Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.04.2026
Share:

By Village Missionary Movement

Tuesday, 07-Apr-2026

ಧೈನಂದಿನ ಧ್ಯಾನ(Kannada) – 07.04.2026

 

ನೀವು ಸಿದ್ಧರಿದ್ದೀರಾ? 

 

“ಆದಕಾರಣ ನೀವು ಸಹ ಸಿದ್ಧಿವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ." - ಮತ್ತಾಯ 24:44

 

ಯೇಸು ಕ್ರಿಸ್ತನ ಮೊದಲ ಆಗಮನದ ಉದ್ದೇಶವು ಜನರನ್ನು ಪಾಪದಿಂದ ರಕ್ಷಿಸುವುದು ಮತ್ತು ನಿತ್ಯಜೀವವನ್ನು ಸ್ವಾಸ್ಥ್ಯವಾಗಿ ಪಡೆಯಲು ಅವರನ್ನು ಸಿದ್ಧಪಡಿಸುವುದಾಗಿತ್ತು. ಮೊದಲ ಆಗಮನವು ಮುಗಿದುಹೋಯಿತು. ಅವರು ಶಿಲುಬೆಗೇರಿಸಲ್ಪಟ್ಟು ಸತ್ತು, ಸಮಾಧಿ ಮಾಡಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದರು. “ನಾನು ಹೋಗಿ ನಿಮಗಾಗಿ ಸ್ಥಳವನ್ನು ಸಿದ್ಧಪಡಿಸಿದ ನಂತರ, ನಾನು ಮತ್ತೆ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು, ಆಗ ನಾನು ಇರುವಲ್ಲಿ ನೀವು ಸಹ ಇರುವಿರಿ” ಎಂದು ಯೇಸು ತಮ್ಮ ಶಿಷ್ಯರ ಬಳಿ ಹೇಳಿದರು. ಹೌದು, ಅವರು ಬಂದು ನಮ್ಮನ್ನು ಕರೆದುಕೊಂಡು ಹೋಗಿ ತನ್ನೊಂದಿಗೆ ಶಾಶ್ವತವಾಗಿ ಇಟ್ಟುಕೊಳ್ಳುತ್ತಾರೆ. ಇದು ಎಂತಹ ಸಂತೋಷದ ಭರವಸೆ! ಅವರ ಎರಡನೇ ಆಗಮನದಲ್ಲಿ, ನೀವು ನಿರೀಕ್ಷಿಸದ ಗಳಿಗೆಯಲ್ಲಿ ಯೇಸು ಬರುತ್ತಾರೆ; ಆದ್ದರಿಂದ, ಸಿದ್ಧರಾಗಿರಿ ಎಂದು ಸತ್ಯವೇದವು ನಮಗೆ ಎಚ್ಚರಿಸುತ್ತಿದೆ. 

 

ನಾವು ಒಂದು ಪ್ರಯಾಣವನ್ನು ಪ್ರಾರಂಭಿಸಬೇಕಾದರೆ ಮೊದಲು ನಾವು ಅನೇಕ ಸಿದ್ಧತೆಗಳನ್ನು ಮಾಡಬೇಕು. ಈ ಐಹಿಕ ಪ್ರಯಾಣಕ್ಕೆ ಹಲವು ಸಿದ್ಧತೆಗಳು ಬೇಕಾದರೆ, ದೇವರ ರಾಜ್ಯವನ್ನು ಪ್ರವೇಶಿಸಲು ನಾವು ಇನ್ನೂ ಎಷ್ಟು ಮಾಡಬೇಕು! ಮೊದಲನೆಯದಾಗಿ, ನಾವು ಕರ್ತನಾದ ಯೇಸು ಕ್ರಿಸ್ತನನ್ನು ನಮ್ಮ ಸ್ವಂತ ರಕ್ಷಕನಾಗಿ ಅಂಗೀಕರಿಸಿ ನಮ್ಮ ಪಾಪಗಳು ಯೇಸುವಿನ ರಕ್ತದಿಂದ ತೊಳೆಯಲ್ಪಟ್ಟಿರಬೇಕು. ಪವಿತ್ರಾತ್ಮನ ಸಹಾಯದಿಂದ, ನಾವು ಮತ್ತೆ ಪಾಪ ಮಾಡದಂತೆ ಪ್ರತಿದಿನ ನಮ್ಮನ್ನು ಕಾಪಾಡಿಕೊಳ್ಳಬೇಕು. 

 

ಯೇಸು ಕ್ರಿಸ್ತನು ಪರಲೋಕ ರಾಜ್ಯವನ್ನು ದೀಪಗಳನ್ನು ತೆಗೆದುಕೊಂಡು ಮದಲಿಂಗನನ್ನು ಭೇಟಿಯಾಗಲು ಹೊರಟ ಹತ್ತು ಕನ್ಯೆಯರಿಗೆ ಹೋಲಿಸುತ್ತಾರೆ. ಹತ್ತು ಜನರಲ್ಲಿ ಐದು ಮಂದಿ ಬುದ್ಧಿವಂತರಾಗಿದ್ದರು ಮತ್ತು ಉಳಿದ ಐದು ಮಂದಿ ಬುದ್ಧಿಯಿಲ್ಲದವರಾಗಿದ್ದರು. ಮದಲಿಂಗನು ಬಂದಾಗ, ಸಿದ್ಧರಾಗಿದ್ದ ಐದು ಮಂದಿ ಬುದ್ಧಿವಂತ ಕನ್ಯೆಯರು ಮದಲಿಂಗನೊಂದಿಗೆ ಮದುವೆಯ ಔತಣಕೂಟಕ್ಕೆ ಹೋದರು; ಬಾಗಿಲು ಮುಚ್ಚಲ್ಪಟ್ಟಿತು. ಇತರ ಐದು ಕನ್ಯೆಯರು ಮದಲಿಂಗನೊಂದಿಗೆ ಪ್ರವೇಶಿಸುವ ಭಾಗ್ಯವನ್ನು ಕಳೆದುಕೊಂಡರು.

 

ನಾವು ಸಹ ಆತನ ಎರಡನೇ ಬರೋಣಕ್ಕೆ ಸಿದ್ಧರಾಗಿ ದೀಪವನ್ನು ಮತ್ತು ಎಣ್ಣೆಯನ್ನು, ಅಂದರೆ ರಕ್ಷಣೆ ಮತ್ತು ಪವಿತ್ರಾತ್ಮನ ಅಭಿಷೇಕವುಳ್ಳ ಪರಿಶುದ್ಧ ಜೀವನವನ್ನು ನಡೆಸುತ್ತಿದ್ದೇವಾ? ಇಲ್ಲದಿದ್ದರೆ, ಬುದ್ಧಿಯಿಲ್ಲದ ಕನ್ಯೆಯರಂತೆ, ನಾವೂ ಸಹ ಕೈಬಿಡಲ್ಪಡುತ್ತೇವೆ. ನಾವು ಪ್ರತಿದಿನ ನಮ್ಮನ್ನು ಪರೀಕ್ಷಿಸಿಕೊಂಡು, ದುಷ್ಟತನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನಡೆಯಬೇಕು. ಆಗ ನಿತ್ಯಜೀವವನ್ನು ಸ್ವತಂತ್ರಿಸಿಕೊಳ್ಳುವ ಭಾಗ್ಯವನ್ನು ನಮ್ಮ ದೇವರು ನಮಗೆ ಅನುಗ್ರಹಿಸುತ್ತಾರೆ. 

- Mrs. ಭುವನ ಧನಪಾಲನ್

 

ಪ್ರಾರ್ಥನಾ ಅಂಶ:

ಒಡಿಶಾದಲ್ಲಿ ನಿರ್ಮಿಸಲಾಗುತ್ತಿರುವ ಆಲಯದ ಆರ್ಥಿಕ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş