Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.05.2026
Share:

By Village Missionary Movement

Wednesday, 13-May-2026

ಧೈನಂದಿನ ಧ್ಯಾನ(Kannada) – 13.05.2026

 

“ನನ್ನ ಸೇವಕನಾದ ಮೋಶೆ... ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನು." - ಅರಣ್ಯಕಾಂಡ 12:7 

 

“ದೇವರು ನಿನ್ನನ್ನು ತನ್ನ ಸೇವಕನನ್ನಾಗಿ ಕರೆದರೆ, ನೀನು ರಾಜನಾಗಲು ನಿನ್ನ ಕರವನ್ನು ತಗ್ಗಿಸಬೇಡ” ಎಂದು ದೇವರ ಮನುಷ್ಯ, ಸಿ.ಎಚ್. ಸ್ಪರ್ಜನ್ ಹೇಳುತ್ತಾರೆ. ಅವರು ಪ್ರಸಿದ್ಧ ಇಂಗ್ಲಿಷ್ ಬ್ಯಾಪ್ಟಿಸ್ಟ್ ಧರ್ಮೋಪದೇಶಕ. ಅವರನ್ನು “ಪ್ರವಚನಕಾರರ ರಾಜಕುಮಾರ” ಎಂದು ವ್ಯಾಪಕವಾಗಿ ಕರೆಯಲಾಗುತ್ತದೆ. ಅವರ ಧರ್ಮೋಪದೇಶಗಳು ಮತ್ತು ಬರಹಗಳು ಇಂದಿಗೂ ಬಹಳ ಜನಪ್ರಿಯವಾಗಿವೆ. ದೇವರ ಕರೆ ಈ ಲೋಕದ ರಾಜ ಮಹಿಮೆಗಿಂತ ಹಲವು ಪಟ್ಟು ಉತ್ತಮವಾಗಿದೆ. ಬಹುಶಃ ನಮ್ಮ ಶ್ರಮದಿಂದ ರಾಜ ಮಹಿಮೆಯನ್ನು ಪಡೆಯಬಹುದು. ಆದರೆ ಉನ್ನತ ದೇವರ ಕರೆ ಅದಕ್ಕಿಂತಲೂ ಹೆಚ್ಚಿನದು. ಆ ಕರೆಯ ನಿಜವಾದ ಶ್ರೇಷ್ಠತೆಯು ಈ ಭೂಲೋಕದ ಜೀವನದಲ್ಲಿ ನಮಗೆ ಸಿಗುವ ಉನ್ನತಿಯಲ್ಲಿ ಅಡಗಿಲ್ಲ; ದೇವರ ದರ್ಶನಕ್ಕೆ ವಿಧೇಯರಾಗಿ ಅದಕ್ಕೆ ನಂಬಿಗಸ್ತರಾಗಿರುವುದರಲ್ಲೇ ಇದೆ. 

 

ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತ ಸಾತ್ವಿಕನಾಗಿದ್ದನು. ಮೋಶೆಯನ್ನು ಕರೆದಾತನು ನಂಬಿಗಸ್ತನಾಗಿದ್ದನು. ಕರ್ತನು ಮೋಶೆಯ ಬಗ್ಗೆ ಹೇಳುವಾಗ, “ನನ್ನ ಸೇವಕನಾದ ಮೋಶೆಯು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಾನೆ. ನಾನು ಅವನೊಂದಿಗೆ ರಹಸ್ಯವಾಗಿ ಮಾತನಾಡುವುದಿಲ್ಲ, ಮುಖಾಮುಖಿಯಾಗಿಯು ಪ್ರತ್ಯಕ್ಷವಾಗಿಯೂ ಮಾತನಾಡುತ್ತೇನೆ. ಅವನು ಕರ್ತನ ಪ್ರತಿರೂಪವನ್ನು ನೋಡುತ್ತಾನೆ ಎಂದರು. ಆದ್ದರಿಂದ ಮೋಶೆಯು ದೇವರ ಸಹಾಯದಿಂದ ದೊಡ್ಡ ಕಾರ್ಯಗಳನ್ನು ಮಾಡಿದರು. ನಂಬಿಗಸ್ತನಾಗಿರುವುದುಅಷ್ಟು ಸುಲಭವಲ್ಲ. ಅನೇಕ ಅವಮಾನಗಳು, ನಿಂದೆಗಳು ಮತ್ತು ಅಪಹಾಸ್ಯಗಳನ್ನು ಸಹಿಸಬೇಕಾಗುತ್ತದೆ. ಆದರೆ ಸತ್ಯವೇದದಲ್ಲಿ ಬರೆಯಲ್ಪಟ್ಟಂತೆ, ನಂಬಿಗಸ್ತನಾದ ಮನುಷ್ಯನು ಪರಿಪೂರ್ಣವಾದ ಆಶೀರ್ವಾದಗಳನ್ನು ಖಂಡಿತವಾಗಿಯೂ ಎಲ್ಲಾ ಕ್ಷೇತ್ರಗಳಲ್ಲಿಯೂ ಪಡೆಯುತ್ತಾನೆ. ಅದನ್ನು ತಡೆದು ನಿಲ್ಲಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಕರ್ತನು ಬಯಸುವ ಗುಣಲಕ್ಷಣಗಳಲ್ಲಿ ಪ್ರಮುಖವಾದದ್ದು ನಂಬಿಗಸ್ಥಿಕೆ ಮತ್ತು ಉತ್ತಮತ್ವ.

 

ದೇವರು ಡೇವಿಡ್ ಗಣೇಶನ್ ಅಣ್ಣನವರನ್ನು ಕರೆದು, ಅವರಿಗೆ ಹೊಸ ಜೀವವನ್ನು ಕೊಟ್ಟು ತನ್ನ ಕರೆಯುವಿಕೆಯಲ್ಲಿ ನಂಬಿಗಸ್ತರಾಗಿರುತ್ತಾರೆ ಎಂದು ಗ್ರಾಮ ಮಿಷನರಿ ಚಳುವಳಿಯನ್ನು ನೀಡಿದ್ದಾರೆ. ಏಳು ಸಾವಿರ ಮಿಷನರಿಗಳು, ಒಂದು ಲಕ್ಷ ಹಳ್ಳಿಗಳು ಎಂಬ ಯೋಜನೆಯನ್ನು ಪೂರೈಸಲು, ದೇವರ ಕಣ್ಣೀರನ್ನು ಒರೆಸಲು, ಏಕೈಕ ದರ್ಶನವುಳ್ಳ ಪೂರ್ಣ ಸಮಯದ ಸೇವಕರನ್ನು ಹಲವು ವಿಧವಾದ ಪರಿಸ್ಥಿತಿಗಳಿಂದ ಕರೆತಂದು ಸೇವೆಯಲ್ಲಿ ಜೊತೆಗೂಡಿಸಿದ್ದಾರೆ. 

 

ನಾವು ದೇವರ ಕರೆಯುವಿಕೆಯನ್ನು ಪೂರ್ಣ ಹೃದಯದಿಂದ ಸ್ವೀಕರಿಸಿ ನಿಷ್ಠೆಯಿಂದ ಸೇವೆ ಮಾಡಿದರೆ, ನಿಗದಿತ ಗುರಿಯನ್ನು ಸಾಧಿಸುವುದು ಸುಲಭವಾಗುತ್ತದೆ. ಆದ್ದರಿಂದ, ನಾವು ನಂಬಿಗಸ್ತರಾಗಿ ಆತನ ಮೇಲೆ ಅವಲಂಬಿತರಾಗಿ ಪ್ರಪಂಚದಾದ್ಯಂತ ಸುವಾರ್ತೆಯನ್ನು ಸಾರಲು ನಮ್ಮ ಪಾಲು ನೀಡೋಣ. ಪರಿಪೂರ್ಣವಾದ ಆಶೀರ್ವಾದಗಳನ್ನು ಪಡೆಯೋಣ.

- Bro.I. ಜಯಪಾಲ್

 

ಪ್ರಾರ್ಥನಾ ಅಂಶ:

VBS ಸೇವೆಗಳಿಗಾಗಿ ಪ್ರಾರ್ಥಿಸುವ ಪ್ರಾರ್ಥನಾ ಗುಂಪುಗಳು, ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino