Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.05.2026
Share:

By Village Missionary Movement

Friday, 08-May-2026

ಧೈನಂದಿನ ಧ್ಯಾನ(Kannada) – 08.05.2026

 

ಪ್ರೀತಿಯ ಸ್ನೇಹಿತ

 

"ಸ್ನೇಹಿತನು ಎಲ್ಲಾ ಸಮ ಯಗಳಲ್ಲಿ ಪ್ರೀತಿಸುತ್ತಾನೆ;..." - ಜ್ಞಾನೋಕ್ತಿ 17:17

 

ನಾವು ಹೊಂದಿರುವ ಆಶೀರ್ವಾದಗಳಲ್ಲಿ ನಮ್ಮ ಸಂಬಂಧಗಳು ಮತ್ತು ಸ್ನೇಹಿತರು ಒಳಪಟ್ಟಿದ್ದಾರೆ. ಸಂಬಂಧಗಳು ಮಾನವ ಜೀವನದ ಬೇರುಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಸೇತುವೆ. ನಿಜವಾದ ಸ್ನೇಹಿತರು ಕಷ್ಟ ಅಥವಾ ನಷ್ಟದಲ್ಲಿ ಎಲ್ಲಾ ಸಮಯದಲ್ಲೂ ನಮ್ಮೊಂದಿಗೆ ನಿಲ್ಲುತ್ತಾರೆ. ನಾವು ಕಷ್ಟಕರ ಸಂದರ್ಭಗಳನ್ನು ಎದುರಿಸುವಾಗ, ನಮಗೆ ದೈವಿಕ ಸ್ನೇಹಿತರಿದ್ದರೆ, ಅವರು ನಮಗಾಗಿ ಪ್ರಾರ್ಥಿಸುತ್ತಾರೆ ಮತ್ತು ದೇವರ ವಾಕ್ಯಗಳೊಂದಿಗೆ ನಮಗೆ ಸಲಹೆ ನೀಡುತ್ತಾರೆ. ಅಂತಹ ಸ್ನೇಹವು ದೇವರ ಆಶೀರ್ವಾದವಾಗಿದೆ.

 

ಸತ್ಯವೇದದಲ್ಲಿ, ದಾವೀದ ಮತ್ತು ಯೋನಾತಾನನ ಸ್ನೇಹವು ನಿಜವಾದ ಸ್ನೇಹದ ಒಂದು ಉತ್ತಮ ಉದಾಹರಣೆಯಾಗಿದೆ. 1 ಸಮುವೇಲ 18:1 ಹೀಗೆ ಹೇಳುತ್ತದೆ, “ಯೋನಾತಾನನ ಪ್ರಾಣವು ದಾವೀದನ ಪ್ರಾಣದ ಸಂಗಡ ಒಂದಾಯಿತು. ಯೋನಾತಾನನು ಅವನನ್ನು ತನ್ನ ಪ್ರಾಣದ ಹಾಗೆಯೇ ಪ್ರೀತಿಮಾಡಿದನು." ಯೋನಾತಾನನು ದಾವೀದನೊಂದಿಗೆ ಸ್ಪರ್ಧಿಸಲಿಲ್ಲ. ದೇವರ ಚಿತ್ತವನ್ನು ಸ್ವೀಕರಿಸಿ ದಾವೀದನಿಗೆ ನಿಲುವಂಗಿಯನ್ನು, ತನ್ನ ವಸ್ತ್ರಗಳನ್ನೂ ಕತ್ತಿಯನ್ನೂ ಬಿಲ್ಲನ್ನೂ ನಡುಕಟ್ಟನ್ನೂ ದಾವೀದನಿಗೆ ಕೊಟ್ಟನು. ಇದು ತ್ಯಾಗದ, ನಿಸ್ವಾರ್ಥವಾದ ಸ್ನೇಹವಾಗಿತ್ತು. ಯೋಹಾನ 15:13 ರಲ್ಲಿ “ಒಬ್ಬನು ತನ್ನ ಸ್ನೇಹಿತರಿ ಗೋಸ್ಕರ ತನ್ನ ಪ್ರಾಣವನ್ನು ಕೊಡುವ ಪ್ರೀತಿಗಿಂತ ಹೆಚ್ಚಿನದು ಯಾವದೂ ಇಲ್ಲ." ಯೇಸು ಶಿಲುಬೆಯ ಮೇಲೆ ತನ್ನ ಪ್ರಾಣವನ್ನು ಕೊಡುವ ಮೂಲಕ ತನ್ನ ಪ್ರೀತಿಯನ್ನು ಸಾಬೀತುಪಡಿಸಿದರು. ಫಿಲಿಪ್ಪಿ 4:19 ರಲ್ಲಿ ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿ ಯೊಂದು ಕೊರತೆಯನ್ನು ನೀಗಿಸುವನು" ಎಂದು ಬರೆಯಲ್ಪಟ್ಟಿದೆ. ಆತನು ನಮ್ಮ ದೌರ್ಬಲ್ಯದಲ್ಲಿ ನಮಗೆ ಶಕ್ತಿಯನ್ನು, ನಮ್ಮ ಗೊಂದಲದಲ್ಲಿ ಶಾಂತಿಯನ್ನು ಮತ್ತು ಪಾಪದಿಂದ ಕ್ಷಮೆಯನ್ನು ನೀಡುತ್ತಾರೆ.

 

ಆದರೆ ಮಾನವರು ನಮಗೆ ಸಹಾಯ ಮಾಡುವುದು ಒಂದು ನಿರ್ದಿಷ್ಟ ಸಮಯದವರೆಗೆ ಮಾತ್ರವೇ. ಕೆಲವೊಮ್ಮೆ, ಸಂದರ್ಭಗಳಿಂದಾಗಿ, ಅವರು ನಮಗೆ ಸಹಾಯ ಮಾಡಲು ಸಾಧ್ಯವಾಗದಿರಬಹುದು. ಇಂದಿನ ಜಗತ್ತಿನಲ್ಲಿ, ನಮಗೆ ಎಲ್ಲಾ ಸಂಪತ್ತು ಇದ್ದರೂ, ನಾವು ನಿಜವಾದ ಶಾಂತಿ ಮತ್ತು ಸಂತೋಷವನ್ನು ನೋಡಲು ಸಾಧ್ಯವಾಗುತ್ತಿದೆಯಾ? ಹಣವು ಮಾನವನ ಮೂಲಭೂತ ಅಗತ್ಯವಾಗಿದ್ದರೂ, ಸತ್ಯವೆಂದರೆ ದೇವರ ಶಾಂತಿ, ದೇವರೊಂದಿಗಿನ ನಮ್ಮ ಸಂಬಂಧವು ಇನ್ನೂ ಹೆಚ್ಚು ಮುಖ್ಯವಾಗಿದೆ. ಯೇಸು ನಮ್ಮ ಅತ್ಯುತ್ತಮ ಸ್ನೇಹಿತ. ಸ್ನೇಹಿತರು ಒಂದು ನಿರ್ದಿಷ್ಟ ಮಟ್ಟಿಗೆ ಮಾತ್ರ ನಮ್ಮೊಂದಿಗೆ ಬರಬಹುದು. ಆದರೆ ಯೇಸು ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ ಮತ್ತು ತೊರೆಯುವುದಿಲ್ಲ. ಕೀರ್ತನೆಗಾರನಾದ ದಾವೀದನು "ನನ್ನ ತಂದೆತಾಯಂದಿರು ನನ್ನನ್ನು ತೊರೆದುಬಿಟ್ಟರೂ ಕರ್ತನು ನನ್ನನ್ನು ಸೇರಿಸಿಕೊಳ್ಳುತ್ತಾನೆ ಎಂದು ಹೇಳುತ್ತಾರೆ. ಆತನನ್ನು ನಿಮ್ಮ ಆಪ್ತ ಸ್ನೇಹಿತನಾಗಿ ಸ್ವೀಕರಿಸಿ. ಆತನಲ್ಲಿ ನಿಜವಾದ ಶಾಂತಿ ಮತ್ತು ಶಾಶ್ವತ ಸಂತೋಷವಿದೆ. ಕರ್ತನಾದ ಯೇಸುವಿನಲ್ಲಿ ನಂಬಿಕೆ ಇಟ್ಟು ಜೀವನದ ಪ್ರತಿಯೊಂದು ಕ್ಷಣದಲ್ಲೂ ಆತನೊಂದಿಗೆ ನಡೆಯಿರಿ. ಆತನು ನಮ್ಮನ್ನು ಶಾಂತಿಯಿಂದ ತುಂಬಿಸಿ ನಮ್ಮ ಮೇಲೆ ಆಳ್ವಿಕೆ ಮಾಡಲಿ. ಆಮೆನ್.

- Bro. ಮನೋಜ್ ಫ್ರಾನ್ಸಿಸ್

 

ಪ್ರಾರ್ಥನಾ ಅಂಶ:

ದೇವರು VBS ಪಠ್ಯಕ್ರಮವನ್ನು ಆಶೀರ್ವದಿಸುವಂತೆ ಅದರ ಮೂಲಕ ಅನೇಕ ಮಕ್ಕಳು ಸ್ಪರ್ಶಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet betcio romabet giriş romabet hilbet bahiscasino celtabet antikbet betoffice casibom matbet matbet giriş