By Village Missionary Movement
Tuesday, 31-Mar-2026ಧೈನಂದಿನ ಧ್ಯಾನ(Kannada) – 31.03.2026
ದೇವರ ಕೊಡುಗೆ
"ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು... ಸೇವೆಯಲ್ಲಿ ಉಪಯೋಗಿಸಲಿ" - 1 ಪೇತ್ರ 4:10
ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಸೃಷ್ಟಿಸಿದ್ದಾರೆ. ಆತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ನೀಡಿದ್ದಾರೆ. ಅಂದರೆ, ನಮಗಿರುವ ಜ್ಞಾನ, ಮಾತನಾಡುವ ಸಾಮರ್ಥ್ಯ, ಆಡಳಿತ ಸಾಮರ್ಥ್ಯ, ಇತರರಿಗೆ ಸಹಾಯ ಮಾಡುವ ಗುಣವಿದ್ದರೂ, ಅದು ನಮ್ಮ ಸ್ವಂತ ಪ್ರಯತ್ನದಿಂದ ಬಂದದ್ದಲ್ಲ. ಅದು ದೇವರು ನಮಗೆ ನೀಡಿದ ಉಡುಗೊರೆ. ನಾವು ನಮ್ಮ ಪ್ರತಿಭೆಯನ್ನು ದೇವರ ರಾಜ್ಯಕ್ಕಾಗಿ ಬಳಸದೇ ಇರುವುದು, ಅದನ್ನು ನೀಡಿದ ದೇವರನ್ನು ಅವಮಾನಿಸಿದ್ದಕ್ಕೆ ಸಮ. ಕೈಬಿಡಲ್ಪಟ್ಟ ಕಬ್ಬಿಣ ತುಕ್ಕು ಹಿಡಿಯುತ್ತದೆ ಎಂಬಂತೆ, ಬಳಸದ ಪ್ರತಿಭೆ ಮಸುಕಾಗುತ್ತದೆ. ಅದು ಸಣ್ಣ ವಿಷಯವಾಗಲಿ ಅಥವಾ ದೊಡ್ಡ ವಿಷಯವಾಗಲಿ, ಅದನ್ನು ನಂಬಿಗಸ್ತಿಕೆಯಿಂದ ಮಾಡಿದಾಗ ದೇವರು ಅದನ್ನು ಆಶೀರ್ವದಿಸುತ್ತಾರೆ.
ಸತ್ಯವೇದದಲ್ಲಿಯೂ ಸಹ, ವಿಮೋಚನಕಾಂಡ 31:1-6 ರಲ್ಲಿ, ಗುಡಾರವನ್ನು ನಿರ್ಮಿಸಲು ದೇವರು ಬೆಚಲೇಲನನ್ನು ಆರಿಸಿಕೊಂಡರು. ಹೌದು, ಅವನು ಚಿನ್ನ, ಬೆಳ್ಳಿ ಮತ್ತು ಕಂಚಿನಲ್ಲಿ ಕೌಶಲ್ಯದಿಂದ ಕೆಲಸ ಮಾಡಲು, ರತ್ನಗಳನ್ನು ಕತ್ತರಿಸಿ ಕೆತ್ತಲು ಮತ್ತು ಮರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು. ಅದೇ ರೀತಿ, ನಮಗೆ ನಿಯೋಜಿಸಲಾದ ಯಾವುದೇ ಕೆಲಸವನ್ನು ದೇವರಿಗೆ ಸಮರ್ಪಿಸಿಕೊಂಡು ಮಾಡಿದಾಗ, ದೇವರು ಅದನ್ನು ಆಶೀರ್ವದಿಸುತ್ತಾರೆ.
ಅದೇ ರೀತಿ, ದಾವೀದನು ಕುರಿ ಕಾಯುವ ಹುಡುಗನಾಗಿದ್ದಾಗ, ಅವರು ಕಿನ್ನರಿ ನುಡಿಸುವುದರಲ್ಲಿ ನಿಪುಣನಾಗಿದ್ದರು. ಅರಸನಾದ ಸೌಲನು ದುರಾತ್ಮದಿಂದ ಪೀಡಿಸಲ್ಪಟ್ಟಾಗ, ದಾವೀದನು ಕಿನ್ನರಿ ನುಡಿಸಿ ಅವರಿಗೆ ಸಮಾಧಾನವನ್ನು ಉಂಟುಮಾಡಿದರು. ಮತ್ತು ಅನೇಕ ಕೀರ್ತನೆಗಳನ್ನು ಬರೆದು ಇಂದಿಗೂ ನಮ್ಮನ್ನು ಸ್ತುತಿಸುವಂತೆ ಮಾಡುತ್ತಿದ್ದಾರೆ.
ಹೌದು ಪ್ರಿಯರೇ! ನಮ್ಮ ಪ್ರತಿಭೆಗಳು ಇತರರನ್ನು ದೇವರ ಬಳಿಗೆ ತರುವ ಸಾಧನವಾಗಿರಬೇಕು. "ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಶಕ್ತಿಯಿಂದ ಮಾಡು;..." (ಪ್ರಸಂಗಿ 9:10) ಎಂಬ ವಚನದ ಪ್ರಕಾರ, ದೇವರು ನಿಮಗೆ ನೀಡಿರುವ ಪ್ರತಿಭೆ ಯಾವುದಾದರೂ, ಅದನ್ನು ದೇವರು ಕೊಟ್ಟ 'ಬೀಜ' ಎಂದು ಪರಿಗಣಿಸಿ ಇತರರ ಆಶೀರ್ವಾದಕ್ಕಾಗಿ ಅದನ್ನು ಉಪಯೋಗಿಸುವಾಗ ದೇವರು ಅದನ್ನು ಅನೇಕರಿಗೆ ಆಶೀರ್ವಾದವಾಗಿ ಮಾರ್ಪಡಿಸುತ್ತಾರೆ. ಆಮೆನ್.
- Mrs. ದಿವ್ಯಾ ಅಲೆಕ್ಸ್
ಪ್ರಾರ್ಥನಾ ಅಂಶ:
ಎಲ್ಲಾ ತಾಲೂಕುಗಳಲ್ಲಿ ಮಿಷನ್ ಆಕ್ಷನ್ ಸೆಂಟರ್‌ಗಳನ್ನು ಸ್ಥಾಪಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482