By Village Missionary Movement
Sunday, 10-May-2026ಧೈನಂದಿನ ಧ್ಯಾನ(Kannada) – 10.05.2026 (Kids Special)
ಮಾದರಿಯಾಗಿರು
“ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ." - ಯೋಹಾನ 13:15
ಹಲೋ ಪುಟಾಣಿಗಳೇ, ಕ್ರೀಡೆ ಎಂದರೆ ನಿಮಗೆ ತುಂಬಾ ಇಷ್ಟ ಅಲ್ವಾ? ರಜೆ ಕೊಟ್ರೆ ಸಾಕು ನಿಮ್ಮನ್ನ ಕೈಯಲ್ಲಿ ಹಿಡಿಯೋಕೆ ಆಗೋದಿಲ್ಲ ತಾನೇ! ನೀವು ಯಾವ ಕ್ರೀಡೆಯನ್ನು ಆಡಲು ಇಷ್ಟಪಡುತ್ತೀರಿ ಎಂದು ಕೇಳಿದರೆ, ನಿಮ್ಮಲ್ಲಿ ಹೆಚ್ಚಿನವರು ಕ್ರಿಕೆಟ್ ಎಂದು ಹೇಳುತ್ತೀರಿ. ನಿಮ್ಮಂತೆಯೇ, ಕುಮಾರ್ ಕೂಡ ಕ್ರಿಕೆಟ್ ಅಂದ್ರೆ ಹುಚ್ಚನಾಗಿದ್ದನು. ಅಷ್ಟೇ ಅಲ್ಲ, ಅವನು ಓದುವುದರಲ್ಲಿ, ಚರ್ಚ್‌ಗೆ ಹೋಗುವುದರಲ್ಲಿ ಮತ್ತು ಪ್ರಾರ್ಥನೆಯಲ್ಲಿ ಶ್ರೇಷ್ಠನಾಗಿದ್ದನು.
ಒಂದು ದಿನ, ಕುಮಾರ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೋದನು. ಅವರು ಸಂತೋಷದಿಂದ ಆಟವಾಡುತ್ತಿರುವಾಗ, 'ಡಮಾರ್' ಎಂಬ ದೊಡ್ಡ ಶಬ್ದ ಕೇಳಿಸಿತು. ಅವನು ತಿರುಗಿ ನೋಡಿದಾಗ, ಇವರು ಹೊಡೆದ ಚೆಂಡು ಪಕ್ಕದ ಮನೆಯ ಕಿಟಕಿಗೆ ಬಡಿದು ಕಿಟಕಿ ಗಾಜು ಒಡೆದುಹೋಯ್ತು. ಆಟವಾಡುತ್ತಿದ್ದ ಎಲ್ಲರು ಕುಮಾರ್ ಕಿಟಕಿ ಗಾಜು ಹೊಡೆದು ಹಾಕ್ಬಿಟ್ಟ ಎಂದು ಅವನ ಮೇಲೆ ಆರೋಪ ಹೊರಿಸಿ ಮನೆಗೆ ಹೋಗಿಬಿಟ್ಟರು. ಆದರೆ ಇವನು ಒಬ್ಬಂಟಿಯಾಗಿ ಅಳುತ್ತಾ ಆ ಮನೆಯ ಕಡೆಗೆ ನಡೆದನು. ಆ ಮನೆಯ ಬಾಗಿಲಲ್ಲಿ ದಪ್ಪವಾಗಿದ್ದ, ಎತ್ತರವಾದ ವ್ಯಕ್ತಿಯೊಬ್ಬರು ನಿಂತಿದ್ದರು. ಇವನಿಗೆ ಅವರನ್ನು ನೋಡುವುದಕ್ಕೇ ಭಯವಾಗುತ್ತಿತ್ತು. ಆದರೂ ಅಳುತ್ತಾ ಅವರ ಬಳಿಗೆ ಹೋಗಿ, "sorry uncle, ನಾವೇ ನಿಮ್ಮ ಮನೆಯ ಕಿಟಕಿಯನ್ನು ಒಡೆದುಹಾಕಿದ್ದು. ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಿ" ಎಂದು ಬೇಡಿಕೊಂಡನು. ಕಿಟಕಿ ರೆಡಿ ಮಾಡಲು ಆಗುವ ಖರ್ಚನ್ನು ನನ್ನ ತಂದೆಯ ಬಳಿ ಹೇಳಿ ಕೊಟ್ಟು ಬಿಡುತ್ತೇನೆ ಎಂದು ಹೇಳಿದನು. ಆ uncle ಕುಮಾರ್ ನನ್ನು ನೋಡಿ ಅಳಬೇಡ ತಮ್ಮಾ!" ಎಂದರು. ನಿನ್ನೊಂದಿಗೆ ಬಂದವರೆಲ್ಲರೂ ತಮ್ಮ ತಪ್ಪನ್ನು ಅರಿತುಕೊಳ್ಳದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ನೀನು ಮಾತ್ರ ಮಾಡಿದ ತಪ್ಪಿಗೆ ಕ್ಷಮೆಯಾಚಿಸಲು ಬಂದಿದ್ದೀಯ. "ನಿನ್ನ ಒಳ್ಳೆಯ ಗುಣವನ್ನು ನಾನು ಮೆಚ್ಚುತ್ತೇನೆ" ಎಂದು ಹೇಳಿ ಮನೆಯೊಳಗೆ ಹೋಗಿ, ಒಂದು ದೊಡ್ಡ ಚಾಕೊಲೇಟ್ ತಂದು ಅವನ ಕೈಯಲ್ಲಿಟ್ಟು ಕಳುಹಿಸಿದರು. ಇವನು ಕೂಡ ಸಂತೋಷದಿಂದ ಮನೆಯ ಕಡೆಗೆ ನಡೆಯುತ್ತಿದ್ದನು. ಆ ಸಮಯದಲ್ಲಿ, ನಡೆದ ಎಲ್ಲವನ್ನೂ ನೋಡುತ್ತಿದ್ದ ಒಬ್ಬ ವಯಸ್ಸಾದವರು ಕುಮಾರ್ ನನ್ನು ಕರೆದು, ನೀನು ಯಾರು? ನಿನ್ನ ಹೆಸರೇನು? ನಿನಗೆ ಇಷ್ಟೊಂದು ಒಳ್ಳೆಯ ಗುಣಗಳು ಹೇಗೆ ಬಂದವು?" ಎಂದು ಕೇಳಿದರು. ಅವನು, ನಾನೊಬ್ಬ ಕ್ರೈಸ್ತ ಹುಡುಗ ಎಂದು ಹೇಳಿ ಕ್ರಿಸ್ತನ ಪ್ರೀತಿಯ ಬಗ್ಗೆಯೂ ಹೇಳಿದನು. ಅದನ್ನು ಕೇಳುತಿದ್ದ ಆ ವಯಸ್ಸಾದವರ ಹೃದಯದಲ್ಲಿ, ನಾನು ಇಷ್ಟು ವರ್ಷಗಳ ಕಾಲ ಕ್ರೈಸ್ತನಾಗಿದ್ದರೂ ನನ್ನಲ್ಲಿ ಇಂತಹ ಒಳ್ಳೆಯ ಗುಣಗಳಿಲ್ಲವಲ್ಲ ಎಂದು ದುಃಖ ಪಟ್ಟರು.
ಪ್ರೀತಿಯ ತಮ್ಮ ತಂಗಿ ನೀವು ಹೇಗೆ? ಈ kumar ನ ಹಾಗೆ ಮಾಡಿದ ತಪ್ಪುಗಳನ್ನು ಮರೆಮಾಡದೆ, ಕ್ಷಮೆಯಾಚಿಸಿ ಇತರರಿಗೆ ಮಾದರಿಯಾಗಿ ಜೀವಿಸಿ ಮತ್ತೊಬ್ಬರನ್ನು ಕ್ರಿಸ್ತನ ಕಡೆಗೆ ಕರೆದೊಯ್ಯುತ್ತೀರಾ?
ಯೇಸುವಿನಂತೆ ಮಾದರಿಯಾಗಿರು.
- Mrs.ಜೀವಾ ವಿಜಯ್ ಕುಮಾರ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482