Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.04.2026 (Kids Special)
Share:

By Village Missionary Movement

Sunday, 26-Apr-2026

ಧೈನಂದಿನ ಧ್ಯಾನ(Kannada) – 26.04.2026 (Kids Special)

 

ಕರುಣೆಯುಳ್ಳವನಾಗಿರು

 

"ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ" - ಕೊಲೊಸ್ಸೆ 3:23

 

Hai ಪುಟಾಣಿಗಳೇ, ನೀವೆಲ್ಲರು ಚೆನ್ನಾಗಿದ್ದೀರಾ? ಹ್ಮ್... ಸೂಪರ್ ಆಗಿ ಇದ್ದೀವಿ ಅಕ್ಕ ಎಂದು ಹೇಳುತ್ತೀರಾ. ಸರಿ, ಯಾರಿಗೆಲ್ಲಾ ತುಂಬಾ ದೂರ ಪ್ರಯಾಣಿಸಲು ಇಷ್ಟ. ಅದು ಕೂಡ ಪರ್ವತಗಳು ಮತ್ತು ನದಿಗಳಿರುವ ಪ್ರದೇಶದಲ್ಲಿ, ಪ್ರಕೃತಿಯನ್ನು ಆನಂದಿಸುತ್ತಾ ಹೋಗುತ್ತಿದ್ದರೆ, ಸಂತೋಷವಾಗಿ ತಾನೇ ಇರುರುತ್ತದೆ. ಜಾಲಿ ಜಾಲಿ ಅಂತ ತಾನೇ ಹೇಳ್ತಿರ. ಇದರಂತೆ ಪುಟಾಣಿಗಳೇ, ಒಂದು ದಿನ, ರಂಜಿತ್ ಅವನ ಹೆತ್ತವರೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸಿದನು. ಅಲ್ಲಿ ನೋಡಿ ಎಷ್ಟು ಸುಂದರವಾಗಿದೆ ಎಂದು ಸಂತೋಷದಿಂದ ಪ್ರಕೃತಿಯನ್ನು ಆನಂದಿಸುತ್ತಾ ಹೋದನು. ಹೋಗುವ ದಾರಿಯಲ್ಲಿ, ಕೆಲವರು ಸೈಕಲ್‌ಗಳಲ್ಲಿ ಹೋದರು. ಸೈಕಲ್‌ಗಳಲ್ಲಿ ಹೋದವರು ಅತಿ ವೇಗದಲ್ಲಿ ಹೋದರು. ಕೆಲವರು ಕಾರುಗಳಲ್ಲಿ ಹೋದರು. ದೊಡ್ಡ ಕಂಟೇನರ್ ಟ್ರಕ್ ಹೋಯಿತು. ಅವರು ಹೋದ ಬಸ್ ನಿಧಾನವಾಗಿ ಚಲಿಸುತ್ತಿತ್ತು. ರಂಜಿತ್ ಕೂಡ ಎಲ್ಲವನ್ನು ನೋಡಿ ಆನಂದಿಸುತ್ತಾ ಜೋಳ ತಿನ್ನುತ್ತಾ ತಾಯಿಯೊಂದಿಗೆ ಮಾತನಾಡುತ್ತಲೇ ಹೋದನು.

 

ಸ್ವಲ್ಪ ಸಮಯದ ನಂತರ, ಡಮ್ಮಾಲ್... ಎಂಬ ದೊಡ್ಡ ಶಬ್ದ ಕೇಳಿಸಿತು. ಅಯ್ಯೋ! ಅಮ್ಮಾ ಎಂದು ಕಂಬಿಯನ್ನು ಹಿಡಿದು ಸಧ್ಯಕ್ಕೆ ಹೇಗೋ ಕೆಳಗೆ ಬೀಳದಂತೆ ನೋಡಿಕೊಂಡನು ರಂಜಿತ್. ಏನು ಸಮಸ್ಯೆ ಎಂದು ನೋಡಲು ಎಲ್ಲರೂ ಕೆಳಗೆ ಇಳಿದುಬಿಟ್ಟರು. ನೋಡಿದರೆ, ಎದುರು ದಿಕ್ಕಿನಿಂದ ಬಂದ ಆಟೋ, ಪಕ್ಕಕ್ಕೆ ಹೋಗಲು ಜಾಗವಿಲ್ಲದೆ, ರಂಜಿತ್ ಪ್ರಯಾಣಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಆಟೋ ಚಾಲಕ ಗಾಬರಿಗೊಂಡು ನಡುಗುತ್ತಾ, ನಿಟ್ಟುಸಿರುಬಿಡುತ್ತಾ ಒಬ್ಬರ ಕೈಗಳನ್ನು ಗಟ್ಟಿಯಾಗಿ ಹಿಡಿದರು. ನೀವಾಗಿದ್ದರೆ ಪುಟಾಣಿಗಳೇ ಅಲ್ಲಿ ಏನು ಮಾಡುತ್ತಿದ್ದಿರಿ. ಅಂತಹ ಪರಿಸ್ಥಿತಿಯಲ್ಲಿ, ಬಾಧಿಸಲ್ಪಟ್ಟವರ ಭಯವನ್ನು ಹೋಗಲಾಡಿಸಲು ನೀವು ಧೈರ್ಯದಿಂದ ಮಾತನಾಡಬೇಕು. ನೀವು ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಪ್ರಥಮ ಚಿಕಿತ್ಸೆ ನೀಡಲು ಮುಂದಾಗಬೇಕು. ಆದರೆ ಅಲ್ಲಿ ನಿಂತಿದ್ದ ಜನರು, ಅಂದರೆ, ಬಸ್ ಚಾಲಕ ಮತ್ತು ಕಂಡಕ್ಟರ್, ಎಲ್ಲರೂ ಆಟೋ ಓಡಿಸುತ್ತಿದ್ದ ಅಣ್ಣನನ್ನು ಬೈದರು. ಆ ಅಣ್ಣ ತಿಳಿಯದೆ ತಾನೆ ಡಿಕ್ಕಿ ಹೊಡೆದರು. ಅವರನ್ನು ಕ್ಷಮಿಸಬೇಕಿತ್ತು ತಾನೇ. ಇದನ್ನು ನೋಡುತ್ತಿದ್ದ ಹಿರಿಯರೊಬ್ಬರು ಅವನಿಗೆ ಸಹಾಯ ಮಾಡಿದರು. ಇದನ್ನು ನೋಡುತ್ತಾ, ರಂಜಿತ್‌ನ ಹೃದಯವು ತುಂಬಾ ಕಲಕಿತು. ನಾನೂ ಹೀಗೆ ಕರುಣಾಮಯಿಯಾಗಬೇಕೆಂದು ಬಯಸಿದನು! ಬಸ್ ಮತ್ತೆ ಪ್ರಾರಂಭವಾಯಿತು. ಹಿರಿಯನ ಕಾರ್ಯಗಳು ರಂಜಿತ್‌ನ ಹೃದಯದಲ್ಲಿ ಚಲನಚಿತ್ರದಂತೆ ಓಡುತ್ತಿತ್ತು.

 

ಪ್ರೀತಿಯ ತಮ್ಮ ತಂಗಿ, ನೀವು ನಿನ್ನಂತೆ ನಿನ್ನ ನೆರೆಯವನನ್ನು ಪ್ರೀತಿಸಲು ಯೇಸು ನಮಗೆ ಕಲಿಸಿಕೊಟ್ಟಿದ್ದಾರೆ. ನಿಮಗೆ ಒಂದು ವಿಷಯ ಗೊತ್ತಾ?ನಾವು ಬಡವರಿಗೆ ಮತ್ತು ಬಳಲುತ್ತಿರುವವರಿಗೆ ಏನೇ ಮಾಡಿದರೂ ಅದು ಯೇಸುವಿಗೆ ಮಾಡಿದಂತೆ. ನಾವು ಅವರ ಬಗ್ಗೆ ಕರುಣೆ ತೋರಿ ಅವರಿಗೆ ಸಹಾಯ ಮಾಡಿದರೆ, "ಯೇಸು" ನಮ್ಮ ಕಷ್ಟಗಳಲ್ಲಿ ನಮಗೆ ಕರುಣೆ ತೋರಿ ನಮಗೆ ಸಹಾಯ ಮಾಡುತ್ತಾರೆ. ಆಗ, ನಾವು ಕರುಣೆ ತೋರಿ ಇತರರಿಗೆ ಸಹಾಯ ಮಾಡಿದರೆ, ನೀನು ಸಹ ಯೇಸಪ್ಪನ ಪ್ರೀತಿಯ ಮಗು.

- G. ಎಸ್ತೇರ್ ಸೆಲ್ವಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş