Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.04.2026
Share:

By Village Missionary Movement

Saturday, 04-Apr-2026

ಧೈನಂದಿನ ಧ್ಯಾನ(Kannada) – 03.04.2026

 

ಶುಭ ಶುಕ್ರವಾರ 

 

“ಜನನ ದಿನಕ್ಕಿಂತ ಮರಣ ದಿನ ಮೇಲು." - ಪ್ರಸಂಗಿ 7: 2

 

ಒಬ್ಬನ ಜನನ ದಿನಕ್ಕಿಂತ ಮರಣ ದಿನವು ಹೆಚ್ಚು ಪ್ರಾಮುಖ್ಯವಾಗಿದೆ. ಯೇಸು ಕ್ರಿಸ್ತನು ಶಿಲುಬೆಯಲ್ಲಿ ಮರಣಹೊಂದಿದ ಈ ಶುಭ ಶುಕ್ರವಾರವನ್ನು ಸಾಂಪ್ರದಾಯಿಕ ಚರ್ಚುಗಳಲ್ಲಿ ಸ್ಮರಿಸಲಾಗುತ್ತದೆ. ಶಿಲುಬೆಯಲ್ಲಿ ನೇತಾಡುವಾಗ ಯೇಸು ಕ್ರಿಸ್ತನು ಹೇಳಿದ ಏಳು ಮಾತುಗಳನ್ನು ಅವರು ಧ್ಯಾನಿಸುತ್ತಾರೆ. ಇವುಗಳನ್ನು ಶಿಲುಬೆಯಲ್ಲಿ ಅರಳಿದ ಏಳು ಹೂವುಗಳು ಎಂದೂ ಕರೆಯಬಹುದು. 

 

1. ಕ್ಷಮೆ: ಯೇಸು ಕ್ರಿಸ್ತನ ಸಂಪೂರ್ಣ ಜೀವನವು ಕ್ಷಮೆಯ ಗುಣದಿಂದ ತುಂಬಿದ್ದದರಿಂದ, ಅವರನ್ನು ಶಿಲುಬೆಗೇರಿಸಿದವರಿಗಾಗಿ ಬಹಳ ಕರುಣೆಯಿಂದ "ತಂದೆಯೇ, ಅವರನ್ನು ಕ್ಷಮಿಸು" ಎಂದು ಪ್ರಾರ್ಥಿಸಲು ಸಾಧ್ಯವಾಯಿತು. ಸ್ತೆಫನು ಸಹ ಅದೇ ರೀತಿಯಲ್ಲಿ ದೇವರನ್ನು ಅನುಸರಿಸಿದರು. ನಮಗೆ ಈ ಕ್ಷಮೆಯ ಆತ್ಮವಿದೆಯೇ? 

 

2. ರಕ್ಷಣೆ: ಯೇಸು ಕ್ರಿಸ್ತನ ಜೀವನದಲ್ಲಿ ಮುಖ್ಯ ಕಾರ್ಯವೆಂದರೆ ಆತ್ಮಗಳ ಆದಾಯ. ಪಾಪಿಗಳನ್ನು ರಕ್ಷಿಸಲು ಅವರು ಈ ಲೋಕಕ್ಕೆ ಬಂದ ಕಾರಣ, ತನ್ನ ತಪ್ಪಿಗೆ ಎದೆಗುಂದಿದ್ದ ಕಳ್ಳನನ್ನು ನೋಡಿ: "ಇಂದು ನನ್ನೊಂದಿಗೆ ಪರದೈಸಿನಲ್ಲಿರುವಿ" ಎಂದು ಕೊನೆಯ ಕ್ಷಣದಲ್ಲಿಯೂ ಸಹ, ಒಬ್ಬ ಕಳ್ಳನಿಗೆ ರಕ್ಷಣೆಯನ್ನು ಆಜ್ಞಾಪಿಸಿದರು. 

 

3. ಪ್ರೀತಿ: ಯೇಸು ಕ್ರಿಸ್ತನಿಗೆ ತನ್ನ ತಾಯಿಯ ಬಗ್ಗೆ ಕಾಳಜಿ ಇತ್ತು, ಆದ್ದರಿಂದ ಅವರು ಯೋಹಾನನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದರು ಮತ್ತು ಅವಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಕೊಡುತ್ತಾರೆ ನೋಡಿ. ನಮ್ಮ ಹೆತ್ತವರನ್ನು ಅವರ ವೃದ್ಧಾಪ್ಯದಲ್ಲಿಯೂ ಪ್ರೀತಿಸಲು ಮತ್ತು ನೋಡಿಕೊಳ್ಳಲು ನಮ್ಮ ಹೃದಯದಲ್ಲಿ ಪ್ರೀತಿ ಇದೆಯೇ? 

 

4 ಪರಿತ್ಯಾಗ: ಯೇಸು ಕ್ರಿಸ್ತನು ನಮಗಾಗಿ ಪರಿತ್ಯಾಗದ ಪರಿಸ್ಥಿತಿಯನ್ನು ಅನುಭವಿಸಿದರು. ಅವರು ದೇವರಿಗೆ, “ನನ್ನ ದೇವರೇ! ನನ್ನ ದೇವರೇ! ಯಾಕೆ ನನ್ನ ಕೈಬಿಟ್ಟಿದ್ದೀ?” ಎಂದರು. ಇಂದಿಗೂ ಪರಿತ್ಯಾಗದ ಪರಿಸ್ಥಿತಿಯಲ್ಲಿ ಇರುವ ನಿಮ್ಮ ನೋವು ಅವರಿಗೆ ಅರ್ಥವಾಗುತ್ತದೆ ಚಿಂತಿಸಬೇಡಿ. 

 

5. ಸಂಕಟ: ಯೇಸು ಕ್ರಿಸ್ತನು, “ನನಗೆ ಬಾಯಾರಿಕೆಯಾಗಿದೆ” ಎಂದು ಹೇಳಿದರು. ಇದು ಆತ್ಮಗಳ ಬಾಯಾರಿಕೆ. ಅವರು ಇಂದಿಗೂ ಬಾಯಾರಿದ್ದಾರೆ. ತನ್ನ ಬಾಯಾರಿಕೆಯನ್ನು ನೀಗಿಸಲು ನೀವು ಆತ್ಮಗಳನ್ನು ದೇವರ ಬಳಿಗೆ ತರುತ್ತೀರಾ? 

 

6. ತೀರ್ಮಾನ: ಕರ್ತನಾದ ಯೇಸು ತಂದೆಯು ತನಗೆ ನೀಡಿದ ಎಲ್ಲಾ ಕೆಲಸವನ್ನು ಪೂರ್ಣವಾಗಿ ಮುಗಿಸಿ, “ಮುಗಿಯಿತು” ಎಂದು ಹೇಳಿದರು. ಅಪೊಸ್ತಲನಾದ ಪೌಲನು ಸಹ ತಾನು ಒಳ್ಳೆಯ ಹೋರಾಟವನ್ನು ಹೋರಾಡಿ ಓಟವನ್ನು ಮುಗಿಸಿದ್ದೇನೆ ಎಂದು ಹೇಳುತ್ತಾರೆ. ನಾವು ಸಹ ದೇವರ ಚಿತ್ತದ ಪ್ರಕಾರ ಬದುಕೋಣ ಮತ್ತು ಓಟವನ್ನು ಕೊನೆಯವರೆಗೂ ಓಡೋಣ. 

 

7. ಒಪ್ಪಿಸಿಕೊಡುವಿಕೆ: "ತಂದೆಯೇ, ನಿನ್ನ ಕೈಗೆ ನನ್ನ ಆತ್ಮವನ್ನು ಒಪ್ಪಿಸುತ್ತೇನೆ" ಎಂದು ಹೇಳಿ ಪ್ರಾಣವನ್ನು ಬಿಟ್ಟರು. ಇದು ಪ್ರತಿ ಯಹೂದಿ ಕುಟುಂಬದಲ್ಲಿ ರಾತ್ರಿಯಲ್ಲಿ ಪ್ರಾರ್ಥಿಸುವ ಪ್ರಾರ್ಥನೆಯಾಗಿದೆ. 

 

ಯೋಚಿಸೋಣ! ನಾವು ಸಹ ದೇವರ ಚಿತ್ತವು ನೆರವೇರುವಂತೆ ಬದುಕೋಣ. 

 

- Rev.S.ಜ್ಯೋತಿನಾಯಗಂ

 

ಪ್ರಾರ್ಥನಾ ಅಂಶ:

ತಿರುಚ್ಚಿಯ ಅರಿಯಲೂರಿನಲ್ಲಿ ನಿರ್ಮಿಸಲಾಗುವ ಮಿಷನರಿ ಮನೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al mislibet