Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.05.2026
Share:

By Village Missionary Movement

Tuesday, 12-May-2026

ಧೈನಂದಿನ ಧ್ಯಾನ(Kannada) – 12.05.2026

 

ಕ್ರಿಸ್ತನನ್ನು ಪ್ರತಿಬಿಂಬಿಸುವ ಜೀವನ 

 

“..ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ" - ಮತ್ತಾ. 5:16

 

ಫ್ಲಾರೆನ್ಸ್ ನೈಟಿಂಗೇಲ್ ಮೇ 12, 1820 ರಂದು ಇಟಲಿಯ ಫ್ಲಾರೆನ್ಸ್‌ನಲ್ಲಿ ಜನಿಸಿದರು. 'ದಿ ಲೇಡಿ ವಿತ್ ದಿ ಲ್ಯಾಂಪ್' ಎಂದು ಕರೆಯಲ್ಪಡುವ ಅವರು ಇಂಗ್ಲಿಷ್ ಮೂಲದ ಶ್ರೀಮಂತ ಮತ್ತು ಪ್ರಭಾವಶಾಲಿ ಮಹಿಳೆ. ಸುಂದರ, ಬುದ್ಧಿವಂತ ಮತ್ತು ಕರುಣಾಮಯಿ, ಫ್ಲಾರೆನ್ಸ್ ಅವರ ತಂದೆಯ ನೆಚ್ಚಿನ ಮಗಳು. ತನ್ನ ಸ್ಥಳೀಯ ಇಂಗ್ಲಿಷ್ ಜೊತೆಗೆ, ಲ್ಯಾಟಿನ್, ಗ್ರೀಕ್, ಜರ್ಮನ್, ಇಟಾಲಿಯನ್ ಮತ್ತು ಫ್ರೆಂಚ್ ಭಾಷೆಗಳಲ್ಲಿಯೂ ಅವರು ಪ್ರವೀಣರಾಗಿದ್ದರು. ಇತರರಿಗೆ ಸಹಾಯ ಮಾಡುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿದ್ದ ಫ್ಲಾರೆನ್ಸ್, ನರ್ಸ್ ಆಗಿ ತರಬೇತಿ ಪಡೆದು ಬಡವರಿಗೆ ಸಹಾಯ ಮಾಡಲು ಬಯಸಿದ್ದರು. 16 ನೇ ವಯಸ್ಸಿನಲ್ಲಿ, ಜರ್ಮನಿಯಲ್ಲಿ ಓದಿ, ನಂತರ ಲಂಡನ್‌ನಲ್ಲಿ ಹಲವು ವರ್ಷಗಳ ಕಾಲ ನರ್ಸಿಂಗ್ ಮೇಲ್ವಿಚಾರಕರಾಗಿ ಕೆಲಸ ಮಾಡಿದರು. 1854 ರಲ್ಲಿ ಯುರೋಪಿನಲ್ಲಿ ಭುಗಿಲೆದ್ದ ಯುದ್ಧದಲ್ಲಿ, ಅಸಂಖ್ಯಾತ ಜನರು ಗಾಯಗೊಂಡು ಸತ್ತರು. ದೇವರ ಪ್ರೀತಿಯಿಂದ ತುಂಬಿದ್ದ ಫ್ಲಾರೆನ್ಸ್, ಹಗಲು ರಾತ್ರಿ ನಿಸ್ವಾರ್ಥವಾಗಿ ಗಾಯಗೊಂಡ ಜನರಿಗೆ ಸಹಾಯ ಮಾಡಿದರು. ಅವರ ಸೇವೆಯನ್ನು ಮೆಚ್ಚಿ, ರಾಣಿ ವಿಕ್ಟೋರಿಯಾ ಅವರಿಗೆ ರಾಯಲ್ ರೆಡ್ ಕ್ರಾಸ್ ಪ್ರಶಸ್ತಿ ನೀಡಿ ಗೌರವಿಸಿದರು. ಸರಳವಾಗಿ ಬದುಕುತ್ತಿದ್ದ ಫ್ಲಾರೆನ್ಸ್, ತಮಗೆ ದೊರೆತ ಬಹುಮಾನದ ಹಣದಿಂದ ನರ್ಸಿಂಗ್ ಶಾಲೆಯನ್ನು ಪ್ರಾರಂಭಿಸಿದರು. ಅವರು ಬರೆದ "ದಾದಿಯರ ಕರ್ತವ್ಯ" ಎಂಬ ಪುಸ್ತಕವು ಇನ್ನೂ ದಾದಿಯರಿಗೆ ಪಠ್ಯಪುಸ್ತಕವಾಗಿ ಬಳಕೆಯಲ್ಲಿದೆ. ಅವರು 90 ನೇ ವಯಸ್ಸಿನಲ್ಲಿ ನಿಧನರಾದರು. ನಾವು ಅವರ ಜನ್ಮದಿನವಾದ ಮೇ 12 ಅನ್ನು ವಿಶ್ವ ದಾದಿಯರ ದಿನವನ್ನಾಗಿ ಆಚರಿಸುತ್ತಿದ್ದೇವೆ. 

 

ಮತ್ತಾಯ 5 ನೇ ಅಧ್ಯಾಯದಲ್ಲಿ 'ನೀವು ಭೂಮಿಗೆ ಉಪ್ಪಾಗಿದ್ದೀರಿ' 'ನೀವು ಲೋಕಕ್ಕೆ ಬೆಳಕಾಗಿದ್ದೀರಿ' ಎಂದು ಯೇಸುಕ್ರಿಸ್ತನು ಹೇಳುವ ಪ್ರಕಾರ, ನಾವು ಸಹ ನಮ್ಮ ಸುತ್ತಲಿನ ಜನರ ಜೀವನದಿಂದ ಕತ್ತಲೆಯನ್ನು ತೆಗೆದುಹಾಕಿ ಅವರ ಜೀವನವನ್ನು ಬೆಳಗಿಸುವವರಾಗಿರಬೇಕು. ನಿಮ್ಮ ಬೆಳಕು ಮನುಷ್ಯರ ಮುಂದೆ ಬೆಳಗಲಿ, ಆಗ ಅವರು ನಿಮ್ಮ ಒಳ್ಳೆಯ ಕಾರ್ಯಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುತ್ತಾರೆ.

 

ಕರ್ತನಾದ ಯೇಸು ಕ್ರಿಸ್ತನು ಭೂಲೋಕದಲ್ಲೆಲ್ಲಾ ಒಳ್ಳೆಯದನ್ನು ಮಾಡುತ್ತಾ, ಮನಮರುಗುತ್ತಾ, ಜನರ ಅಗತ್ಯಗಳನ್ನು ಪೂರೈಸುತ್ತಾ ಬದುಕಿತೋರಿಸಿದರು. ಕತ್ತಲೆಯಲ್ಲಿರುವವರಿಗೆ ಅವರು ಬೆಳಕಾಗಿದ್ದರು. ನಮ್ಮ ಜೀವನವೂ ಸಹ ತಂದೆಯನ್ನು ಮಹಿಮೆಪಡಿಸುವಂತದ್ದಾಗಿ ಇರಬೇಕು. ಸತ್ತ ನಂತರವೂ ಮಹಿಮೆಯಾಗಿ ಮಾತನಾಡಡುವ ಫ್ಲಾರೆನ್ಸ್‌ನಂತೆ ಬದುಕಲು ದೇವರು ನಮಗೆ ಸಹಾಯ ಮಾಡಲಿ! ನನ್ನ ಪ್ರಿಯ ಸ್ನೇಹಿತರೇ, ದೇವರ ಪ್ರೀತಿಯಿಂದ ತುಂಬಿದ, ಇತರರ ಯೋಗಕ್ಷೇಮವನ್ನು ಕಾಳಜಿ ವಹಿಸುವ ಮತ್ತು ದೈವಿಕ ಸ್ವಭಾವಗಳನ್ನು ಹೊಂದಿರುವ ಜನರಾಗಿ ಬದುಕಲು ದೇವರು ನಮಗೆ ಕೃಪೆಯನ್ನು ಅನುಗ್ರಹಿಸಲಿ! 

- Mrs. ಸರೋಜಾ ಮೋಹನ್ ದಾಸ್

 

ಪ್ರಾರ್ಥನಾ ಅಂಶ:

VBS ಸೇವೆಗಾಗಿ ಸ್ವಯಂಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino