Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.05.2026
Share:

By Village Missionary Movement

Tuesday, 05-May-2026

ಧೈನಂದಿನ ಧ್ಯಾನ(Kannada) – 05.05.2026

 

ಕರುಣೆ ತೋರು

 

“...ಒಬ್ಬ ಸಮಾರ್ಯದವನು ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದು ಅವನನ್ನು (ಗಾಯಪಟ್ಟವನನ್ನು) ಕಂಡು ಕನಿಕರಿಸಿ," - ಲೂಕ 10:33

 

ಪ್ರಸಿದ್ಧ ಉತ್ತರ ಭಾರತದ ಮಿಷನರಿ ಸಾಧು ಸುಂದರ್ ಸಿಂಗ್ ರವರು ಯೇಸುಕ್ರಿಸ್ತನನ್ನು ಬೋಧಿಸುತ್ತಾ ಬಹು ದೂರ ಅಲೆದಾಡುವ ಅಭ್ಯಾಸ ಹೊಂದಿದ್ದರು. ಅನೇಕ ಬಾರಿ ಅವರು ಭಾರತದ ಗಡಿಯನ್ನು ದಾಟಿ ಹಿಮದಿಂದ ಆವೃತವಾದ ಪರ್ವತಗಳು ಮತ್ತು ಕಣಿವೆಗಳ ಮೂಲಕ ಟಿಬೆಟ್‌ಗೆ ಹೋಗುತ್ತಿದ್ದರು. ಒಮ್ಮೆ ಅವರು ಹಿಮದಿಂದ ಆವೃತವಾದ ಕಠಿಣ ಹಾದಿಯಲ್ಲಿ ನಡೆಯುತ್ತಿದ್ದರು. ನಂತರ ಒಬ್ಬ ಪ್ರಯಾಣಿಕನು ದಣಿದು ಮೂರ್ಛೆ ಹೋಗಿ ಹಿಮದಲ್ಲಿ ಬಿದ್ದಿರುವುದನ್ನು ನೋಡಿದರು. ಅವರ ಮುಂದೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾಯುತ್ತಿರುವ ಮನುಷ್ಯನನ್ನು ಕಂಡೂ ಕಾಣದಂತೆ ಅವನನ್ನು ದಾಟಿ ಹೋಗಿಬಿಟ್ಟರು. 

 

ಅವನನ್ನು ನೋಡಿದ ಸಾಧು ಮಾತ್ರ ಮನಮರುಗಿದರು. ಆ ಮನುಷ್ಯನಿಗೆ ಸಾಧ್ಯವಾದಷ್ಟು ಮಟ್ಟಿಗೆ ಬಿಗಿಯಾಗಿ ಹೊದಿಸಿ, ಅವರ ಹೆಗಲ ಮೇಲೆ ಹಾಕಿಕೊಂಡು ಮುಂದಿನ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಸೇರಿಸಿದರು. ದುರಂತವೆಂದರೆ ಅವರ ಮುಂದೆ ಹಾದು ಹೋದ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ಹೆಪ್ಪುಗಟ್ಟಿ ಸತ್ತುಹೋಗಿರುವುದನ್ನುಕಂಡರು. ರಹಸ್ಯವೇನು? ಅವರು ಒಬ್ಬಂಟಿಯಾಗಿದ್ದದರಿಂದ ಚಳಿಯನ್ನು ಸಹಿಸಲಾಗದೆ ಸತ್ತುಹೋದರು. ಸಾಧು ಸುಂದರ್ ಸಿಂಗ್ ಒಬ್ಬ ವ್ಯಕ್ತಿಯನ್ನು ಹೊತ್ತೊಯ್ದಾಗ, ಒಬ್ಬರ ದೇಹದಿಂದ ಉಷ್ಣತೆ ಇನ್ನೊಬ್ಬರ ದೇಹಕ್ಕೆ ಹರಡಿ ಇಬ್ಬರೂ ಬದುಕುಳಿದರು.

 

ಸತ್ಯವೇದವು ಹೇಳುತ್ತದೆ, "ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು". ಸಾಧು ಒಬ್ಬ ವ್ಯಕ್ತಿಯ ಮೇಲೆ ಕರುಣೆ ತೋರಿ ಅವರನ್ನು ಹೊತ್ತುಕೊಂಡರು, ಆದ್ದರಿಂದ ಅವರು ಮತ್ತು ಅವರು ಹೊತ್ತ ವ್ಯಕ್ತಿ ಇಬ್ಬರೂ ಬದುಕುಳಿದರು. ಅವರ ಮುಂದೆ ಹೋದ ವ್ಯಕ್ತಿ ತಾನು ಬದುಕುಳಿದರೆ ಸಾಕು, ನಾನೇಕೆ ಅವನಿಗೆ ಸಹಾಯ ಮಾಡಬೇಕು ಎಂದು ಒಬ್ಬಂಟಿಯಾಗಿ ಹೋದದ್ದರಿಂದ ಚಳಿ ತಡೆಯಲಾರದೆ ಸತ್ತುಹೋದನು. 

 

ನನಗೆ ಪ್ರಿಯವಾದ ದೇವಜನರೇ, ಇದನ್ನೇ ಯೇಸು ಕ್ರಿಸ್ತನು ಒಳ್ಳೆಯ ಸಮಾರ್ಯದವನ ಕಥೆಯ ಮೂಲಕ ನಮಗೊಂದು ಪಾಠ ಕಲಿಸಿಕೊಟ್ಟರು. ಯಾಜಕನು ಮತ್ತು ಲೇವಿಯನಿಗೆ ಸಿಗದ ಕರುಣೆ ಒಳ್ಳೆಯ ಸಮಾರ್ಯದವನಿಗೆ ದೊರೆಯಿತು. ಏಕೆ? ಆ ಮನುಷ್ಯನು ಸಹಾಯದ ಅಗತ್ಯವಿರುವವನಾಗಿ ಕಾಣಲ್ಪಟ್ಟನು. ಆ ಸಹಾಯವನ್ನು ಮೊದಲು ಬಂದ ಇಬ್ಬರೂ ಮಾಡಲಿಲ್ಲ. ಸಮಾರ್ಯದವನೇ ಅದನ್ನು ಮಾಡಿದನು. ಆದ್ದರಿಂದ, ಅವನಿಗೇ ಕರುಣೆ ದೊರೆಯುತ್ತದೆ ಎಂದು ಹೇಳಿದರು. ಪೌಲನು ಹೇಳುತ್ತಾರೆ, "ಒಳ್ಳೆದನ್ನು ಮಾಡುವದರಲ್ಲಿ ಬೇಸರ ಗೊಳ್ಳದೆ ಇರೋಣ. ಯಾಕಂದರೆ ನಾವು ಮನಗುಂದ ದಿದ್ದರೆ ತಕ್ಕ ಸಮಯದಲ್ಲಿ ಕೊಯ್ಯುವೆವು" (ಗಲಾ. 6:9). ಆಮೆನ್! ಕರ್ತನು ತಾನೇ ನಮ್ಮನ್ನು ಆಶೀರ್ವದಿಸಲಿ!

- Mrs. ಹೆಪ್ಸಿಬಾ ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

VBS ಸೇವೆಗೆ ಎಲ್ಲಾ ಹಳ್ಳಿಗಳಲ್ಲೂ ದೇವರು ತೆರೆದ ಬಾಗಿಲನ್ನು ಆಜ್ಞಾಪಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al padişahbet padişahbet giriş mavibet giriş bets10 extrabet royalbet süperbetin vaycasino mavibet holiganbet galabet matbet matbet giriş celtabet bahiscasino atlasbet antikbet