Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.03.2026 (Kids Special)
Share:

By Village Missionary Movement

Sunday, 29-Mar-2026

ಧೈನಂದಿನ ಧ್ಯಾನ(Kannada) – 29.03.2026 (Kids Special)

 

ಕತ್ತೆಮರಿ 

 

"...ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ ಎಂದು ಹೇಳಿದನು" - ಯೆಹೋಶುವಾ 1:9

 

ಮುದ್ದು ಮಕ್ಕಳೇ! ಇಂದು ಯಾವ ಭಾನುವಾರ ಎಂದು ಗೊತ್ತಾ? ಪಾಮ್ ಸಂಡೆ, ಹೋಸನ್ನ ಭಾನುವಾರ ಎಂದು, ಹೇಳುತ್ತಾರೆ. ಗರಿಗಳನ್ನು ಹಿಡಿದು ಆಲಯದ ಸುತ್ತಲೂ ಮೆರವಣಿಗೆ ಬರುತ್ತಾರೆ. ಈ ದಿನ ನಡೆದದ್ದನ್ನೇ ನಾನು ನಿಮಗೆ ಹೇಳಲಿದ್ದೇನೆ.

 

ಯೇಸಪ್ಪ ಈ ಭೂಮಿಯ ಮೇಲೆ ವಾಸಿಸುತ್ತಿದ್ದಾಗ, ಯೆರೂಸಲೇಮ್ ಎಂಬ ಪಟ್ಟಣಕ್ಕೆ ಹೋದರು. ಇಬ್ಬರು ಶಿಷ್ಯರನ್ನು ಕರೆದು, "ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ. ಅಲ್ಲಿ ಕಟ್ಟಿರುವ ಒಂದು ಕತ್ತೇಮರಿಯನ್ನು ಕಾಣುವಿರಿ; ಇದುವರೆಗೆ ಅದರ ಮೇಲೆ ಯಾರೂ ಹತ್ತಿಲ್ಲ; ಅದನ್ನು ಬಿಚ್ಚಿ ಹಿಡುಕೊಂಡು ಬನ್ನಿರಿ ಎಂದು ಹೇಳಿದರು. ಯಾರು ಎಂದೇ ಗೊತ್ತಿಲ್ಲದ ಸ್ಥಳದಲ್ಲಿ ಹೋಗಿ ಹೇಗೆ... ಎಂದು ಶಿಷ್ಯರು ತಮ್ಮ ಮನಸ್ಸಿನಲ್ಲಿ ಯೋಚಿಸುತ್ತಿರುವಾಗಲೇ, JESUS ಹೀಗೆ ಹೇಳಿದರು, ಯಾವನಾದರೂ ನಿಮ್ಮನ್ನು ಏನು ಹೀಗೆ ಮಾಡುವದು ಎಂದು ಕೇಳಿದರೆ - ಇದು ಸ್ವಾವಿುಯವರಿಗೆ ಬೇಕಾಗಿದೆ ಎಂದು ಹೇಳಿರಿ. ಯಾರೂ ಏನೂ ಹೇಳುವುದಿಲ್ಲ ಅಂದರು. ನೋಡುದ್ರಾ ಪುಟಾಣಿಗಳೇ, ನಮ್ಮ ಹೃದಯದಲ್ಲಿ ಯೋಚಿಸುವುದನ್ನು ಸಹ ತಿಳಿದುಕೊಂಡು ಉತ್ತರಿಸುವ ದೇವರೇ ನಮ್ಮ ಯೇಸು. ಶಿಷ್ಯರು ಹಳ್ಳಿಗೆ ಹೋಗಿ ಯೇಸು ಹೇಳಿದಂತೆ ಮಾಡಿದರು. ಅವರು ಕತ್ತೆ ಮರಿಯನ್ನು ಬಿಚ್ಚಿ ತಂದರು. ಕತ್ತೆ ಮರಿಯ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದರು. JESUS ಅದರ ಮೇಲೆ ಹತ್ತಿ ಹೋದರು. ಅನೇಕ ಜನರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಬೇರೆ ಕೆಲವರು ತೋಟಗಳಿಂದ ಚಿಗುರುಗಳನ್ನು ಕೊಯಿದು ತಂದು ಹಾಸಿದರು.

 

ಅಪ್ಪಪ್ಪಾ... ಯೇಸು ಅದರ ಮೇಲೆ ಇದ್ದ ಕಾರಣ ಕತ್ತೆ ಮರಿಗೆ ಎಂಥಾ ಒಂದು ಗೌರವ ಮತ್ತು ಮರ್ಯಾದೆ! ಆತನ ಹಿಂದೆಯೂ ಮುಂದೆಯೂ ಹೋಗುತ್ತಿದ್ದವರೆಲ್ಲಾ "ಜಯ, ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಮೇಲಣ ಲೋಕಗಳಲ್ಲಿ ಹೋಸನ್ನ" ಎಂದು ಹೇಳಿ ಆರ್ಭಟಿಸಿದರು. ಹಾಡುಗಳನ್ನು ಹಾಡಿದರು ಮತ್ತು ಸಂತೋಷಪಟ್ಟರು. JESUS ಇಷ್ಟಪಡುವುದು ಏನು ಗೊತ್ತಾ ಪುಟಾಣಿಗಳೇ! ನೀವೂ ಸಹ ಯೇಸುವನ್ನು ಹೊರುವ ಕತ್ತೆಗಳಾಗಬೇಕು ಎಂಬುದೇ. ಪಾಪ, ಶಾಪ ಮತ್ತು ರೋಗಗಳಂತಹ ಅನೇಕ ಸಮಸ್ಯೆಗಳಿಂದ ಬಂಧಿಸಲ್ಪಟ್ಟಿರುವ ಅನೇಕ ಮಕ್ಕಳಿದ್ದಾರೆ. ಅವರೆಲ್ಲರನ್ನೂ JESUS ಬಳಿ ಕರೆದುಕೊಂಡು ಬರಲು ನೀವೇ ಯೇಸಪ್ಪನಿಗೆ ಬೇಕು.

 

ನಾನು ಚಿಕ್ಕ ಮಗು ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಬೇಡಿ. ಯೇಸು ನಿಮ್ಮ ಮೂಲಕ ದೊಡ್ಡ ದೊಡ್ಡ ಅದ್ಭುತಗಳನ್ನು ಮಾಡಲಿದ್ದಾರೆ. JESUS ನಿಮ್ಮನ್ನು ಹೊರಲು ನಾನಿದ್ದೇನೆ ಎಂದು ಹೇಳಿ ನೋಡಿ. ಯೇಸಪ್ಪ ತುಂಬಾ ಸಂತೋಷಪಡುತ್ತಾರೆ. ಸರೀನಾ ಮುದ್ದು ಮಕ್ಕಳೇ!

- Rev. S. ಜ್ಯೋತಿ ನಾಯಗಂ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş