By Village Missionary Movement
Friday, 10-Apr-2026ಧೈನಂದಿನ ಧ್ಯಾನ(Kannada) – 10.04.2026
ಅಲಕ್ಷ್ಯ ಬೇಡ
"ನಿನ್ನಲ್ಲಿರುವ ವರವನ್ನು ಅಲಕ್ಷ್ಯಮಾಡಬೇಡ; ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ" - 1 ತಿಮೊಥೆ. 4:14
ಒಬ್ಬ ಅಜ್ಜ ಪ್ರತಿದಿನ ತನ್ನ ಮೊಮ್ಮಗನಿಗೆ ಹೀಗೆ ಹೇಳುತ್ತಿದ್ದರು. ತಮ್ಮಾ, ನೀನು ಚೆನ್ನಾಗಿ ಓದಿ ಭವಿಷ್ಯದಲ್ಲಿ ಐಪಿಎಸ್ ಅಧಿಕಾರಿಯಾಗಬೇಕು. ನೀನು ಖಂಡಿತವಾಗಿಯೂ ಅದನ್ನು ಸಾಧಿಸಲು ಸಾಧ್ಯ ಎಂದು ಯಾವಾಗಲೂ ಹೇಳುತ್ತಿದ್ದರು. ಅವನನ್ನು ನೋಡುವವರು ಸಹ ನೀನು ನೋಡುವುದಕ್ಕೆ ಪೊಲೀಸ್ ಅಧಿಕಾರಿಯಂತೆಯೇ ಇದ್ದೀಯ ಎಂದು ಹೇಳುವಾಗ, ಅವನ ಹೃದಯ ಸಂತೋಷಪಡುತ್ತಿತ್ತು, ಮನಸ್ಸು ಧೈರ್ಯದಿಂದ ತುಂಬುತ್ತಿತ್ತು. ಆದರೆ ತನ್ನ ಜೀವನವು ಕಷ್ಟಗಳಿಂದ ತುಂಬಿರುವುದನ್ನು ನೋಡುವಾಗ, ಅವನು ಭರವಸೆಯನ್ನು ಕಳೆದುಕೊಂಡು ನಿರುತ್ಸಾಹಗೊಳ್ಳುತ್ತಿದ್ದ, ಇದೆಲ್ಲವೂ ಸಂಭವಿಸುವಾಗ ನಾನು ಐಪಿಎಸ್ ಆಗಲು ಸಾಧ್ಯವೇ ಇಲ್ಲ ಎಂದು ನಂಬಿಕೆ ಕಳೆದುಕೊಂಡು ಸೋತುಹೋಗುತ್ತಿದ್ದ. ಅವನು ಐಪಿಎಸ್ ಆಗಲು ಅರ್ಹನಾಗಿದ್ದರೂ, ಅವನ ಹೃದಯದಲ್ಲಿ ನೆಲೆಸಿದ್ದ ದುಃಖವು, ಇದು ಸಾಧ್ಯವಿಲ್ಲ ಎಂಬ ಅಲಕ್ಷ್ಯವನ್ನುಂಟು ಮಾಡಿತು.
ಸತ್ಯವೇದದಲ್ಲಿಯೂ ಕೂಡ "ನಿನ್ನಲ್ಲಿರುವ ವರವನ್ನು ಅಲಕ್ಷ್ಯಮಾಡಬೇಡ; ಸಭೆಯ ಹಿರಿಯರು ಪ್ರವಾದನೆಯಿಂದ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ ಎಂದು (1 ತಿಮೊ. 4:14) ರಲ್ಲಿ ಬರೆಯಲ್ಪಟ್ಟಿದೆ. ಅದೇ ರೀತಿ, ಸೇವಕರು ನಮ್ಮ ಮೇಲೆ ಕೈಯಿಟ್ಟು ಪ್ರಾರ್ಥಿಸಿದಾಗ, ಅವರು ದೇವರ ಆತ್ಮದಿಂದ ತುಂಬಿ ನಮಗೆ ಪ್ರವಾದನಾ ಮಾತುಗಳನ್ನು ಹೇಳುವರು. ಆದರೆ ನಾವು ಅದನ್ನು ಉತ್ಸಾಹದಿಂದ ಕೇಳುತ್ತೇವೆ. ನಂತರ, ನಮ್ಮ ಪರಿಸ್ಥಿತಿಗಳನ್ನು ನೋಡಿದಾಗ, ಇದೆಲ್ಲವೂ ಸಂಭವಿಸುವುದು ಅಸಾಧ್ಯ ಎಂದು ಮರೆತುಬಿಡುತ್ತೇವೆ. ಅದರ ಬಗ್ಗೆ ಸ್ವಲ್ಪವೂ ಯೋಚಿಸದೆ ಅಲಕ್ಷ್ಯಮಾಡುತ್ತೇವೆ. ಅರಣ್ಯ 23:19 ರಲ್ಲಿ, "ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ" ಎಂದು ಹೇಳುತ್ತದೆ.
ಇದನ್ನು ಓದುತ್ತಿರುವ ಪ್ರಿಯರೇ, ನಾವು ಸಹ ದೇವರು ನಮಗೆ ನೀಡಿರುವ ವಾಗ್ದಾನದ ಮಾತುಗಳ ಕುರಿತು, ವಾಕ್ಯದ ಕುರಿತು ಅಲಕ್ಷ್ಯವಾಗಿರದೇ, ಪ್ರತಿದಿನ ಅವುಗಳನ್ನಿಟ್ಟು ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಖಂಡಿತವಾಗಿಯೂ ದೇವರು ನಮ್ಮ ಜೀವನದಲ್ಲಿ ಸರಿಯಾದ ಸಮಯದಲ್ಲಿ ನಮಗೆ ಅದನ್ನು ಸಾಧ್ಯವಾಗಿಸುತ್ತಾರೆ. ಆದ್ದರಿಂದ, ವಾಕ್ಯವನ್ನು ಧೃಢವಾಗಿ ಹಿಡಿದುಕೊಂಡು ನಮ್ಮ ಜೀವನದಲ್ಲಿ ಯೇಸುವಿಗಾಗಿ ದೊಡ್ಡ ಕೆಲಸಗಳನ್ನು ಮಾಡೋಣ ಮತ್ತು ಅವರಿಗಾಗಿ ಉತ್ಸಾಹದಿಂದ ಬದುಕಲು ಮುಂದೆ ಬರೋಣ.
- R. ದರ್ಶನ್
ಪ್ರಾರ್ಥನಾ ಅಂಶ:
ಮಿಷನರಿ ತರಬೇತಿ ಕಟ್ಟಡವನ್ನು ನಿರ್ಮಿಸಲು ಸರ್ಕಾರದ ಅನುಮತಿಯು ಸಿಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482