By Village Missionary Movement
Sunday, 05-Apr-2026ಧೈನಂದಿನ ಧ್ಯಾನ(Kannada) – 05.04.2026
ಸಮಾಧಿಯ ರಹಸ್ಯ
"...ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು;" - ಯೋಹಾನ 11:25
ವಾರದ ಮೊದಲನೇ ದಿನ ಮುಂಜಾನೆಯಲ್ಲಿ ಸೂರ್ಯನು ಉದಯಿಸುವಾಗ, ನೋಡಲು ಎಷ್ಟು ಸುಂದರವಾಗಿರುತ್ತೆ ಪುಟಾಣಿಗಳೇ. ಇಂದು ಯಾವ ದಿನ ಗೊತ್ತಾ? ಓ... ಈಸ್ಟರ್, ಅಂದ್ರೆ ಯೇಸುವಿನ ಪುನರುತ್ಥಾನವನ್ನು ಆಚರಿಸುವ ದಿನ. O.k, ಆ ದಿನ ಏನು ನಡೆಯಿತು ಎಂದು ನೋಡೋಣ್ವಾ?
ಮರಿಯ ಅಕ್ಕ ಮತ್ತು ಅವರ ಸ್ನೇಹಿತರು ಮಾತಾಡುತ್ತಾ ನಡೆದುಕೊಂಡು ಹೋದರು. ನಮಗಾಗಿ ಯಾರು ಆ ಕಲ್ಲನ್ನು ಉರುಳಿಸುತ್ತಾರೆ. ಕಲ್ಲು ತುಂಬಾ ದೊಡ್ಡದಾಗಿದೆಯಲ್ಲಾ. ಏನು ಮಾಡೋದು? ಯೇಸುವಿನ ದೇಹವನ್ನು ನೋಡಬೇಕಲ್ಲಾ, ಅವರ ದೇಹಕ್ಕೆ ಸುಗಂಧದ್ರವ್ಯವನ್ನು ಹಚ್ಚಬೇಕಲ್ಲಾ ಎಂಬ ಆಸೆಯಲ್ಲಿ ಅವರು ನಡೆದ ದೂರವೇ ಗೊತ್ತಾಗಲಿಲ್ಲ. ಸಮಾಧಿಯನ್ನು ನೋಡಿದ ಕೂಡಲೇ ತುಂಬಾ ಸಂತೋಷ. ಎಲ್ಲರೂ ಆಶ್ಚರ್ಯದಿಂದ ನೋಡಿದರು. ಏಯ್ ಮರಿಯ, ಇಲ್ಲಿ ನೋಡು, ಸಮಾಧಿ ತೆರೆದಿದೆ ಎಂದು ಹೇಳಿದರು. ಮರಿಯ ಸಮಾಧಿಯೊಳಗೆ ಹೋಗಿ ಯೇಸು ಕಾಣುತ್ತಿಲ್ಲ ಎಂದು ಅಳುತ್ತಿದ್ದಳು. ಏನು ಪುಟಾಣಿಗಳೇ ನೀವು ಸಮಾಧಿಯನ್ನು ನೋಡಿದ್ರೆ ಅಲ್ಲಿಗೆ ಹೋಗಬಾರದು ಅಂತ ತಾನೇ ಅನಿಸುತ್ತೆ. ಅದೂ ಎಲ್ಲಾ ಸಮಾಧಿಗಳು ಮುಚ್ಚಲ್ಪಟ್ಟಿರುತ್ತೆ. ಆದರೆ ಯೇಸುವಿನ ಸಮಾಧಿ ಮಾತ್ರ ತೆರೆದಿರುವುದನ್ನು ನೋಡುದ್ರಾ? ಸರಿ, ಮರಿಯ ಅಕ್ಕ ಮುಂದೆ ಏನು ಮಾಡುದ್ರು ಎಂದು ನೋಡೋಣ್ವಾ?
ಅಳುತ್ತಾ ಇದ್ದ ಮರಿಯಳನ್ನು, ಅವರ ಸ್ನೇಹಿತೆಯರನ್ನೂ ನೋಡಿ ಭಯಪಡಬೇಡಿ ಎಂದು ಒಬ್ಬರು ಹೇಳಿದರು. ಯಾರೆಂದು ತಿರುಗಿ ನೋಡಿದರೆ Bright-ಆಗಿ, ಉನ್ನತವಾಗಿ, ಮಿಂಚಿನಂತಿದ್ದ ಸುಂದರವಾದ ದೇವದೂತನು ನಿಂತಿದ್ದರು. ನೋಡಿದ ಕೂಡಲೇ ಆಶ್ಚರ್ಯಚಕಿತರಾಗಿ ಗೊಂಬೆಗಳಂತೆ ನಿಂತುಬಿಟ್ಟರು ಗೊತ್ತಾ? ದೇವದೂತರನ್ನು ನೋಡಿದರೆ ಹೇಗಿರುತ್ತೆ ಅಂತಾ ಆಸೆಯಾಗ್ತಿದೆಯಾ? ಹ್ಮ್..ಹ್ಮ್.. Heaven ನಲ್ಲಿ ಹೋಗಿ ನೋಡೋಣ. ದೇವದೂತ ಮುಂದೆ ಏನು ಹೇಳಿದ್ರು ಗೊತ್ತಾ? ಯೇಸು ಇಲ್ಲಿಲ್ಲ. ಅವರು ಹೇಳಿದಂತೆ ಜೀವಂತವಾಗಿ ಎದ್ದಿದ್ದಾರೆ. ಈ ವಿಷಯವನ್ನು ಶಿಷ್ಯರಿಗೆ ಹೇಳಿ ಎಂದರು. ಅವರು ಭಯ ಮತ್ತು ನಡುಕದಿಂದ ಸಮಾಧಿಯನ್ನು ಬಿಟ್ಟು ಹೋದರು. ಅವರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗಲೇ ಯೇಸು ಅವರನ್ನು ಭೇಟಿಯಾಗಿ ಶುಭವಾಗಲಿ!" ಎಂದು ಹರಸಿದರು. ಮರಿಯ ಅಕ್ಕ ಮತ್ತು ಅವರ ಸ್ನೇಹಿತರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಯೇಸು ಪುನರುತ್ಥಾನನಾದ ನಂತರ ಮೊಟ್ಟ ಮೊದಲು ತನ್ನನ್ನು ಹುಡುಕುತ್ತಾ ಬಂದ ಮರಿಯಳಿಗೆ ಕಾಣಿಸಿಕೊಂಡರು. ಇಂದಿಗೂ, ಯೇಸುವನ್ನು ನಿಜವಾಗಿ ಹುಡುಕುತ್ತಿರುವ ಎಲ್ಲರಿಗೂ ಪಕ್ಕದಲ್ಲಿದ್ದಾರೆ. ಪುಟಾಣಿಗಳೇ, ಅವರ ಸಮಾಧಿಯ ರಹಸ್ಯ ಏನು ಗೊತ್ತಾ? ಯೇಸು ಜೀವಂತವಾಗಿ ಎದ್ದರು. ಇಂದಿಗೂ ಜೀವಂತವಾಗಿದ್ದಾರೆ. ಸದಾಕಾಲವು ಜೀವಿಸುವವರು. ಪ್ರತಿದಿನ ಬೆಳಿಗ್ಗೆ ಯೇಸುವನ್ನು ಹುಡುಕಲು ಮರೆತುಬಿಡಬೇಡಿ ಪುಟಾಣಿಗಳೇ! Happy Easter.
- Mrs.ಜೀವಾ ವಿಜಯ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482