Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.04.2026
Share:

By Village Missionary Movement

Wednesday, 15-Apr-2026

ಧೈನಂದಿನ ಧ್ಯಾನ(Kannada) – 15.04.2026

 

ಈಗಿನ ಕಾಲದ ಕಷ್ಟಗಳು 

 

"...ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ" - ರೋಮಾ 8:18

 

ಒಮ್ಮೆ ಒಬ್ಬ ಅಂಗವಿಕಲ ವೃದ್ಧನು ಬಸ್ ಹತ್ತಿದರು. ಖಾಲಿ ಸೀಟು ಇರಲಿಲ್ಲ, ಆದ್ದರಿಂದ ಅವರು ನಿಂತು ಪ್ರಯಾಣಿಸಿದರು. ಇದನ್ನು ನೋಡಿದ ಒಬ್ಬ ಯುವಕ ಮನಮರುಗಿ ಎದ್ದು ತನ್ನ ಸೀಟಿನಲ್ಲಿ ಕೂರಿಸಿದನು. ಆ ವೃದ್ಧನು ಅವನಿಗೆ ಧನ್ಯವಾದ ಹೇಳಿ, ಕರ್ತನಿಗೆ ಸ್ತೋತ್ರ ಎಂದು ಕುಳಿತುಕೊಂಡರು. ಅದನ್ನು ಕೇಳಿದಾಗ ಆ ಯುವಕ ಆಶ್ಚರ್ಯಚಕಿತನಾದನು. ಅಂಗವಿಕಲತೆಯಿಂದ ಬದುಕುತ್ತಿದ್ದರೂ, ಕರ್ತನಿಗೆ ಸ್ತೋತ್ರ ಎಂದು ಹೇಳುತ್ತಿದ್ದಾರಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡನು. ಅವರ ಬಳಿ ತಾತ, ನಿಮ್ಮನ್ನು ಈ ಸ್ಥಿತಿಯಲ್ಲಿಟ್ಟಿರುವ ದೇವರನ್ನು ಸ್ತುತಿಸಲು ನಿಮ್ಮಿಂದ ಹೇಗೆ ಸಾಧ್ಯವಾಗುತ್ತಿದೆ ಎಂದು ಕೇಳಿದನು. ಆ ಹಿರಿಯರು ಪ್ರತ್ಯುತ್ತರವಾಗಿ ಏನನ್ನೂ ಹೇಳಲಿಲ್ಲ, ಆದರೆ ನಗುತ್ತಾ ತನ್ನ ಚೀಲದಿಂದ ಬೈಬಲ್ ಅನ್ನು ಹೊರತೆಗೆದು ಓದಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ, ಅವರು ಆ ಯುವಕನಿಗ ತಮ್ಮಾ, ನೀನು ಹಣ ಪಾವತಿಸಿ ಟಿಕೆಟ್ ಖರೀದಿಸಿ ಹೀಗೆ ನಿಂತುಕೊಂಡು ಬರುತ್ತಿದ್ದೀಯಲ್ಲಾ. ನಿನ್ನ ಮನಸ್ಸಿಗೆ ಬೇಜಾರಾಗ್ತಿಲ್ವಾ ಎಂದರು. ಆ ಯುವಕ ಮುಗುಳ್ನಗುತ್ತಾ, ತಾತ ಬಸ್ ನಿಲ್ದಾಣ ಇನ್ನು ಹತ್ತು ನಿಮಿಷಗಳಲ್ಲಿ ಬಂದುಬಿಡುತ್ತದೆ. ನಮ್ಮ ಮನೆ ಅದರ ಪಕ್ಕದಲ್ಲೇ ಇದೆ. ಹಾಗಾಗಿ ನಾನೇಕೆ ಚಿಂತಿಸಬೇಕು ಎಂದನು. ಚೆನ್ನಾಗಿ ಹೇಳ್ದೆ ತಮ್ಮಾ. ಹತ್ತು ನಿಮಿಷಗಳಲ್ಲಿ ನಾವು ಮನೆಗೆ ಹೋಗಿಬಿಡುತ್ತೇವೆ ಎಂಬ ನಂಬಿಕೆಯಲ್ಲಿ ನಿಂತುಕೊಂಡು ಬರುವುದು ನಿನಗೆ ಕಷ್ಟ ಎಂದು ಅನಿಸುತ್ತಿಲ್ಲ. ನಾವು ಮನೆಗೆ ಹೋಗುತ್ತೇವೆ ಎಂದು ನಿನಗೆ ಖಚಿತವಾಗಿರುವಂತೆಯೇ, ಈ ಜೀವನದ ನಂತರ ನಾನು ಪರಲೋಕಕ್ಕೆ ಹೋಗುತ್ತೇನೆ ಎಂಬುದು ನನಗೆ ಖಚಿತವಾಗಿದೆ. ನಾವು ಹೋಗುತ್ತಿರುವ ಸ್ಥಳವು ಸಂತೋಷದ ಸ್ಥಳ ಎಂದು ನಿನಗೆ ತಿಳಿದಾಗ ಚಿಂತೆ ಹೇಗೆ ಇರಲು ಸಾಧ್ಯ? ಸ್ತೋತ್ರ ತಾನೇ ಬರುತ್ತದೆ ಎಂದು ಹೇಳಿದರು. 

 

ಪೌಲನು ರೋಮಾಪುರದವರಿಗೆ ಬರೆದ ಪತ್ರಿಕೆಯಲ್ಲಿ, "ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ ಎಂದು ಹೇಳಿದ್ದಾರೆ. ಈ ಲೋಕದಲ್ಲಿ ನಾವು ಅನುಭವಿಸುವ ಕಷ್ಟಗಳು, ದುಃಖಗಳು ಮತ್ತು ಯಾತನೆಗಳು ಯಾವುದೂ ಶಾಶ್ವತವಲ್ಲ. ಅವೆಲ್ಲವೂ ಒಂದು ದಿನ ಹಾದುಹೋಗುತ್ತವೆ. ಆದರೆ ಪರಮ ತಂದೆಗಾಗಿಯೂ, ಆತನ ರಾಜ್ಯಕ್ಕಾಗಿಯೂ ನಾವು ಪಡುವ ಪಾಡುಗಳು ಮಾತ್ರ ನಮಗೆ ಆಶೀರ್ವಾದಗಳನ್ನು ತರುತ್ತದೆ.

 

ಪ್ರಿಯರೇ! ಈ ಲೌಕಿಕ ಜೀವನದಲ್ಲಿ ದುಃಖವು ಸಹಜ. ಕರ್ತನು ನಮ್ಮನ್ನು ಅದರಿಂದ ಬಿಡುಗಡೆ ಮಾಡುತ್ತಾರೆ ಎಂಬುದು ಸಹ ಬಹಳ ಖಚಿತ. ನಮಗೆ ಸಿಗಲಿರುವ ಮಹಿಮೆಯ ಜೀವನದ ಬಗ್ಗೆ ನೆನೆಸುವಾಗ, ಎಷ್ಟು ದೊಡ್ಡ ಸಂಕಟ ಕೂಡ ಧೂಳಿನಂತೆ ತೋರುತ್ತದೆ ಎಂಬುದು ನಿಜ ಅಲ್ವಾ! 

- Mrs. ಶಶಿಕಲಾ ಪರಮಶಿವನ್ 

 

ಪ್ರಾರ್ಥನಾ ಅಂಶ:

3 ಗಂಟೆ ಸಮಯ, 1 ಗಂಟೆ ಸಮಯ ಮತ್ತು ಅರೆಕಾಲಿಕ ಮಿಷನರಿಗಳು ನಮ್ಮೊಂದಿಗೆ ಸೇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet galabet galabet giriş vaycasino casibom casibom giriş holiganbet setrabet marsbahis giriş vaycasino giriş betnano casibom holiganbet