By Village Missionary Movement
Wednesday, 06-May-2026ಧೈನಂದಿನ ಧ್ಯಾನ(Kannada) – 06.05.2026
ತಾಳ್ಮೆ
“...ಹಮ್ಮುಗಾರನಿಗಿಂತ ತಾಳ್ಮೆಯುಳ್ಳವನು ಉತ್ತಮ” - ಪ್ರಸಂಗಿ 7:8
ನಾವೆಲ್ಲರೂ ಬಸವನ ಹುಳುವನ್ನು ನೋಡಿರುತ್ತೇವೆ. ಈ ಬಸವನಹುಳು ಎಷ್ಟು ತಾಳ್ಮೆಯಿಂದ ನಡೆಯುತ್ತದೆ ಎಂದು ಎಂದಾದರೂ ನಾವು ಯೋಚಿಸಿದ್ದುಂಟಾ? ಎಷ್ಟು ತಾಳ್ಮೆ ನೋಡಿ! ಬೈಬಲ್‌ನಲ್ಲಿ, ಹಮ್ಮುಗಾರನಿಗಿಂತ ತಾಳ್ಮೆಯುಳ್ಳವನು ಉತ್ತಮ. ಪ್ರೀತಿ, ತಾಳ್ಮೆ ಮತ್ತು ಸೌಮ್ಯತೆಯನ್ನು ಪಡೆಯಲು ಪ್ರಯತ್ನಿಸಿರಿ. ತಾಳ್ಮೆಯಿಂದ ನಿಮ್ಮ ಆತ್ಮಗಳನ್ನು ಕಾಪಾಡಿಕೊಳ್ಳಿ ಎಂದೆಲ್ಲಾ ಹೇಳಲಾಗಿದೆ. ನಾವೊಂದು ಕೆಲಸವನ್ನು ಮಾಡಲು ಪ್ರಯತ್ನಿಸಿದಾಗ, ನಾವು ತಾಳ್ಮೆಯಿಂದಿದ್ದೇವೆಯೇ ಅಥವಾ ಆತುರಪಡುವವರಾಗಿದ್ದೇವಾ? ಹಾಗೆ ಆತುರಪಡುವವರಾಗಿದ್ದರೆ, ಇನ್ನು ಮುಂದೆಯಾದರೂ ನಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸೋಣ. ನಿಮ್ಮ ಜೀವನದ ಪ್ರಯಾಣದಲ್ಲಿ ಪ್ರತಿಯೊಂದು ವಿಷಯದಲ್ಲೂ ತಾಳ್ಮೆಯಿಂದಿರಿ. ವಿಶೇಷವಾಗಿ ಯಾವುದಾದರೂ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಾಗ, ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೇ ರೀತಿಯ ಬಲವಂತದ ಪರಿಸ್ಥಿತಿ ಬಂದರೂ, ನಾವು ಆತುರಪಡಬಾರದು. ನಾವು ಅದನ್ನು ತಾಳ್ಮೆಯಿಂದ ನಿಭಾಯಿಸಬೇಕು. ತಾಳ್ಮೆ ಆರೋಗ್ಯಕರ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ಅದು ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ.
ಸಂಕಷ್ಟದಲ್ಲಿ ನಾವು ತಾಳ್ಮೆಯನ್ನು ಕಲಿಯಬೇಕು ಎಂದು ಬೈಬಲ್ ಹೇಳುತ್ತದೆ. ನಮಗೆ ತಾಳ್ಮೆ ಬಂದಾಗ ಏನಾಗುತ್ತದೆ ಎಂದು ನಿಮಗೆ ಗೊತ್ತಾ? ಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆ, ತಾಳ್ಮೆಯು ಪರೀಕ್ಷೆಯನ್ನು ಮತ್ತು ಪರೀಕ್ಷೆಯು ಭರವಸೆಯನ್ನು ಉಂಟುಮಾಡುತ್ತದೆ. ನಾವು ನಮ್ಮ ಜೀವನವನ್ನು ಭರವಸೆ ಮತ್ತು ತಾಳ್ಮೆಯಿಂದ ಬದುಕಬೇಕು. ನಾವು ಅರಸನಾದ ದಾವೀದನನ್ನು ನೋಡುವುದಾದರೆ, ಅವರು ತಕ್ಷಣ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅವರು ಕರ್ತನ ಸನ್ನಿಧಿಯಲ್ಲಿ ಕಾಯುತ್ತಿದ್ದರು, ಆತನ ಸಲಹೆಯನ್ನು ಸ್ವೀಕರಿಸಿದ ನಂತರವೇ ಏನಾದರೂ ಮಾಡುತ್ತಿದ್ದರು. ಆದ್ದರಿಂದ ಅವರು ಮಾಡಿದ ಎಲ್ಲವೂ ಯಶಸ್ವಿಯಾಯಿತು.
ಪ್ರಿಯರೇ, ನೀವು ಸಹ ದೇವರ ಸನ್ನಿಧಿಯಲ್ಲಿ ತಾಳ್ಮೆಯಿಂದ ಕಾದಿದ್ದು ನೀವು ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಂಡರೆ, ಅದು ನಿಮಗೆ ಯಶಸ್ವಿಯಾಗಿಯೂ ಮತ್ತು ಆಶೀರ್ವಾದವಾಗಿಯೂ ಇರುತ್ತದೆ. “ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನುಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು." (ಯೆಶಾಯ 40:31) ತಾಳ್ಮೆಯಿಂದ ಮುಂದುವರಿಯಿರಿ. ಕರ್ತನು ನಿಮ್ಮನ್ನು ಆಶೀರ್ವದಿಸಲಿ. ಆಮೆನ್.
- B. ಸುಭಾಷ್
ಪ್ರಾರ್ಥನಾ ಅಂಶ:
ನಮ್ಮ ಸಹ ಸೇವಕರಾದ ದೆಬೋರಾಳ್ ಗಳ VBS ಸೇವೆಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482