Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.05.2026
Share:

By Village Missionary Movement

Friday, 01-May-2026

ಧೈನಂದಿನ ಧ್ಯಾನ(Kannada) – 01.05.2026

 

ವಿಶ್ವ ಕಾರ್ಮಿಕರ ದಿನ 

 

“...ನಾನು ನಿಮ್ಮೊಂದಿಗೆ ಇದ್ದೇನೆಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ" - ಹಗ್ಗಾಯ 2:4

 

ಎಲ್ಲಾ ದೇವರ ಮಕ್ಕಳಿಗೆ ಕಾರ್ಮಿಕರ ದಿನದ ಶುಭಾಶಯಗಳು. ಈ ಆಶೀರ್ವಾದದ ವಾಗ್ದಾನವನ್ನು ಪ್ರವಾದಿಯಾದ ಹಗ್ಗಾಯನ ಮೂಲಕ ಆಲಯವನ್ನು ಕಟ್ಟಲು ಆಯಾಸಗೊಂಡಿದ್ದ ಜನರಿಗೆ ನೀಡಲಾಯಿತು. ಇಂದು 'ವಿಶ್ವ ಕಾರ್ಮಿಕ ದಿನ'ವನ್ನು ಆಚರಿಸುತ್ತಿರುವ ಕಾರ್ಮಿಕರೆಲ್ಲರಿಗೆ ಇದು ಕರ್ತನ ವಾಗ್ದಾನವಾಗಿದೆ! 

 

ಆದಿಕಾಂಡ 1:26-30 ರಲ್ಲಿ ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂವಿುಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಭೂಮಿಯ ಮೇಲಿನ ಎಲ್ಲವನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಮನುಷ್ಯನು ಕೆಲಸ ಮಾಡಬೇಕೆಂದು ಕರ್ತನು ಆಜ್ಞಾಪಿಸಿದನು. ಕೀರ್ತನೆ 15:5 ರಲ್ಲಿ, ತನ್ನ ಹಣವನ್ನು ಬಡ್ಡಿಗೆ ಕೊಡುವದಿಲ್ಲ; ನಿರಪರಾಧಿಗೆ ವಿರೋಧವಾಗಿ ಲಂಚ ತಕ್ಕೊಳ್ಳುವದಿಲ್ಲ. ಇವುಗಳನ್ನು ಮಾಡುವವನು ಎಂದೆಂದಿಗೂ ಕದಲದೆ ಇರುವನು. ಜ್ಞಾನೋಕ್ತಿ 16:11 ರಲ್ಲಿ, ವ್ಯಾಪಾರಿಗಳು ಉಪಯೋಗಿಸುವ ನ್ಯಾಯದ ತೂಕವೂ ತಕ್ಕಡಿಯೂ ಕರ್ತನವು. ಜ್ಞಾನೋಕ್ತಿ 20:10,23 ರಲ್ಲಿ, ವಿಧ ವಿಧವಾದ ತೂಕಗಳೂ ತರತರವಾದ ಅಳತೆಗಳೂ ಇವೆರಡೂ ಸಮವಾಗಿಯೇ ಕರ್ತನಿಗೆ ಅಸಹ್ಯ. ಆದ್ದರಿಂದ, ವ್ಯಾಪಾರಿಗಳು ಕರ್ತನಿಗೆ ಭಯಪಟ್ಟು ಆತನ ವಾಕ್ಯದ ಪ್ರಕಾರ ವ್ಯಾಪಾರ ಮಾಡಬೇಕು.

 

ಯೇಸು ಕ್ರಿಸ್ತನು ಸಹ ಒಬ್ಬ ಒಳ್ಳೆಯ ಕೆಲಸಗಾರ. ಮಾರ್ಕ 6:3 ರಲ್ಲಿ, "ಈತನು ಬಡಗಿಯಲ್ಲವೇ?" ಯೇಸು ತಾನು ಬೆಳೆದ ಊರಿನಲ್ಲಿ ತನ್ನ ಶಿಷ್ಯರೊಂದಿಗೆ ಸಭಾಮಂದಿರದಲ್ಲಿ ಬೋಧಿಸುವುದನ್ನು ಕಂಡು ಆಶ್ಚರ್ಯಪಟ್ಟು, ಈ ಬಡಗಿಯ ಕೆಲಸ ಮಾಡುವವನಿಗೆ ಯಾವ ರೀತಿಯ ಜ್ಞಾನವಿದೆ ಎಂದು ಹೇಳಿದರು. ಆದ್ದರಿಂದ, ಯಾವ ಕೆಲಸವೂ ಹೀನವಾದದ್ದಲ್ಲ, ಅದು ಆಶೀರ್ವಾದವೇ. 2 ಥೆಸಲೊನೀಕ 3:10 ರಲ್ಲಿ, ಕೆಲಸ ಮಾಡಲೊಲ್ಲದವನು ಊಟ ಮಾಡಲೂಬಾರದು. ದುಡಿದು ತಿನ್ನುವುದೇ ಕರ್ತನಿಗೆ ಇಷ್ಟ. 

 

ಕೆಲಸದ ಒಂದು ರಹಸ್ಯವಿದೆ. ನೀವು ಮಾಡುವ ಕೆಲಸವು ಆಶೀರ್ವಾದವಾಗಿರಲು ಎಡೆಬಿಡದೆ ಪ್ರಾರ್ಥಿಸಿರಿ. ಸತ್ಯವೇದವನ್ನು ಓದಿ ಧ್ಯಾನಿಸಿರಿ. ದೇವರಿಗಾಗಿ ಉತ್ಸಾಹದಿಂದ ಕೊಡಿರಿ. ನೀವು ಮಾಡುವ ಕೆಲಸ ಮತ್ತು ನಿಮ್ಮ ಶ್ರಮವನ್ನು ಕರ್ತನು ಆಶೀರ್ವದಿಸುತ್ತಾರೆ. 

 

ಈ ಕಾರ್ಮಿಕ ದಿನದಂದು, ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮತ್ತು ಉತ್ಸಾಹದಿಂದ ಮಾಡಲಿ. ನಾನು ಎಲ್ಲಾ ಕೆಲಸಗಾರರೊಂದಿಗೆ ಇದ್ದೇನೆ ಎಂದು ಹಗ್ಗಾಯ ಪ್ರವಾದಿಯ ಮೂಲಕ ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. 

- Rev. S. ಜ್ಯೋತಿ ನಾಯಗಂ

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಿಗಾಗಿಯೂ ಸೇವೆಯ ಅಗತ್ಯಗಳಿಗಾಗಿಯೂ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş