Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.04.2026
Share:

By Village Missionary Movement

Saturday, 11-Apr-2026

ಧೈನಂದಿನ ಧ್ಯಾನ(Kannada) – 11.04.2026

 

ವಿಷಯದ ಅಂತ್ಯ 

 

"ಸಮಸ್ತ ವಿಷಯವನ್ನು ನಾವು ಕೇಳಿ ಮುಗಿಸೋಣ;..." - ಪ್ರಸಂಗಿ 12:13

 

ಯಾವುದೇ ವಿಷಯಕ್ಕೆ ಅದ್ಭುತವಾದ ಅಂತ್ಯವಿರುವುದು ಸಹಜ. ನಾವು ಯಾವುದೇ ಕಥೆಗಳನ್ನು ಓದಿದಾಗ ಅಥವಾ ಯಾವುದೇ ನಾಟಕಗಳನ್ನು ನೋಡಿದಾಗ, ಅಂತ್ಯ ಏನೆಂದು ತಿಳಿಯಲು ನಾವು ಬಯಸುತ್ತೇವೆ. ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಯಲ್ಪಡುವ ಸತ್ಯವೇದದ ಕಥಾಪಾತ್ರ ಅರಸನಾದ ಸೊಲೊಮೋನನು. ಪ್ರಸಂಗಿ 12:9 ರಲ್ಲಿ, ಆತನು ಜ್ಞಾನಿ ಎಂದು, ಜನಗಳಿಗೆ ತಿಳುವಳಿಕೆಯನ್ನು ಬೋಧಿಸುತ್ತಾ, ಪರೀಕ್ಷಿಸಿ, ವಿಚಾರಿಸಿ ಅನೇಕ ಜ್ಞಾನೋ ಕ್ತಿಗಳನ್ನು ಕ್ರಮವಾಗಿ ಹೊಂದಿಸಿದನು. ಮುಂದಿನ ವಾಕ್ಯದಲ್ಲಿ ಪ್ರಸಂಗಿಯು ಒಪ್ಪಿಕೊಳ್ಳುವಂತಹ ವಾಕ್ಯಗಳನ್ನು ಕಂಡುಹಿಡಿಯಲು ಹುಡುಕಿದ್ದರಿಂದ, ಕರ್ತನಾದ ಕುರುಬನ ಸೇವೆಯನ್ನು ಸತ್ಯವಾದ ಮಾತುಗಳು ನಮ್ಮನ್ನು ಸರಿಮಾಡುವ ಮುಳ್ಳುಗೋಲುಗಳ ಹಾಗೆಯೂ ಆಳವಾಗಿ ನೆಟ್ಟ ಮೊಳೆಗಳ ಹಾಗೆಯೂ ಇದೆ ಎನ್ನುತ್ತಾರೆ.

 

ಇದನ್ನು ಹೇಳಿಬಿಟ್ಟು ವಿಷಯದ ಅಂತ್ಯವು ತನಗೆ ಬಹಿರಂಗವಾಗಲ್ಪಟ್ಟು, ಅರಸನಾದ ಸೊಲೊಮೋನನು ಬರೆದದ್ದೇನೆಂದರೆ, ಪ್ರಸಂಗಿ 12:13 ರ ಪ್ರಕಾರ, “ಸಮಸ್ತ ವಿಷಯವನ್ನು ನಾವು ಕೇಳಿ ಮುಗಿಸೋಣ; ದೇವರಿಗೆ ಭಯಪಡು; ಆತನ ಆಜ್ಞೆಗಳನ್ನು ಪಾಲಿಸು; ಇದೇ ಮನುಷ್ಯನ ಪ್ರಮುಖ ಕರ್ತವ್ಯ" ಎಂಬುದಾಗಿ. ವಿಶೇಷವಾಗಿ ಹಗ್ಗಾಯ 2:9 ರಲ್ಲಿ ಬರೆಯಲ್ಪಟ್ಟಂತೆ, “ಈ ಆಲಯದ ಮುಂದಿನ ಮಹಿಮೆಯು ಹಿಂದಿನ ಮಹಿಮೆಗಿಂತ ವಿಶೇಷವಾಗಿರುವದು".

 

ಆದ್ದರಿಂದ, ಆರಂಭವು ಅಲ್ಪವಾಗಿದ್ದರೂ, ನಮ್ಮ ಅಂತ್ಯವು ಪರಿಪೂರ್ಣವಾಗುವಂತೆ ನಾವು ಪ್ರತಿದಿನ ಕರ್ತನನ್ನು ಕೇಳಬೇಕು. ಅನೇಕ ದೇವರ ಮಕ್ಕಳು ಸಾಕ್ಷಿಗಳಾಗಿ ಬದುಕಿ ಹಿಂಜಾರಿಹೋಗಿದ್ದಾರೆ. ಅದು ಪಂದ್ಯದ ಬಹುಮಾನವನ್ನು ಕಳೆದುಕೊಳ್ಳುವಂತೆ ಮಾಡುವ ಅಪಾಯ ತುಂಬಿರುವಂಥದ್ದು. ಆದ್ದರಿಂದ, ಹಿಂದಿನ ದ್ರಾಕ್ಷಾರಸಕ್ಕಿಂತಲೂ ಮಧುರವಾದ ಮುಂದಿನ ದ್ರಾಕ್ಷಾರಸವನ್ನು, ಸಾಮಾನ್ಯ ನೀರಿನಂತಿರುವ ನಮ್ಮ ಮೂಲಕ ಪವಿತ್ರಾತ್ಮನು ಪರಿವರ್ತಿಸುವಂತೆ ಪ್ರಾರ್ಥಿಸಿ ಗೆಲ್ಲೋಣ.

 

ನನಗೆ ಪ್ರಿಯವಾದವರೇ! ಏಕೆಂದರೆ ದೇವರು ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಅಂದರೆ, ಒಳ್ಳೆಯದಾಗಲಿ, ಕೆಟ್ಟದ್ದಾಗಿರಲಿ, ದೇವರು ಪ್ರತಿಯೊಂದು ರಹಸ್ಯವನ್ನು ನ್ಯಾಯತೀರ್ಪಿಗೆ ತರುತ್ತಾರೆ. ಆದ್ದರಿಂದ, ಕರ್ತನನ್ನು ತಿಳಿದಿರುವ ನಾವೆಲ್ಲರೂ ಆತನಿಗೆ ಭಯಪಟ್ಟು ಆತನ ಆಜ್ಞೆಗಳ ಪ್ರಕಾರ ನಡೆಯಲು ಶ್ರದ್ಧೆಯಿಂದ ಇರೋಣ.

- Mrs. ಮೆರ್ಸಿ ಅಲೆಕ್ಸಾಂಡರ್ 

 

ಪ್ರಾರ್ಥನಾ ಅಂಶ:

ಪ್ರತಿ ತಾಲೂಕಿನಲ್ಲಿ 30 ಮನೆ ಪ್ರಾರ್ಥನಾ ಗುಂಪುಗಳನ್ನು ಪ್ರಾರಂಭಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş