ್ಲಿ ಎಣಿಸಲಾಗುವುದಿಲ್ಲ. ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಧರಿಸಿದಂತೆ ನೀಡಲಿ, ಇಷ್ಟವಿಲ್ಲದೆ ಅಥವಾ ಬಲವಂತದಿಂದ ಅಲ್ಲ. ದೇವರು ಸಂತೋಷವಾಗಿ ಕೊಡುವವರನ್ನು ಪ್ರೀತಿಸುತ್ತಾರೆ.
- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್
ಪ್ರಾರ್ಥನಾ ಅಂಶ:
VBS ಸೇವೆಗಾಗಿ ಪ್ರಾರ್ಥಿಸುವ, ಕೊಡುವ ಮನೆಯನ್ನು ತೆರೆದುಕೊಡುವ ವ್ಯಕ್ತಿಗಳ ಎಲ್ಲೆಗಳನ್ನು ದೇವರು ವಿಸ್ತರಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482