Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.04.2026
Share:

By Village Missionary Movement

Tuesday, 21-Apr-2026

ಧೈನಂದಿನ ಧ್ಯಾನ(Kannada) – 21.04.2026

 

ಸಂತೃಪ್ತಿ 

 

“...ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ." - ಫಿಲಿಪ್ಪಿ 4:11

 

ಕೊಳದಲ್ಲಿ ವಾಸಿಸುತ್ತಿದ್ದ ಮೀನೊಂದು ಪ್ರತಿದಿನ ಬೆಳಿಗ್ಗೆ ಆಕಾಶದತ್ತ ನೋಡುತ್ತಿತ್ತು. ಆ ಕೊಳದ ಮೇಲೆ ಹಾರುವ ಪಕ್ಷಿಗಳನ್ನು ನೋಡಿ, ಇವರು ಎಷ್ಟು ಅದೃಷ್ಟವಂತರು, ಪ್ರಪಂಚದಾದ್ಯಂತ ಹಾರುತ್ತಾ, ಪ್ರಪಂಚದ ಸೌಂದರ್ಯವನ್ನೆಲ್ಲಾ ಕಂಡು ಆನಂದಿಸುತ್ತಿವೆ. ಆದರೆ ನಾನೋ ಈ ನೀರಿನಲ್ಲೇ ನನ್ನ ಜೀವನವೆಲ್ಲಾ ಕಳೆಯುತ್ತಿದ್ದೇನೆ" ಎಂದು ಹೇಳುತ್ತಾ ಅಸಂತೃಪ್ತಿ ಯಿಂದ ಬದುಕುತ್ತಿತ್ತು. 

 

ಒಂದು ದಿನ, ಒಂದು ಕೊಕ್ಕರೆ ಆ ಬದಿಯಲ್ಲಿ ಹಾರಿ ಹೋಯಿತು. ತಕ್ಷಣ, ಈ ಮೀನು ನಾನು ಕೂಡ ಆ ಕೊಕ್ಕರೆಯಂತೆ ಪ್ರಪಂಚದ ಸೌಂದರ್ಯವನ್ನು ಆನಂದಿಸುತ್ತೇನೆ ಎಂದು ಹೇಳಿ ನೀರಿನಿಂದ ಜಿಗಿಯಿತು. ಈ ಸುಂದರವಾದ ಭೂಮಿಯನ್ನು ನೋಡಿ ಉಲ್ಲಾಸವಾಗಿ ಸಂತೋಷಪಟ್ಟಿತು. ಆದರೆ ಆ ಸಂತೋಷ ತುಂಬಾ ಹೊತ್ತು ಉಳಿಯಲಿಲ್ಲ. ಕೆಲವೇ ನಿಮಿಷಗಳಲ್ಲಿ, ಮೀನು ಸತ್ತುಹೋಯಿತು. ಇದು ಒಂದು ಕಾಲ್ಪನಿಕ ಕಥೆಯಾಗಿದ್ದರೂ, ಅದು ನಮಗೆ ಕಲಿಸುವ ಪಾಠವು ಶಕ್ತಿಯುತವಾಗಿದೆ.

 

ಇಂದು, ಹೆಚ್ಚಿನ ಜನರು ಅಸಂತೃಪ್ತಿಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಇತರರ ಬಳಿ ಇರುವ ಸೌಕರ್ಯಗಳು ನಮಗಿಲ್ಲವೇ ಎಂದು ಅಸೂಯೆ ಪಡುವುದು, ಅಸಂತೃಪ್ತಿ ಹೊಂದುವುದು ಹೀಗೆ ಕಾಲವೆಲ್ಲಾ ತಾಳ್ಮೆಯ ಮನೋಭಾವವುಳ್ಳವರಾಗಿಯೇ ಜೀವಿಸುತ್ತಿದ್ದಾರೆ. ಇದೊಂದು ಆರೋಗ್ಯಕರವಾದ ಜೀವನ ಪದ್ಧತಿ ಅಲ್ಲ. “ನಾನು ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು, ನಾನು ತೃಪ್ತನಾಗಿ ದ್ದರೂ ಹಸಿದವನಾಗಿದ್ದರೂ ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲಿರುವವನಾದರೂ ಅವೆಲ್ಲವುಗಳನ್ನು ನಾನು ಕಲಿತು ಕೊಂಡಿದ್ದೇನೆ. ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು" (ಫಿಲಿಪ್ಪಿ 4:13) ಎಂದು ಹೇಳುವ ಪೌಲನ ಹಾಗೆ ನಾವು ಸಹ ಜೀವಿಸೋಣ. 

 

“ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ." (1 ತಿಮೊ. 6:6) ಎಂಬ ವಚನದ ಪ್ರಕಾರ, ದೇವರು ನಮಗೆ ಕೊಟ್ಟಿರುವದರಲ್ಲಿ ನಾವು ತೃಪ್ತರಾಗಲು ಕಲಿಯಬೇಕು. ನಮ್ಮಲ್ಲಿಲ್ಲದದ್ದಕ್ಕಾಗಿ ಹಾತೊರೆಯುವುದು ನಿರಾಶೆ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ನಮಗೆ ಇರುವುದು ಸಾಕು ಎಂದು ಇದ್ದಾಗಲೇ ನೆಮ್ಮದಿ ನಮ್ಮನ್ನು ಹುಡುಕಿ ಬರುತ್ತದೆ. ಈ ಜಗತ್ತಿನಲ್ಲಿ ಸಾಮಾನ್ಯ ಮೂಲಭೂತ ಸೌಕರ್ಯಗಳೂ ಸಹ ಇಲ್ಲದೆ ಬದುಕುವ ಕೋಟ್ಯಂತರ ಜನರಿದ್ದಾರೆ. ಆದರೆ ದೇವರು ನಮಗೆ ತಿನ್ನಲು ಆಹಾರ, ಧರಿಸಲು ಬಟ್ಟೆ ಮತ್ತು ಉಳಿಯಲು ಆಶ್ರಯದೊಂದಿಗೆ ಉತ್ತಮ ಜೀವನವನ್ನು ನೀಡಿದ್ದಾರೆ. ಆದ್ದರಿಂದ ನಾವು ನಮ್ಮಲ್ಲಿರುವದರಲ್ಲಿ ಸಂತೃಪ್ತರಾಗಿ ಬದುಕಲು ಕಲಿಯೋಣ.

- Mrs. ಕಲೈಚೆಲ್ವಿ ಪಾಲ್ ರಾಜ್ 

 

ಪ್ರಾರ್ಥನಾ ಅಂಶ:

ಉಜ್ಜೀವನವನ್ನು ಬಯಸುವ ಪಾಲುದಾರರಾಗಿ ಸೇರಿಕೊಂಡವರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet setrabet betnano casibom casibom holiganbet casibom marsbahis casibom güncel giriş casibom giriş casibom casinomilyon setrabet queenbet mavibet hiltonbet casibom giriş