Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.06.2021 (Kids Special)
Share:

By Village Missionary Movement

Saturday, 19-Jun-2021

ಧೈನಂದಿನ ಧ್ಯಾನ(Kannada) – 20.06.2021 (Kids Special)

 

ಸಿದ್ಧವಾಗೋಣ

 

“ನಿನ್ನ ನಿಬಂಧನೆಗಳಲ್ಲಿ ಉಲ್ಲಾಸಪಡುವೆನು; ನಿನ್ನ ವಾಕ್ಯವನ್ನು ಮರೆಯುವದಿಲ್ಲ” - ಕೀರ್ತನೆಗಳು 119:16

 

"ಲೋ! ರಾಬರ್ಟ್ ಇಲ್ಲಿ ಬಾರೋ. ಅಮ್ಮನಿಗೆ ಸಹಾಯ ಮಾಡೋಕೆ. ಬೀದಿಯ ಕೊಳಾಯಿನಲ್ಲಿ ನೀರು ಬರುತ್ತಾ ಇದೆ ಎರಡು ಬಿಂದಿಗೆ ತಗೊಂಡು ಬಾ"ಎಂದು ಹೇಳಿದರು. ಸರಿ ಅಮ್ಮ... ಎಂದು ಹೇಳಿ ನೀರು ಹಿಡಿಯಲು ಹೋದರು ರಾಬರ್ಟ್. ಹೋಗೋ ದಾರಿಯಲ್ಲಿ ಬೆರಳುಗಳನ್ನು ಗನ್ ಹಾಗೆ ಇಟ್ಟುಕೊಂಡು ಡುಮೀಲ್, ಡುಮೀಲ್ ಎಂದು ಹೇಳಿಕೊಂಡೆ ಹೋದನು. ರಾಬರ್ಟ್ ಗೆ ಸೈನಿಕನಾಗಬೇಕು ಎಂದು ಬಹಳ ಆಸೆ. ತಾನೊಂದು ಸೈನಿಕನಾಗಬೇಕು ಎಂದು ಯಾವಾಗಲೂ ಅಮ್ಮನ ಬಳಿ ಹೇಳುತ್ತಿರುತ್ತಾನೆ. ಅಮ್ಮ ಹೇಳುತ್ತಾರೆ, ಪ್ರತಿದಿನವೂ ಸತ್ಯವೇದ ಓದಿ ಪ್ರಾರ್ಥಿಸಬೇಕು ತಮ್ಮ. ಆಗಲೇ ನೀನೆಲ್ಲಿ ಹೋದರು ಯೇಸಪ್ಪ ನಿನ್ನ ಜೊತೆಯಲ್ಲೇ ಇರುತ್ತಾರೆ ಎಂದು ಹೇಳಿದ್ದು, "ಹೋಗಮ್ಮ ನಿನಗೆ ಬೇರೆ ಕೆಲಸಾನೆ ಇಲ್ವಾ" ಎಂದು ಗೇಲಿಯಾಗಿ ಕೇಳುತ್ತಾನೆ. ಯೇಸಪ್ಪ ರಾಬರ್ಟ್ ಅನ್ನು ಹೇಗಾದರೂ ನಿಮ್ಮ ಮಾರ್ಗದಲ್ಲಿ ನಡೆಸಿರಿ ಎಂದು ಅಮ್ಮ ಪ್ರಾರ್ಥಿಸುತ್ತಲೇ ಇದ್ದರು.

 

ಕೆಲವು ವರ್ಷಗಳ ನಂತರ ರಾಬರ್ಟ್ ಇಷ್ಟಪಟ್ಟಂತೆ ಸೈನಿಕನಾಗಿ ಸೆಲೆಕ್ಟ್ ಆದನು. ಸಂತೋಷದೊಂದಿಗೆ ಸಿದ್ಧನಾದನು. ಅಮ್ಮನೂ ಅವನಿಗೆ ಬೇಕಾದ ಎಲ್ಲವನ್ನು ತೆಗೆದುಕೊಟ್ಟು ಬಿಟ್ಟು, ಒಂದು ಹೊಸ ಒಡಂಬಡಿಕೆಯನ್ನು ಕೊಟ್ಟು ನಿನ್ನ ಶರ್ಟ್ ಜೇಬಿನಲ್ಲಿ ಯಾವಾಗಲೂ ಇಟ್ಟುಕೋ. ಸತ್ಯವೇದವನ್ನು ಪ್ರತಿದಿನವೂ ಓದಲು ಮರೆಯಬೇಡ ಎಂದು ಹೇಳಿದರು. ಸರಿಯೆಂದು ರಾಬರ್ಟ್ ತೆಗೆದು ಇಟ್ಟುಕೊಂಡನು. ಒಂದು ದಿನ ಯುದ್ಧದಲ್ಲಿ ರಾಬರ್ಟನ್ನು ಸುಟ್ಟುಬಿಟ್ಟರು. ಅಷ್ಟೆ ಎಲ್ಲವೂ ಮುಗಿಯಿತು ಎಂದು ನೆನಸಿದನು. ಎದ್ದು ನೋಡಿದನು ಯಾವ ತೊಂದರೆಯೂ ಇಲ್ಲ. ಸತ್ಯವೇದವನ್ನು ಓದಲಿಲ್ಲವೆಂದರೂ ಶರ್ಟ್ ಜೇಬಿನಲ್ಲಿ ಯಾವಾಗಲೂ ಚಿಕ್ಕ ಹೊಸ ಒಡಂಬಡಿಕೆಯನ್ನು ಇಟ್ಟುಕೊಳ್ಳುತ್ತಾನೆ. ಗುಂಡು ಆ ಬೈಬಲ್ ಗೆ ಬಿದ್ದು ನಿಂತುಬಿಟ್ಟಿತು.ಬೈಬಲ್ ನ್ನು ತೆಗೆದನು, ಗುಂಡು ಯೋಹಾನ 3:16 ವರೆಗೂ ಬಿದ್ದು ನಿಂತುಬಿಟ್ಟಿತ್ತು. "ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು" ಎಂದು ಓದಿದನು. ಯೇಸುಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡನು. ಆ ದಿನದಿಂದ ಆಸೆಯಿಂದ ಸತ್ಯವೇದವನ್ನು ಓದಲೂ, ಪ್ರಾರ್ಥಿಸಲೂ ಪ್ರಾರಂಭಿಸಿದನು. ಚಿಕ್ಕವಯಸ್ಸಿನಿಂದಲೇ ಅಮ್ಮ ಹೇಳಿದ್ದನ್ನು ಕೇಳಲಿಲ್ಲವೇ ಎಂಬುದನ್ನು ಗ್ರಹಿಸಿದನು. ರಾಬರ್ಟ್ ಅವನ ಮಾನಸಾಂತರವನ್ನು ಅಮ್ಮನೊಂದಿಗೆ ಹಂಚಿಕೊಂಡನು.ಅಮ್ಮನಿಗಾದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ರಾಬರ್ಟ್ ಇರುವ ಸ್ಥಳದಲ್ಲಿಯೇ ಸಾಕ್ಷಿಯಾಗಿ ಜೀವಿಸಲು ಪ್ರಾರಂಭಿಸಿದನು.

 

ಏನು ಕುಟ್ಟೀಸ್! ಯಾವಾಗ ನೋಡಿದರೂ ಸತ್ಯವೇದವನ್ನು ಓದು, ಪ್ರಾರ್ಥಿಸು ಅಂತ ಹೇಳುತ್ತಲೇಯಿದ್ದೀರಂತ ನೆನಸುತ್ತೀರಾ? ಸತ್ಯವೇದವನ್ನು ಓದಿ ಪ್ರಾರ್ಥಿಸುವುದರ ಮೂಲಕವೇ ದೇವರೊಂದಿಗೆ ನೀವು ಸಂಬಂಧವಾಗಿರಲು ಸಾಧ್ಯವಾಗುತ್ತದೆ. ಹೀಗೆ ಜೀವಿಸಿದರೇನೆ ದೇವರ ಬರೋಣಕ್ಕೆ ಸಿದ್ಧವಾಗಲು ಸಾಧ್ಯ. ಈ ಪ್ರಪಂಚದ ಜೀವನ ಒಂದು ದಿನ ಅಳಿದು ಹೋಗುತ್ತದೆ. ಆದರೆ ಪರಲೋಕದ ಜೀವನ ಎಂದಿಗೂ ಅಳಿಯುವುದಿಲ್ಲ, ಇದು ನಿತ್ಯವಾದದ್ದು. ಈ ನಿತ್ಯಜೀವನ ಹೊಂದಬೇಕಾದರೆ ಸತ್ಯವೇದವನ್ನು ಪ್ರತಿದಿನವೂ ಓದಿ, ಪ್ರಾರ್ಥಿಸಿ ಸಾಕ್ಷಿಯಾಗಿ ಜೀವಿಸಬೇಕು. ಏನು ರೆಡೀನಾ?

- Mrs. ಅನ್ಬುಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet