Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.04.2026
Share:

By Village Missionary Movement

Thursday, 30-Apr-2026

ಧೈನಂದಿನ ಧ್ಯಾನ(Kannada) – 30.04.2026

 

ರೂಪಿಸುತ್ತಾರೆ

 

"...ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ, ಹಾಗೆಯೇ ನೀವು ನನ್ನ ಕೈಯಲ್ಲಿದ್ದೀರಿ" - ಯೆರೆಮಿಯ 18:6

 

ರೇಷ್ಮಾ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಉಡುಗೊರೆಯನ್ನು ಖರೀದಿಸಲು ಅಂಗಡಿಗೆ ಹೋದಳು. ಅಂಗಡಿಯಲ್ಲಿನ ಯಾವುದೇ ವಸ್ತುಗಳು ಅವಳಿಗೆ ಇಷ್ಟವಾಗಲಿಲ್ಲ. ಆ ಸಮಯದಲ್ಲಿ, ಅಂಗಡಿಯೊಳಗೆ ಮಾತನಾಡುವ ಶಬ್ದ ಕೇಳಿಸಿತು. ಅವಳು ಶಬ್ದ ಬಂದ ಸ್ಥಳಕ್ಕೆ ಹೋದಳು. ಒಂದು ಮೂಲೆಯಲ್ಲಿ ಮಣ್ಣಿನ ಚಹಾ ಕಪ್ ಇತ್ತು. ಅವಳು ಚಹಾ ಕಪ್ ಅನ್ನು ನೋಡಿ, 'ನೀನು ತುಂಬಾ ಸುಂದರವಾಗಿದ್ದೀಯ' ಎಂದು ಹೇಳಿದಳು. ಅದಕ್ಕೆ ಅದು ಉತ್ತರಿಸಿತು, "ಮೊದಲು ನಾನು ಜೇಡಿಮಣ್ಣಾಗಿದ್ದೆ. ಕುಂಬಾರನು ನನ್ನನ್ನು ಇದಕ್ಕೆ ಬದಲಾಯಿಸಲು ಅನೇಕ ಕಷ್ಟಕರ ಪ್ರಕ್ರಿಯೆಗಳ ಮೂಲಕ ಕರೆದೊಯ್ದರು. ನನಗೆ ತುಂಬಾ ಅನಾರೋಗ್ಯ ಅನಿಸಲು ಪ್ರಾರಂಭಿಸಿತು. ನಾನು ಅಳುತ್ತಾ, 'ನನ್ನನ್ನು ಬಿಟ್ಟುಬಿಡಿ' ಎಂದು ಹೇಳಿದೆನು. ಆದರೆ ಅವರು, 'ತಾಳ್ಮೆಯಿಂದಿರು' ಎಂದು ಹೇಳಿದರು. ನಾನು ಒಳ್ಳೆಯ ಆಕಾರ ಪಡೆಯುವವರೆಗೆ ಅವರು ನನ್ನನ್ನು ರೂಪಿಸಿದರು. ನಂತರ ಅವರು ನನ್ನನ್ನು ಬೆಂಕಿಯಲ್ಲಿ ಸುಟ್ಟರು. ನನಗೆ ತುಂಬಾ ಬಿಸಿಯಾಗುತ್ತಿದೆ ಎಂದು ನಾನು ಕಿರುಚಿದೆ. ಅವರು ನನ್ನನ್ನು ಬಣ್ಣ ಬಳಿದು ಕನ್ನಡಿಯ ಮುಂದೆ ನಿಲ್ಲಿಸಿದರು. ನಾನು ನೋಡಲು ತುಂಬಾ ಸುಂದರವಾಗಿದ್ದೆ. ನನಗೆ ತುಂಬಾ ಸಂತೋಷವಾಯಿತು. ಅವರು ನನ್ನನ್ನು ನೋಡಿ, "ನೀನು ಜೇಡಿಮಣ್ಣಾಗಿದ್ದೆ. ನಾನು ನಿನ್ನನ್ನು ತೆಗೆದುಕೊಂಡು ರೂಪಿಸಿದೆ. ನಿನಗೆ ನೋವಾಗುತ್ತದೆ ಎಂದು ನಾನು ನಿನ್ನನ್ನು ಒಲೆಯಲ್ಲಿ ಸುಡದೇ ಇದಿದ್ದರೆ, ನೀನು ನಿಷ್ಪ್ರಯೋಜಕವಾಗುತ್ತಿದ್ದೆ. ನಿನ್ನನ್ನು ಸುಂದರವಾಗಿಸಲು ನಾನು ತುಂಬಾ ಶ್ರಮಿಸಿದ್ದೇನೆ" ಎಂದು ಹೇಳಿದರು. ಇದೆಲ್ಲವನ್ನೂ ಕೇಳಿದ ನಂತರ, ರೇಷ್ಮಾ ತನ್ನ ತಾಯಿಗೆ ಉಡುಗೊರೆಯಾಗಿ ಚಹಾ ಕಪ್ ಅನ್ನು ಖರೀದಿಸಿ ಯೆರೆಮೀಯ 18:6 ಅನ್ನು ಬರೆದುಕೊಟ್ಟಳು.

 

ಕರ್ತನು ಯೆರೆಮಿಯನಿಗೆ, ನೀನೆದ್ದು ಕುಂಬಾರನ ಮನೆಗೆ ಹೋಗು, ಅಲ್ಲಿ ನಾನು ನನ್ನ ಮಾತುಗಳನ್ನು ನಿನಗೆ ತಿಳಿಸುತ್ತೇನೆ ಎಂದು ಹೇಳಿದರು. ಯೆರೆಮಿಯನು ಹೋದಾಗ, ಕುಂಬಾರನು ಮಡಿಕೆಗಳನ್ನು ಮಾಡುತ್ತಿದ್ದನು. ಕುಂಬಾರನ ಪಾತ್ರೆ ಅವನ ಕೈಯಲ್ಲಿ ಹಾಳಾಗಿತ್ತು, ಆದ್ದರಿಂದ ಅವರು ಅದನ್ನು ಸರಿಪಡಿಸಲು ಇನ್ನೊಂದು ಪಾತ್ರೆಯನ್ನಾಗಿ ಮಾಡಿದರು. ಆಗ ಕರ್ತನ ವಾಕ್ಯವು ಯೆರೆಮಿಯನಿಗೆ ಉಂಟಾಗಿ, "ಓ ಇಸ್ರೇಲ್ ಮನೆತನವೇ, ಈ ಕುಂಬಾರನು ಮಾಡಿದಂತೆ ನಾನು ನಿಮಗೆ ಮಾಡಬಾರದೇ?" ಎಂದು ಕರ್ತನು ಪ್ರೇರೇಪಿಸಿದರು.

 

ನನಗೆ ಪ್ರಿಯವಾದವರೇ, ನಾವು ಯೇಸುವಿನ ಕೈಯಲ್ಲಿ ಜೇಡಿಮಣ್ಣಾಗಿದ್ದೇವೆ, ಅವರು ನಮ್ಮ ಜೀವನದಲ್ಲಿ ಕುಂಬಾರನೂ ಆಗಿದ್ದಾರೆ. ನಮ್ಮ ಭವಿಷ್ಯವು ಉತ್ತಮವಾಗುವಂತೆ ನಮ್ಮನ್ನು ಹೇಗೆ ರೂಪಿಸಬೇಕೆಂದು ಅವರಿಗೆ ತಿಳಿದಿದೆ. ಬಹುಶಃ ಅವರು ನಮ್ಮನ್ನು ನಡೆಸುವ ಮಾರ್ಗವು ಕಷ್ಟಕರವಾಗಿ, ಕಠಿಣವಾಗಿ ನೋವಿನಿಂದ ಕೂಡಿರಬಹುದು. ಅವೆಲ್ಲವೂ ಕೂಡ ನಮ್ಮನ್ನು ರೂಪಿಸುವುದಕ್ಕಾಗಿ, ನಮ್ಮನ್ನು ಸುವರ್ಣವಾಗಿ ಮಾರ್ಪಡಿಸುವುದಕ್ಕಾಗಿಯೇ. ನಾವು ಒಂದೇ ಒಂದು ಕೆಲಸವನ್ನು ಮಾಡಬೇಕು. ನಮ್ಮನ್ನು ತಗ್ಗಿಸಿಕೊಂಡು ಆತನ ಕೈಗಳಿಗೆ ಸಂಪೂರ್ಣವಾಗಿ ಶರಣಾದರೆ ಸಾಕು. ಆತನು ನಮ್ಮ ಜೀವನವನ್ನು ಉತ್ತಮವಾಗಿ ರೂಪಿಸುತ್ತಾರೆ ಮತ್ತು ನಮ್ಮನ್ನು ಉನ್ನತೀಕರಿಸುತ್ತಾರೆ. 

- Sis. ಸಿಂಧು

 

ಪ್ರಾರ್ಥನಾ ಅಂಶ:

ಶಾಲಾ ಸೇವೆಗಳಲ್ಲಿ ಮಕ್ಕಳು ಕಲಿತ ವಚನಗಳು ಅವರ ಹೃದಯದಲ್ಲಿ ಕೆತ್ತಲ್ಪಟ್ಟು ಆಚರಣೆಗೆ ಬರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş