Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.05.2026
Share:

By Village Missionary Movement

Thursday, 07-May-2026

ಧೈನಂದಿನ ಧ್ಯಾನ(Kannada) – 07.05.2026

 

ಕೈಯೊಡ್ಡಿ ನಿಲ್ಲಲು ಬಿಡದ ತಂದೆ

 

“...ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ" - ಕೀರ್ತನೆ 37:25

 

ಕಳೆದ ತಿಂಗಳು, ವಿಳುಪುರಂನಲ್ಲಿ ಮಕ್ಕಳ ಶಿಬಿರವನ್ನು ಆಯೋಜಿಸಿ ಒಳ್ಳೆಯ ರೀತಿಯಲ್ಲಿ ನಡೆಸಲು ದೇವರು ಕೃಪೆ ತೋರಿಸಿದರು. ಶಿಬಿರಕ್ಕೆ ಬರುವ ಮಕ್ಕಳಿಗೆ ನಾವು ಉಡುಗೊರೆಗಳನ್ನು ಖರೀದಿಸಬೇಕಾಗಿತ್ತು. ಆರ್ಥಿಕ ಅಗತ್ಯಗಳನ್ನು ಪೂರೈಸಬೇಕೆಂದು ನಾವು ಶ್ರದ್ಧೆಯಿಂದ ಪ್ರಾರ್ಥಿಸುತ್ತಲೇ ಇದ್ದೆವು. ಶಿಬಿರವನ್ನು ನಡೆಸಲು ನಮಗೆ ಕೇವಲ ಎರಡು ದಿನಗಳು ಮಾತ್ರ ಇದ್ದುದರಿಂದ, ಆ ರಾತ್ರಿ ನಮಗೆ ನಿದ್ರೆ ಬರಲಿಲ್ಲ. ಉಡುಗೊರೆಗಳನ್ನು ಖರೀದಿಸಲು ಹಣವಿಲ್ಲ ಎಂಬ ಚಿಂತೆಯೇ ಇದಕ್ಕೆ ಕಾರಣ. ಯಾರೂ ಗೊತ್ತಿಲ್ಲದ ಸ್ಥಳದಲ್ಲಿ ಬಂದು ಸೇವೆ ಮಾಡುತ್ತಿದ್ದೇವೆ ಎಂಬ ಆತಂಕ ನನ್ನ ಮನಸ್ಸಿನಲ್ಲಿತ್ತು. ತಕ್ಷಣ, ನನ್ನ ಮನಸ್ಸಿಗೆ ಒಂದು ಮಾತು ಬಂದಿತು. ಯಾರೂ ಗೊತ್ತಿಲ್ಲದ ಸ್ಥಳದಲ್ಲಿ ನೀನು ಸೇವೆ ಮಾಡುತ್ತಿರುವುದು ನಿಜವೇ. ಆದರೆ ಎಲ್ಲರನ್ನೂ ಸೃಷ್ಟಿಸಿರುವ ಸರ್ವಶಕ್ತನಾದ ಯೇಸು ನಿನ್ನೊಂದಿಗೆ ಇದ್ದಾರೆ ಎಂಬುದನ್ನು ಮರೆತುಹೋಗಬೇಡ ಎಂದು ದೇವರು ನನ್ನೊಟ್ಟಿಗೆ ಮಾತನಾಡಿದರು. ಮುಂದಿನ ಕ್ಷಣ, ನನ್ನ ಹೃದಯವು ಸಂತೋಷದಿಂದ ತುಂಬಿತು. ನಾನು ಕಣ್ಣೀರಿನಿಂದ, ಯೇಸಪ್ಪಾ, ನೀವು ನನ್ನೊಂದಿಗಿದ್ದೀರಲ್ಲಾ.. ಮ್ಮ್...ಎಂದು ಪ್ರಾರ್ಥನೆಯನ್ನು ಮುಗಿಸಿ ಬಿಟ್ಟು, ಬೆಳಿಗ್ಗೆ ಸೇವೆಗೆ ಬಹಳ ಉತ್ಸಾಹದಿಂದ ಹೊರಟೆ. ಮಧ್ಯಾಹ್ನ, ನನಗೆ ಫೋನ್‌ನಲ್ಲಿ ಒಂದು ಕರೆ ಬಂತು. ನೀವು ಆಯೋಜಿಸಲಿರುವ ಮಕ್ಕಳ ಶಿಬಿರಕ್ಕೆ ಉಡುಗೊರೆಗಳನ್ನು ಖರೀದಿಸಲು ಎಷ್ಟು ವೆಚ್ಚವಾಗುತ್ತದೆ ಎಂದು ಕೇಳಿ ಬಿಟ್ಟು ಅವರು ನಮಗೆ ಆ ಹಣವನ್ನು ನೀಡಿದರು. ಆ ಹಣದಿಂದ ನಾವು ಉಡುಗೊರೆಗಳನ್ನು ಖರೀದಿಸಿದೆವು. ದೇವರು ಮಕ್ಕಳ ಶಿಬಿರವನ್ನು ದಯೆಯಿಂದ ಆಶೀರ್ವದಿಸಿದರು. ಅಪೊಸ್ತಲನಾದ ಪೇತ್ರನು ಈ ರೀತಿಯಾಗಿ ಬರೆಯುತ್ತಾರೆ "ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ" ಎಂದು. ಅಪೊಸ್ತಲನಾದ ಪೌಲನು ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯಲ್ಲಿ, ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು ಎನ್ನುತ್ತಾರೆ. ಆದ್ದರಿಂದ, ನಮ್ಮ ಅಗತ್ಯಗಳನ್ನು ದೇವರಿಗೆ ತಿಳಿಸಿ ಬಿಟ್ಟು ನಂಬಿಕೆಯಲ್ಲಿ ಸ್ಥಿರವಾಗಿರೋಣ.

 

ನನಗೆ ಪ್ರಿಯರಾದ ಸಹೋದರ ಸಹೋದರಿಯರೇ, ನಿಮ್ಮ ಸೇವೆಯಲ್ಲಿ ಅಥವಾ ನಿಮ್ಮ ವೈಯಕ್ತಿಕ ಜೀವನದಲ್ಲಿ ಯಾರೂ ಇಲ್ಲದ ಕಾರಣ ನೀವು ಅಳುತ್ತಾ ಪ್ರಲಾಪಿಸುತ್ತಿದ್ದೀರಾ? ಚಿಂತಿಸಬೇಡಿ. ಮನುಷ್ಯರಿಂದ ಅಸಾಧ್ಯವಾದದ್ದು ದೇವರಿಗೆ ಸಾಧ್ಯ ಎಂದು ಬೈಬಲ್ ಹೇಳುತ್ತದೆ. ಹೌದು, ಸರ್ವಶಕ್ತನಾದ ದೇವರು ನಮ್ಮ ಪಕ್ಕದಲ್ಲಿ ನಿಂತು ನಮ್ಮನ್ನು ಕಾಯುತ್ತಿದ್ದಾರೆ. ಯೇಸಪ್ಪ ನಿಮ್ಮ ಎಲ್ಲಾ ಚಿಂತೆಗಳನ್ನು ಬದಲಾಯಿಸುತ್ತಾರೆ. ನಾವು ದೇವರನ್ನೇ ಒರಗಿ ಕಾರ್ಯ ಮಾಡುವಾಗ ದೇವರು ಕೈಬಿಡುತ್ತಾರೋ? ಎಂದಿಗೂ ಕೈಬಿಡುವುದಿಲ್ಲ. ಗರ್ಭದಲ್ಲಿ ನಿನ್ನನ್ನು ಆರಿಸಿಕೊಂಡ ದೇವರು ನಿನ್ನನ್ನು ಬೀದಿಯಲ್ಲಿ ಬಿಡುವುದಿಲ್ಲ. 

- Bro. ಎಬಿನೆಜರ್

 

ಪ್ರಾರ್ಥನಾ ಅಂಶ:

VBS ಹಾಡುಗಳನ್ನು ಹಾಡುವಾಗಲೇ ಮಕ್ಕಳ ಮೇಲೆ ದೇವರ ಪ್ರೀತಿಯು ಸುರಿಯಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş casibom casibom giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş holiganbet Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet