Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.06.2021
Share:

By Village Missionary Movement

Tuesday, 22-Jun-2021

ಧೈನಂದಿನ ಧ್ಯಾನ(Kannada) – 22.06.2021

 

“ಬರುವಾತನು ಇನ್ನು ಸ್ಪಲ್ಪಕಾಲದಲ್ಲಿ ಬರುವನು, ತಡಮಾಡುವದಿಲ್ಲ” - ಇಬ್ರಿಯರಿಗೆ 10:37

 

ನರಕದಲ್ಲಿ ಸೈತಾನನ ಕೂಟದ ಸಮ್ಮೇಳನ ಒಂದು ನಡೆಯುತ್ತಿತ್ತು. ಅದರಲ್ಲಿ ಜನರು ರಕ್ಷಣೆಯ ಮಾರ್ಗದಲ್ಲಿ ನಡೆಯದಂತೆ ತಡೆ ಮಾಡುವುದು ಹೇಗೆ ಎಂದು ಯೋಜನೆಯನ್ನು ಹಾಕಲಾಯಿತು. ಮೊದಲನೆಯ ಸಾಲಿನಲ್ಲಿ ಕುಳಿತಿರುವ ಸೈತಾನನು ಈ ವಿಧವಾಗಿ ಹೇಳಿದ್ದು ಮೊದಲಿಗೆ ದೇವರೇ ಇಲ್ಲ ಎಂಬ ಸಂದೇಶವನ್ನು ನಾವು ಎಲ್ಲರಿಗೂ ಹೇಳೋಣ ಎಂದಿತು. ಉಳಿದೆಲ್ಲರೂ ಅದಕ್ಕೆ ಇದನ್ನು ಮೊದಲಿನಿಂದಲೂ ಬಹಳ ಜನರು ಹೇಳುತ್ತಿರುವ ಹಳೆಯ ಕಾರ್ಯವೇ ಹೊಸ ಸಂದೇಶವಲ್ಲ ಎಂದವು. ಇನ್ನೊಂದು ಸೈತಾನ ನರಕವೇ ಇಲ್ಲ ಎಂಬ ಸಂದೇಶವನ್ನು ಕಳುಹಿಸೋಣವ ಎಂದಿತು ಅದಕ್ಕೆ ಉಳಿದವುಗಳು ಹಾಗಾದರೆ ಪರಲೋಕದ ಬಗ್ಗೆ ಜನರು ಆಲೋಚಿಸುತ್ತಾ ಇರುತ್ತಾರೆ ಅಲ್ಲವೇ!!! ಆದ್ದರಿಂದ ಇದು ಸರಿಯಾದದ್ದಲ್ಲ ಎಂದವು. ಇನ್ನೊಂದು ಸೈತಾನ ಯೇಸುಕ್ರಿಸ್ತನು ಮತ್ತೆ ಬರುವುದಕ್ಕೆ ಆಲಸ್ಯವಾಗುತ್ತದೆ ಎಂಬ ಸಂದೇಶವನ್ನು ಪ್ರಜೆಗಳಲ್ಲಿ ಹಬ್ಬವಂತೆ ಮಾಡೋಣವಾ.. ಎಂದು ಕೇಳಿತು ಅದಕ್ಕೆ ಉಳಿದವೆಲ್ಲ ಹೌದು ಇದು ಕ್ರೈಸ್ತರಿಗೆ ಇಷ್ಟವಾದ ಸಂದೇಶ ಎಂದು ಎಲ್ಲಾ ಸೈತಾನಗಳು ಅಂಗೀಕರಿಸಿದವು.

 

ಲೋಕದ ಅಂತ್ಯವು ಸಮೀಪವಾಗಿರುವ ಈ ಕಾಲದಲ್ಲಿ ಯಾವ ಕ್ಷಣವಾದರೂ ಕ್ರಿಸ್ತನ ಬರೋಣ ಇರಬಹುದು ಎಂದು ಅನೇಕರು ನಂಬಿದ್ದರೂ ಇನ್ನು ಕೆಲವರು ಆ ನಂಬಿಕೆಯೇ ಇಲ್ಲದೆ ಇದ್ದಾರೆ. ಮನುಷ್ಯನು ದೇವರ ಬರೋಣವನ್ನು ನಂಬಿದರೂ ನಂಬದೇ ಹೋದರು ಅದು ಖಂಡಿತವಾಗಿ ನೆರವೇರುತ್ತದೆ. ಇದೋ ನ್ಯಾಯಾಧಿಪತಿಯು ಬಾಗಿಲ ಹತ್ತಿರದಲ್ಲೇ ನಿಂತಿದ್ದಾರೆ (ಯಾಕೋಬ 5:9)ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; (1 ಪೇತ್ರನು 4:7) ಎಂಬ ವಾಕ್ಯಗಳು ಆತನ ಬರೋಣ ಆಲಸ್ಯವಾಗುವುದಿಲ್ಲ ಎಂಬುದನ್ನು ನಮ್ಮ ಹೃದಯದಲ್ಲಿ ನಮಗೆ ನೆನಪಿಸುತ್ತಾ ಇದೆ. ನಾವು ನಮ್ಮ ನಡೆಯಲ್ಲಿಯೂ, ಪ್ರವರ್ತನೆ ಯಲ್ಲಿ ಎಲ್ಲದರಲ್ಲಿಯು ಪರಿಶುದ್ಧರಾಗಿ ಕ್ರಿಸ್ತನನ್ನು ಎದುರುಗೊಳ್ಳುವದಕ್ಕೆ ಸಿದ್ಧರಾಗಿ ಕಾಣಿಸಬೇಕು.ಲೋಕದಲ್ಲಿ ನಾವು ಮಾಡಬೇಕಾದ ಜವಾಬ್ದಾರಿಯುಳ್ಳ ಕಾರ್ಯಗಳು ಯಾವುದೇ ಆದರೂ, ಸೇವೆ ಅಥವಾ ಕೆಲಸವೊ ಅದನ್ನು ಚುರುಕಾಗಿಯು ಯತಾರ್ಥವಾಗಿಯೂ ನೆರವೇರಿಸುವುದಕ್ಕೆ ನಾವು ಮುಂದೆ ಬರಬೇಕು.

 

ಪ್ರಿಯರೇ!! ನಮ್ಮ ಮನೆಗೆ ನಾಳೆ ಒಂದು ನೆಂಟರು ಬರುತ್ತಿದ್ದಾರೆ ಅಂದರೆ, ಮನೆಯನ್ನು ಸ್ವಚ್ಛವಾಗಿ ಸರಿ ಮಾಡುತ್ತೇವೆ. ನಾಳೆ ಅಡಿಗೆಗೆ ಅವಶ್ಯವಾದ ಎಲ್ಲವನ್ನು ತಂದು ಇಟ್ಟುಕೊಳ್ಳುತ್ತೇವೆ. ನಿಜವಾಗಿಯೂ ನಾನು ಬೇಗನೆ ಬರುತ್ತಿದ್ದೇನೆ (ಪ್ರಕಟಣೆ 22:20) ಎಂದು ಹೇಳಿದ ಯೇಸುಕ್ರಿಸ್ತನನ್ನು ಎದುರುಗೊಳ್ಳುವದಕ್ಕೆ ನಮಗೆ ಸಿದ್ಧತೆ ಎಷ್ಟರಮಟ್ಟಿಗಿದೆ??? ಆಲೋಚಿಸೋಣ. ದೇವರ ಬರೋಣ ಆಲಸ್ಯ ವಾಗುತ್ತದೆ ಎನ್ನುವುದು ಸೈತಾನನ ತಂತ್ರ. ಆದ್ದರಿಂದ ಯಾವಾಗಲೂ ನಮ್ಮ ನಡುವನ್ನು ಕಟ್ಟಿಕೊಂಡು ಸಿದ್ಧವಾಗಿ ನಾವು ಉರಿಯುತ್ತಿದ್ದು ಯಜಮಾನನ ಬರೋಣಕ್ಕಾಗಿ ಸಿದ್ಧವಾಗಿ ಕಾದಿರೋಣ. ದೇವರ ತುತ್ತೂರಿ ಶಬ್ಧ ಕೇಳಿದಾಗ ಮಧ್ಯಾಕಾಶದಲ್ಲಿ ಆತನನ್ನು ಎದುರುಗೊಳ್ಳುವದಕ್ಕೆ ಹೋಗಿ ಯುಗಯುಗಗಳು, ತರತರಗಳು ಆತನೊಂದಿಗೆ ಜೀವಿಸೋಣ.

- ಕೆ. ಮಣಿ ಮೊಲಿ

 

ಪ್ರಾರ್ಥನಾ ಅಂಶ:-

ಇನ್ನೂ ನಮ್ಮ ಸೇವೆಗಾಗಿ ಭಾರವಾಗಿ ಪ್ರಾರ್ಥಿಸುವ, ಧಾರಾಳವಾಗಿ ಕಾಣಿಕೆಯನ್ನು ಕೊಡುವ ಬೆಂಬಲಿಗರನ್ನು ದೇವರು ದಯಪಾಲಿಸುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet