Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.05.2026
Share:

By Village Missionary Movement

Saturday, 02-May-2026

ಧೈನಂದಿನ ಧ್ಯಾನ(Kannada) – 02.05.2026

 

ತಲೆಯಾಡಿಸುವ ಗೊಂಬೆ 

 

“...ವಾಕ್ಯದ ಪ್ರಕಾರ ನಡೆಯುವವರಾಗಿರ್ರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸ ಬೇಡಿರಿ" - ಯಾಕೋಬ 1:22

 

ಚಿಕ್ಕಮಕ್ಕಳು ಆಟವಾಡುವ ತಲೆಯಾಡಿಸುವ ಗೊಂಬೆಯನ್ನು ಹೇಗೆ ಆಡಿಸಿದರೂ ಅದು ತಲೆಯಾಡಿಸುತ್ತದೆ. ಅದೇ ರೀತಿ, ಕೆಲವರು ಏನು ಹೇಳಿದರೂ ಅದನ್ನು ಕೇಳುತ್ತಾ ತಲೆಯಾಡಿಸುತ್ತಾರೆ. ಆ ಗೊಂಬೆಯನ್ನು ಅಲ್ಲಾಡಿಸಿದಾಗ ಅದು ಹೇಗೆ ತಲೆಯಾಡಿಸಿ ನಂತರ ಅದೇ ಸ್ಥಾನಕ್ಕೆ ಬಂದುಬಿಡುತ್ತದೋ ಹಾಗೆ, ಕೆಲವರು ಕೇಳುವುದನ್ನೆಲ್ಲಾ ಕೇಳಿ ಬಿಟ್ಟು ಏನೂ ಮಾಡದೇ ಸುಮ್ಮನಿರುತ್ತಾರೆ. 1 ಸಮುವೇಲ 17 ನೇ ಅಧ್ಯಾಯದಲ್ಲಿ ಇಸ್ರಾಯೇಲ್ಯರ ಸೈನ್ಯದ ಮುಂದೆ ಫಿಲಿಷ್ಟಿಯರ ಸೈನಿಕನಾದ ಗೊಲ್ಯಾತನು ಬಂದು 40 ದಿನಗಳ ಕಾಲ ಇಸ್ರಾಯೇಲ್ಯರ ಸೈನ್ಯವನ್ನು ಮತ್ತು ನಮ್ಮ ದೇವರನ್ನೇ ನಿಂದಿಸಿ ಮಾತಾನಾಡಿದನು. ಆದರೆ ಇಸ್ರಾಯೇಲ್ ಸೈನ್ಯವಾಗಲಿ ಅಥವಾ ರಾಜನಾಗಲಿ ಗೊಲ್ಯಾತನನ್ನು ವಿರೋಧಿಸದೇ 40 ದಿನಗಳ ಕಾಲ ಕೇಳುತ್ತಲೇ ಇದ್ದರು. ಮಿಲಿಟರಿ ತರಬೇತಿಯ ಸಮಯದಲ್ಲಿ ಅವರಿಗೆ ಕಲಿಸಿಕೊಟ್ಟ ಎಲ್ಲವನ್ನೂ ಕೇಳಿ ಬಿಟ್ಟು ಅದನ್ನು ಯುದ್ಧಭೂಮಿಯಲ್ಲಿ ಶತ್ರು ಯೋಧನ ಬಳಿ ತೋರಿಸದೇ ಮೌನವಾಗಿದ್ದಾರೆ. ತರಬೇತಿಯ ಸಮಯದಲ್ಲೂ ಎಲ್ಲವನ್ನು ತಲೆಯಾಡಿಸಿ ಕೇಳಿದರು, ಶತ್ರು ದೇಶದ ಯೋಧನು ಮಾತನಾಡುವ ನಿಂದೆಯ ಮಾತುಗಳನ್ನು ಸಹ ತಲೆಯಾಡಿಸುತ್ತಾ ಕೇಳಿಸಿಕೊಳ್ಳುತ್ತಿದ್ದಾರೆ ಹೊರತು ಕ್ರಿಯೆ ಮಾಡಲಿಲ್ಲ.

 

ದಾವೀದನು ಕುರಿಗಳನ್ನು ಮೇಯಿಸುತ್ತಿದ್ದಾಗ ತನ್ನ ವಿರುದ್ಧ ಬಂದ ಸಿಂಹ ಮತ್ತು ಕರಡಿಯನ್ನು ಸೋಲಿಸಲು ದೇವರು ಕಲಿಸಿದ ತರಬೇತಿಯನ್ನು ಕಲಿತುಕೊಂಡರು. ಅದೇ ರೀತಿ, ಶತ್ರುವಾದ ಗೊಲ್ಯಾತನ ದೇವದೂಷಣೆಯನ್ನು ಕೇಳಿದ ನಂತರ, ಸೌಲನಿಗೆ ತಾನು ಕಲಿತ ತರಬೇತಿಯ ಕುರಿತು ಹೇಳಿ ಕರ್ತನ ಸಹಾಯದಿಂದ ವೈರಾಗ್ಯವಾಗಿ ಕ್ರಿಯೆಮಾಡುತ್ತಾರೆ, ಜಯವನ್ನು ಸ್ವತಂತ್ರಿಸಿಕೊಳ್ಳುತ್ತಾರೆ . ಅದು ಇಡೀ ಇಸ್ರಾಯೇಲ್ ಜನರ ಗೆಲುವು ಮತ್ತು ವಿಜಯವಾಗುತ್ತದೆ. ಸರಿಯಾದ ಸಮಯದಲ್ಲಿ ನಮಗೆ ಹೇಳಿದ್ದನ್ನು ನಾವು ಕಾರ್ಯಗತಗೊಳಿಸದಿದ್ದರೆ, ನಾವು ಕೈಗೊಂಬೆಗಳಾಗಿಬಿಡುತ್ತೇವೆ, ಕೇಳಿದ್ದೂ ಕೂಡ ನಿಷ್ಪ್ರಯೋಜನವಾಗಿಬಿಡುತ್ತದೆ. 

 

ಪ್ರಿಯರೇ, ಇಂದು ಅನೇಕ ಕ್ರೈಸ್ತರು ಇಸ್ರಾಯೇಲ್ ಸೈನ್ಯದಂತಿದ್ದಾರೆ. ಅವರು ಆಲಯದಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದೇವರ ವಾಕ್ಯವನ್ನು ಹೆಚ್ಚಾಗಿ ಕೇಳುತ್ತಾರೆ. ಆದರೆ ಅವರು ಅದನ್ನು ತಮ್ಮ ಜೀವನದಲ್ಲಿ ಜಾರಿಗೆ ತರುವುದಿಲ್ಲ. ಶತ್ರುವನ್ನು ಸೋಲಿಸಲು ದೇವರು ನೀಡುವ ಎಲ್ಲಾ ಸಲಹೆಗಳನ್ನು ಕೇಳಿದರೂ, ಅವರು ಮೌನವಾಗಿರುತ್ತಾರೆ ಕ್ರಮ ಕೈಗೊಳ್ಳುವುದಿಲ್ಲ. ಯೇಸುವಿನೊಂದಿಗೆ ಮೂರುವರೆ ವರ್ಷಗಳ ಕಾಲ ಪ್ರಯಾಣಿಸಿದ ಶಿಷ್ಯರು ಭಯಭೀತರಾಗಿ ಹಿಂತಿರುಗುತ್ತಾರೆ. ದೇವರು ಅವರ ಮೂಲಕ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ಯೇಸುವಿಗೆ ಸಾಕ್ಷಿಗಳಾಗಿ ಧೈರ್ಯದಿಂದ ನಿಂತವರೊಂದಿಗೆ ದೇವರು ದೊಡ್ಡ ಕಾರ್ಯಗಳನ್ನು ಮಾಡಿದರು. ನಾವೂ ಸಹ ಕೈಗೊಂಬೆಗಳಂತೆ ಇರದೇ, ಕೆಲಸ ಮಾಡುವ ಆಯುಧಗಳಾಗಿ ಮಾರ್ಪಡೋಣ. ದೇವರ ರಾಜ್ಯವು ಕಟ್ಟಲ್ಪಡುತ್ತದೆ.

- Bro. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ :

8000 ಹಳ್ಳಿಗಳಲ್ಲಿ VBS ಸೇವೆಗಳು ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al jojobet giris jojobet giriş jojobet giris jojobet marsbahis giriş jojobet giriş jojobet holiganbet giriş casibom jojobet bets10 extrabet bahiscasino süperbetin holiganbet jojobet giriş casibom holiganbet