Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.05.2026 (Kids Special)
Share:

By Village Missionary Movement

Sunday, 03-May-2026

ಧೈನಂದಿನ ಧ್ಯಾನ(Kannada) – 03.05.2026 (Kids Special)

 

ಧರ್ಮಶಾಸ್ತ್ರವು ನನಗೆ ಅತಿಪ್ರಿಯವಾಗಿದೆ

 

“ನೀನು ಉಸಿರಿದ ಧರ್ಮಶಾಸ್ತ್ರವು ಸಾವಿರಾರು ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ" - ಕೀರ್ತನೆ 119:72

 

ಹಲೋ ಪುಟಾಣಿಗಳೇ, ನೀವೆಲ್ಲರೂ ಚೆನ್ನಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ರಜೆಯಲ್ಲಿರುವುದರಿಂದ ತುಂಬಾ ಜಾಲಿಯಾಗಿದ್ದೀರ. ಅಷ್ಟೇ ಅಲ್ಲ, VBS ಗೆ ಹೋಗಬಹುದಲ್ವಾ. ಅಲ್ಲಿ ತುಂಬಾ ವಾಕ್ಯಗಳು super ಆಗಿರುವ ಹಾಡುಗಳು ನಾಟಕಗಳು ಹೀಗೆ Enjoy ಮಾಡಬಹುದು. ಸರಿ, ನಾವು ಕಥೆಯೊಳಗೆ ಹೋಗೋಣ್ವಾ?

 

ಒಬ್ಬ ಶ್ರೀಮಂತ ವ್ಯಕ್ತಿ ಬೈಬಲ್ ಮತ್ತು ಹಣವನ್ನು ತೆಗೆದುಕೊಂಡು, “ಇಂದು ಕಷ್ಟಪಡುತ್ತಿರುವ ಯಾರಿಗಾದರೂ ನಾನು ಇದನ್ನು ಕೊಟ್ಟು ಸಹಾಯ ಮಾಡಬೇಕು ಯೇಸಪ್ಪ” ಎಂದು ಪ್ರಾರ್ಥಿಸುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋದರು. ಆ ಸಮಯದಲ್ಲಿ, ಒಬ್ಬ ವಯಸ್ಸಾದ ವ್ಯಕ್ತಿಯು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾ ಕುಳಿತಿದ್ದರು. ಆ ಶ್ರೀಮಂತ ವ್ಯಕ್ತಿ ಅವರ ಬಳಿಗೆ ಹೋಗಿ ಒಂದು ಕೈಯಲ್ಲಿ ಹಣ ಮತ್ತು ಇನ್ನೊಂದು ಕೈಯಲ್ಲಿ ಬೈಬಲ್ ಅನ್ನು ಚಾಚಿದರು. ಆಗ ಅವರು ನನಗೆ ಹಸಿವಾಗುತ್ತಿದೆ, ನನ್ನ ಬಳಿ ಹಣವಿಲ್ಲ. ನನಗೆ ಈ ಹಣವನ್ನು ತೆಗೆದುಕೊಳ್ಳಬೇಕು ಅನಿಸುತ್ತಿದೆ. ಆದರೆ ನನ್ನ ತಾಯಿ ಆಗಾಗ್ಗೆ ಒಂದು ವಾಕ್ಯವನ್ನು ಹೇಳುತ್ತಿದ್ದರು. "ನೀನು ಉಸಿರಿದ ಧರ್ಮಶಾಸ್ತ್ರವು ಸಾವಿರಾರು ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ." (ಕೀರ್ತನೆ 119:72). ನಾನಾದರೋ ಬೈಬಲ್ ಗೆ ಪ್ರಾಮುಖ್ಯತೆ ನೀಡದೇ ಮನಸ್ಸಿಗೆ ಬಂದಂತೆ ಜೀವಿಸಿಬಿಟ್ಟೆ. ನನ್ನ ತಾಯಿ ಹೇಳಿದ ಬೈಬಲ್‌ನಲ್ಲಿ ಏನಾದರೂ ಇದೆ ಎಂದು ಓದಿ ನೋಡಿ ಬಿಡೋಣ ಅಂದುಕೊಂಡು ಬೈಬಲ್ ತೆಗೆದುಕೊಂಡರು. ಆ ಶ್ರೀಮಂತನಿಗೆ ತುಂಬಾ ಆಶ್ಚರ್ಯವಾಗೋಯ್ತು. ಈ ರೀತಿ ಹಸಿವು ದಾಹದಿಂದ ಬಳಲುತ್ತಿದ್ದರೂ ಬೈಬಲ್ ಅನ್ನು ತೆಗೆದುಕೊಂಡರಲ್ಲಾ ಎಂದು ಭಾವಿಸಿದರು. ಅವರು ಆ ಹಣವನ್ನು ಒಂದು ಕವರಿನಲ್ಲಿ ಇಟ್ಟು, ಅದನ್ನು ಬೈಬಲ್ ಒಳಗೆ ಇಟ್ಟು ಆ ವಯಸ್ಸಾದವರಿಗೆ ಕೊಟ್ಟು ಹೊರಟುಹೋದರು. 

 

ಹೌದು, ನನಗೆ ಪ್ರಿಯವಾದವರೇ, ಬೈಬಲ್ ವಚನವು ಚಿನ್ನ ಮತ್ತು ಬೆಳ್ಳಿಗಿಂತ ಹೆಚ್ಚು ಮೌಲ್ಯಯುತವಾಗಿದೆ. ನೀವು ಅದನ್ನು ತೆಗೆದುಕೊಂಡು ಪ್ರತಿದಿನ ಓದಬೇಕು. ಒಂದು ವೇಳೆ ನಿಮಗೆ ಅದು ಅರ್ಥವಾಗದಿದ್ದರೆ, ದೊಡ್ಡವರ ಬಳಿ ಅಥವಾ ನಿಮ್ಮ Sunday school teacher ಬಳಿ ಕೇಳಿ ತಿಳಿದುಕೊಳ್ಳಬೇಕು. ಪ್ರತಿದಿನ ಬೈಬಲ್ ಅನ್ನು ಓದಿ ಅದರ ಪ್ರಕಾರ 

 

ಜೀವಿಸಿದರೆ, ದೇವರು ನಿಮ್ಮನ್ನು ಆಶೀರ್ವದಿಸುತ್ತಾರೆ. ಆ ವಯಸ್ಸಾದವರು ಕೂಡ ಓದುತ್ತಲೇ ಪುಟಗಳನ್ನು ತಿರುಗಿಸುತ್ತಿರುವಾಗ, ಬೈಬಲ್‌ನಿಂದ ಒಂದು ಕವರ್ ಕೆಳಗೆ ಬಿದ್ದಿತು. ಏನಪ್ಪ ಕವರ್ ಇದು ಎಂದು ಎತ್ತಿ ನೋಡಿದಾಗ ಆ ಕವರ್ ಒಳಗೆ ಹಣವಿತ್ತು. ಅವರಿಗೆ ತುಂಬಾ ಆಶ್ಚರ್ಯವಾಯಿತು. ಆಗ ಅವರ ಮನಸ್ಸಿಗೆ ಒಂದು ವಾಕ್ಯ ನೆನಪಾಯಿತು. "ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು." (ಮತ್ತಾಯ 6:33)

 

ಹೌದು, ಪುಟಾಣಿಗಳೇ! ಯೇಸಪ್ಪ ಆ ವಯಸ್ಸಾದವರನ್ನು ಆಶೀರ್ವದಿಸಿದಂತೆಯೇ, ನೀವು ಸಹ ಪ್ರತಿದಿನ ಬೈಬಲ್ ಓದಿದರೆ, ಆತನು ನಿಮ್ಮೊಂದಿಗೆ ಮಾತನಾಡುತ್ತಾರೆ ಮತ್ತು ಅದರ ಮೂಲಕ ನಿಮ್ಮನ್ನು ಆಶೀರ್ವದಿಸುತ್ತಾರೆ. ಕರ್ತನು ಎಷ್ಟು ದೊಡ್ಡವರು ನೋಡಿ! ಸರಿ ಪುಟಾಣಿಗಳೇ, ಈಗ ನೀವು ಬೈಬಲ್ ಓದಲು ಪ್ರಾರಂಭಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. O. K. Bye.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al jojobet holiganbet giriş casibom bets10 extrabet bahiscasino süperbetin holiganbet jojobet giriş casibom holiganbet