Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.04.2026
Share:

By Village Missionary Movement

Monday, 06-Apr-2026

ಧೈನಂದಿನ ಧ್ಯಾನ(Kannada) – 06.04.2026

 

ಬಲವಾದ ನಂಬಿಕೆ

 

"ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ;..." - ಇಬ್ರಿಯ 11:6

 

ಯೇಸು ಕ್ರಿಸ್ತನು ಪುನರುತ್ಥಾನನಾದ ಸುದ್ದಿಯನ್ನು ಅವರನ್ನು ಹಿಂಬಾಲಿಸಿದ ಶಿಷ್ಯರು ಮತ್ತು ಅವರೊಂದಿಗಿದ್ದವರು ಸಹ ನಂಬಲಿಲ್ಲ. ಅವರ ನಂಬಿಕೆಯು ಚಂಚಲವಾಯಿತು. ಎಮ್ಮಾವೂರಿನ ಶಿಷ್ಯರು ತಮ್ಮೊಂದಿಗೆ ಮಾತನಾಡುತ್ತಾ ಬರುತ್ತಿರುವವರು ಪುನರುತ್ಥಾನನಾದ ಯೇಸು ಎಂದು ಗುರುತಿಸಲಿಲ್ಲ. ಅಂದರೆ, ಅವರು ಪುನರುತ್ಥಾನದ ಕುರಿತಾದ ಪ್ರವಾದನೆಗಳನ್ನು ನಂಬಲಿಲ್ಲ. ಆದ್ದರಿಂದಲೇ ಅವರನ್ನು ಎಲಾ, ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬುವದರಲ್ಲಿ ಮಂದ ಹೃದಯರೇ, ಎಂದು ಯೇಸು ಗದರಿಸಿದರು (ಲೂಕ 24:25). ಮಗ್ದಲದ ಮರಿಯಳು ಮತ್ತು ಎಮ್ಮಾವೂರಿನ ಶಿಷ್ಯರು ಯೇಸು ಪುನರುತ್ಥಾನರಾದರೆಂದು ತಿಳಿಸಿದಾಗ, ಇತರ ಶಿಷ್ಯರು ಅದನ್ನು ನಂಬಲಿಲ್ಲ. ಯೇಸು ಅವರ ಅಪನಂಬಿಕೆ ಮತ್ತು ಹೃದಯದ ಕಾಠಿಣ್ಯವನ್ನು ಖಂಡಿಸುತ್ತಾ ತೋಮನಿಗೆ, "ನೋಡದೆ ನಂಬಿದವರು ಧನ್ಯರು" ಎಂದು ಹೇಳಿದರು. ಏಕೆಂದರೆ "ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ." (ಇಬ್ರಿಯ 11:1)

 

ಪೇತ್ರನು ಮತ್ತು ಅವನೊಂದಿಗಿದ್ದ ಇತರ ಶಿಷ್ಯರು ತಮ್ಮ ಕರೆಯುವಿಕೆಯನ್ನು ಮರೆತು, ಹಿಂತಿರುಗಿ ಮೀನು ಹಿಡಿಯಲು ಹೋದರು (ಯೋಹಾನ 21:3). ಸುಮಾರು ಮೂರುವರೆ ವರ್ಷಗಳ ಕಾಲ ಯೇಸುವಿನೊಂದಿಗೆ ಇದ್ದವರು, ಸತ್ತು ಜೀವಂತವಾಗಿ ಎದ್ದೇಳುತ್ತೇನೆಂದು ಅವರು ಹೇಳಿದ ಮಾತುಗಳನ್ನು ಕೇಳಿದವರು, ಅವರು ಸತ್ತವರನ್ನು ಎಬ್ಬಿಸಿದ ಎಲ್ಲಾ ಅದ್ಭುತಗಳನ್ನು ನೋಡಿದವರು ಹೋರಾಟದ ಸಮಯದಲ್ಲಿ ಅವರ ನಂಬಿಕೆಯಲ್ಲಿ ದುರ್ಬಲರಾಗಿ ಬಿಟ್ಟರು. ಆದರೆ ಅವರ ನಂಬಿಕೆಯನ್ನು ಬಲಪಡಿಸಲು ಯೇಸು ಅವರಿಗೆ ಮೂರನೇ ಬಾರಿ ಕಾಣಿಸಿಕೊಂಡರು, ಅವರ ಹಸಿವನ್ನು ನೀಗಿಸಲು ಅವರಿಗೆ ರೊಟ್ಟಿ ಮತ್ತು ಮೀನುಗಳನ್ನು ಕೊಟ್ಟರು ಮತ್ತು ಅವರ ಬಲೆಗಳು ಹರಿಯುವಷ್ಟು ಮೀನುಗಳು ಸಿಗುವಂತೆ ಮಾಡಿ, ಅವರು ತಾನು ಯೇಸು ಎಂದು ತಿಳಿದುಕೊಳ್ಳುವಂತೆ ಮಾಡಿದರು.

 

ಮೇಲ್ಕಂಡವರುಗಳಂತೆ ಇರದೇ, ಬಲವಾದ ನಂಬಿಕೆಯುಳ್ಳವರಾಗಿದ್ದವರು ಬೈಬಲ್‌ನಲ್ಲಿ ಕೆಲವರು ಇದ್ದಾರೆ. ಅವರು ಬೈಬಲ್‌ನ ಮಾತುಗಳು ಮತ್ತು ವಾಗ್ದಾನಗಳನ್ನು ನಂಬುತ್ತಾರೆ, ಹೋರಾಟದ ಸಮಯದಲ್ಲಿ ಈ ಲೋಕದಲ್ಲಿ ವಿಜಯಶಾಲಿ ಜೀವನವನ್ನು ನಡೆಸುತ್ತಾರೆ ಮತ್ತು ಪರಲೋಕದಲ್ಲಿ ಶಾಶ್ವತ ಜೀವನವನ್ನು ಪಡೆಯುತ್ತಾರೆ ಎಂಬುದು ದೇವರ ಚಿತ್ತವಾಗಿದೆ. ದಾನಿಯೇಲ ಮತ್ತು ಅವನ ಸಹಚರರು ಅಂತಹ ದೃಢ ನಂಬಿಕೆಯನ್ನು ಹೊಂದಿದ್ದರು.

 

ದೇವರ ಮಕ್ಕಳೇ! ಇಂದು ಕೂಡ, ಕರ್ತನು ನಿಮ್ಮ ನಂಬಿಕೆಯನ್ನು ಬಲಪಡಿಸಲು ಬಯಸುತ್ತಿದ್ದಾರೆ. ಹೋರಾಟದ ಸಮಯದಲ್ಲಿ ಪೇತ್ರನ ನಂಬಿಕೆ ವಿಫಲವಾಗದಂತೆ ತಂದೆಯನ್ನು ನೋಡಿ ಪ್ರಾರ್ಥಿಸಿದವರು ನಮಗೂ ನಮ್ಮ ಅಪನಂಬಿಕೆ ನೀಗಲು ಸಹಾಯ ಮಾಡಲಿ. ಆಮೆನ್. 

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಜಾರ್ಖಂಡ್‌ನಲ್ಲಿ ಆಲಯವಿಲ್ಲದ ಪ್ರದೇಶಗಳಲ್ಲಿ ಆಲಯ ಕಟ್ಟಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet