By Village Missionary Movement
Monday, 20-Apr-2026ಧೈನಂದಿನ ಧ್ಯಾನ(Kannada) – 20.04.2026
ಜೀವನದಲ್ಲಿ ಸಾಕ್ಷಿ
“…ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ" - ಎಫೆಸ 4:26
ಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನಾಗಿ ಅಂಗೀಕರಿಸಿ ಬದುಕುವ ವಿಶ್ವಾಸ ಕುಟುಂಬಗಳು ಪ್ರೀತಿ, ತಾಳ್ಮೆ ಮತ್ತು ದೈವಿಕ ಶಾಂತಿಯಿಂದ ತುಂಬಿದ ಒಂದು ಸಾಕ್ಷಿ ಕುಟುಂಬವಾಗಿ ಬದುಕಬೇಕು. ಸಣ್ಣ ಸಮಸ್ಯೆ ಮತ್ತು ಕಹಿ ಇದ್ದರೂ, ಆ ರಾತ್ರಿ ಮಲಗುವ ಮೊದಲು ಅದನ್ನು ಸರಿಪಡಿಸಿ, ವಿಶೇಷವಾಗಿ ಗಂಡ ಮತ್ತು ಹೆಂಡತಿ ಪರಸ್ಪರ ಕ್ಷಮಿಸಿ ಶಾಂತಿಯುತವಾಗಿ ಮಲಗಬೇಕು. ಇದುವೇ ಆರೋಗ್ಯಕರವಾದ, ಚಾರಿತ್ರ್ಯವಂತ ಮಕ್ಕಳ ರಚನೆಗೆ ಕಾರಣವಾಗುತ್ತದೆ.
ಕ್ರೈಸ್ತ ಕುಟುಂಬದಲ್ಲಿ ಜನಿಸಿದ ಆಲನ್ ರೆಡ್‌ಪಾತ್ ಎಂಬ ಯುವಕ ದೇವರನ್ನು ಸ್ವೀಕರಿಸದೆ ಜೀವಿಸುತ್ತಿದ್ದನು. ಒಮ್ಮೆ ಅವನ ತಂದೆ ತನ್ನ ತಾಯಿಯನ್ನು ತುಂಬಾ ಕೋಪದಿಂದ ಗದರಿಸಿದರು. ಅವನ ತಾಯಿ ಏನೂ ಉತ್ತರಿಸದೇ ಮೌನವಾಗಿದ್ದರು. ಆ ರಾತ್ರಿ, ಅವರು ಮೂವರು ಊಟಕ್ಕೆ ಕುಳಿತರು. ಆಗ ತಂದೆ ತನ್ನ ತಾಯಿಯ ಕೈ ಹಿಡಿದುಕೊಂಡು, ಇಂದು ಏಕೆ ನಿನ್ನ ಮೇಲೆ ಬಹಳ ಕಠಿಣವಾಗಿ ನಡೆದುಕೊಂಡೆ ಎಂದು ನನಗೇ ಗೊತ್ತಿಲ್ಲ. ಮೃಗದಂತೆ ನಡೆದುಕೊಂಡದ್ದನ್ನು ನೆನೆಸಿ ನನಗೆ ನಾಚಿಕೆಯಾಗುತ್ತಿದೆ ದಯವಿಟ್ಟು ನನ್ನನ್ನು ಕ್ಷಮಿಸಿಬಿಡು ಎಂದರು.
ಇದನ್ನು ನೋಡಿದ ಆಲೆನ್ ತನ್ನ ಕೋಣೆಗೆ ಹೋಗಿ ಮೊಣಕಾಲೂರಿ ಪ್ರಾರ್ಥಿಸಿದನು, "ದೇವರೇ, ನನಗೆ ಇಂತಹ ಒಂದು ತಂದೆಯನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನನ್ನನ್ನೂ ನಿಮ್ಮಂತೆ ಮಾರ್ಪಡಿಸಿ" ಎಂದು ಪ್ರಾರ್ಥಿಸಿದನು. ಆ ದಿನದಿಂದ ಅವನ ಜೀವನ ಬದಲಾಯಿತು. ಅವನು ದೇವರ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡನು. ಅಮೆರಿಕದ ಅತ್ಯಂತ ಪ್ರಸಿದ್ಧ ಮೂಡಿ ಮೆಮೋರಿಯಲ್ ಚರ್ಚ್‌ನ ದೀರ್ಘಕಾಲ ಬೋಧಕರಾಗಿ ಸೇವೆ ಸಲ್ಲಿಸಿದರು.
ನಿಮ್ಮ ಮಕ್ಕಳು ದೇವರನ್ನು ಪ್ರೀತಿಸುವವರಾಗಿ ಬೆಳೆಯಬೇಕೆಂದು ನೀವು ಬಯಸುತ್ತೀರಾ? ಪೋಷಕರು ತಮ್ಮ ಜೀವನದಲ್ಲಿ ದೈವಿಕ ಪ್ರೀತಿಯನ್ನು ತೋರಿಸುವವರಾಗಿ ಬದಲಾಗಬೇಕು. ನಿಮ್ಮ ಮಕ್ಕಳು ನಿಮ್ಮಿಂದ ನಮ್ರತೆ, ತಾಳ್ಮೆ ಮತ್ತು ಇತರರನ್ನು ಕ್ಷಮಿಸುವುದು ಇಂತಹ ಸದ್ಗುಣಗಳನ್ನು ಕಲಿಯಲಿ. "ಕ್ರಿಸ್ತನಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಕ್ಷಮಿಸಿರಿ" ಎಂಬ ವಚನದ ಪ್ರಕಾರ, ನಮಗೆ ಅನ್ಯಾಯ ಮಾಡಿದವರ ಮೇಲೆ ನಾವು ಸೇಡು ತೀರಿಸಿಕೊಳ್ಳಬಾರದು, ಬದಲಿಗೆ ಅವರನ್ನು ಕ್ಷಮಿಸಿ ದೇವರ ಪ್ರೀತಿಯನ್ನು ವ್ಯಕ್ತಪಡಿಸಬೇಕು. "ಪ್ರಿಯರಾದ ಮಕ್ಕಳೇ, ನಾವು ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು" (1 ಯೋಹಾನ 3:18). ಪೋಷಕರಾದ ನಿಮ್ಮ ಜೀವನವು ದೇವರಿಗೆ ಮೆಚ್ಚಿಕೆಯಾಗಿರಲಿ.
- T.. ಪೌಲ್ ರಾಜ್
ಪ್ರಾರ್ಥನಾ ಅಂಶ:
ನಮ್ಮ ಯುವ ಶಿಬಿರದಲ್ಲಿ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು ನಮ್ಮ ಸೇವೆಗೆ ಸೇರಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482