Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.04.2026
Share:

By Village Missionary Movement

Thursday, 02-Apr-2026

ಧೈನಂದಿನ ಧ್ಯಾನ(Kannada) – 02.04.2026

 

ಜಾಗರೂಕರಾಗಿರಿ 

 

"ತನ್ನ ಕೆಲಸದಲ್ಲಿ ಚಟುವಟಿಕೆಯಾಗಿರುವವನನ್ನು ನೋಡು; ಇಂಥವನು ರಾಜರನ್ನು ಸೇವಿಸುವನಲ್ಲದೆ ನೀಚರನ್ನು ಸೇವಿಸುವದಿಲ್ಲ" - ಜ್ಞಾನೋಕ್ತಿ 22:29

 

ನಮ್ಮ ಮಾಜಿ ರಾಷ್ಟ್ರಪತಿ Dr.A.P.J. ಅಬ್ದುಲ್ ಕಲಾಂ ರವರು ರಾಮೇಶ್ವರದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದರು. ಶಾಲೆಯಲ್ಲಿ ಓದುತ್ತಿರುವಾಗಲೇ, ಅವರು ಸೈಕಲ್‌ನಲ್ಲಿ ಮನೆ ಮನೆಗೆ ಹೋಗಿ ಪತ್ರಿಕೆಗಳನ್ನು ವಿತರಿಸುತ್ತಾ, ತಮ್ಮ ಹೆತ್ತವರಿಗೆ ಸಹಾಯ ಮಾಡುತ್ತಿದ್ದರು. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಉತ್ಸಾಹ ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯ, ಅವರ ಯೌವನವನ್ನು ಎಚ್ಚರಿಕೆಯಿಂದ ನಿರ್ವಹಿಸುವುದರ ಜೊತೆಗೆ, ಅವರನ್ನು "ಜಾಗ್ರತೆಯುಳ್ಳವನಿಗೆ ರಾಜ್ಯಾಧಿಕಾರ" ಎಂಬ ಸತ್ಯವೇದದ ಪ್ರಕಾರ, ಮುಂದಿನ ಕಾಲದಲ್ಲಿ ಒಬ್ಬ ಮಹಾನ್ ವಿಜ್ಞಾನಿಯಾಗಿಯೂ ಮತ್ತು ಭಾರತದ ಪ್ರಥಮ ಪ್ರಜೆಯಾಗಿಯೂ ಇವರನ್ನು ಹೆಚ್ಚಿಸಲಾಯಿತು.

 

ಯೋಸೇಫನು ಐಗುಪ್ತದ ಪೋಟೀಫರನ ಮನೆಯಲ್ಲಿ ಗುಲಾಮನಾಗಿ ಕೆಲಸ ಮಾಡಿದರು. ಆದರೆ ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ದೈವಭಕ್ತಿಯನ್ನು ನೋಡಿದ ಪೋಟೀಫರನು, ಅವರನ್ನು ತನ್ನ ಮನೆಯ ಮೇಲ್ವಿಚಾರಕನನ್ನಾಗಿ ಮಾಡಿ ತನಗಿದ್ದ ಎಲ್ಲವನ್ನು ಅವರ ಕೈಗೆ ಒಪ್ಪಿಸಿದರು. ಯೋಸೇಫನ ನಿಮಿತ್ತ ಕರ್ತನು ಐಗುಪ್ತನ ಮನೆಯನ್ನು ಆಶೀರ್ವದಿಸಿದರು. ಮುಂದಿನ ದಿನಗಳಲ್ಲಿ ಯೋಸೇಫನು ಐಗುಪ್ತ ದೇಶಕ್ಕೇ ಅಧಿಕಾರಿಯಾಗಿ ಹೆಚ್ಚಿಸಲ್ಪಟ್ಟರು. ಯೇಸು ಕ್ರಿಸ್ತನು ಭೂಮಿಯ ಮೇಲೆ ಕೇವಲ ಮೂರುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಯೋಹಾನ 4:34 ರಲ್ಲಿ, "ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು" ಎಂದು ಹೇಳಿದರು. ಯೋಹಾನ 17:4 ರಲ್ಲಿ, "ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿದ್ದೇನೆ" ಎಂದು ಜಯಘೋಷ ಮಾಡಿದರು.

 

ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ಪರಿಣಾಮಕಾರಿಯಾಗಿ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಬೇಕು. ತನ್ನ ಕೆಲಸದಲ್ಲಿ ಸೋಮಾರಿಯಾಗಿರುವವನು ದುಷ್ಟರಿಗೆ ಸಹೋದರ. ಕರ್ತನ ಕೆಲಸವನ್ನು ನಿರ್ಲಕ್ಷ್ಯವಾಗಿ ಮಾಡುವವನು ಶಾಪಗ್ರಸ್ತನು. ಆದ್ದರಿಂದ, ದೇವರ ಕೆಲಸವನ್ನು ಮಾಡುವವರು ಅದನ್ನು ನಿರ್ಲಕ್ಷ್ಯವಾಗಿ ಮಾಡದೇ, ಬಹು ಜಾಗ್ರತೆಯಿಂದ ದೇವರ ಚಿತ್ತವನ್ನು ಅರಿತು ಅದಕ್ಕೆ ಅನುಗುಣವಾಗಿ ಮಾಡಬೇಕು. ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರು ತಮಗೆ ಕೊಡುವ ಹೋಂವರ್ಕ್ ಅನ್ನು ಸಮಯಕ್ಕೆ ಸರಿಯಾಗಿ ಬರೆಯಲು ಮತ್ತು ಪಾಠಗಳನ್ನು ತ್ವರಿತವಾಗಿ ಓದಿ ಮುಗಿಸಲು ಜಾಗರೂಕರಾಗಿರಬೇಕು. ಇದು ಅವರಿಗೆ ಹೆಚ್ಚಿನ ಅಂಕಗಳನ್ನು ಪಡೆಯಲು ಸಹಾಯ ಮಾಡುತ್ತದೆ, ಇದು ಅವರು ಉನ್ನತ ಅಧ್ಯಯನಕ್ಕೆ ಸೇರಲು ಮತ್ತು ನಂತರ ಉನ್ನತ ಮಟ್ಟದ ಕೆಲಸದಲ್ಲಿ ಕುಳಿತುಕೊಳ್ಳಲು ದಾರಿ ಮಾಡಿಕೊಡುತ್ತದೆ. ನಾವು ಇದನ್ನು ಮಾಡಿದಾಗ, ದೇವರು ನಮ್ಮನ್ನು ಉನ್ನತೀಕರಿಸುತ್ತಾರೆ ಮತ್ತು ಆಶೀರ್ವದಿಸುತ್ತಾರೆ. ಆದ್ದರಿಂದ, ಸೋಮಾರಿಗಳಾಗಿ ಇರದಂತೆ, ಉತ್ಸಾಹದಿಂದ ಕರ್ತನ ಸೇವೆ ಮಾಡಲು ಜಾಗರೂಕರಾಗಿರಿ.

- Mrs. ನಿರ್ಮಲಾ ಜೆಬರಾಜ್ 

 

ಪ್ರಾರ್ಥನಾ ಅಂಶ:

ಈ ವರ್ಷ, 1000 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş