By Village Missionary Movement
Friday, 18-Jun-2021ಧೈನಂದಿನ ಧ್ಯಾನ(Kannada) – 18.06.2021
ಜಲರಾಶಿಯನ್ನು ದಾಟಿ ಬಂದೆವು
"ಸಿಂಹಸರ್ಪಗಳ ಮೇಲೆ ನಡೆಯುವಿ; ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ." - ಕೀರ್ತನೆಗಳು 91:13
ನಾವು ನಿಂತಿರುವುದು ನಿರ್ಮೂಲವಾಗದೇ ಇರುವುದು ದೇವರ ಕೃಪೆಯೇ! ಇಂದು ಲೋಕ ಪೂರ್ತಿಯಾಗಿ ಕೊರೋನ ಎಂಬ ಘೋರ ವ್ಯಾಧಿಯಲ್ಲಿ ಸಿಕ್ಕಿಕೊಂಡು ಬಹು ಕಷ್ಟಪಡುತ್ತಿದೆ. ಅನೇಕರು ಆ ವ್ಯಾಧಿಯಿಂದ ಬಾಧಿಸಲ್ಪಟ್ಟು ಜೀವಕ್ಕಾಗಿ ಹೋರಾಡುತ್ತಿದ್ದಾರೆ. ನಮ್ಮ ಶರೀರಕ್ಕೆ ಅಗತ್ಯವಾದ ಆಕ್ಸಿಜನ್ ಅಳತೆಯು ಕಡಿಮೆಯಾಗಿ ಹೋರಾಡುವಂತೆ ಮಾಡುತ್ತದೆ ಈ ವ್ಯಾಧಿ. ನಮಗೆ ಬಂದುಬಿಡುತ್ತದೋ ಎಂಬ ಭಯದಲ್ಲಿ ಪ್ರತಿಯೊಬ್ಬರು ಜೀವಿಸುತ್ತಿದ್ದಾರೆ. ಈ ಎರಡನೇ ಅಲೆಯಲ್ಲಿ ಸಿಕ್ಕಿಕೊಂಡವರು ಅನೇಕರು. ಇದರಲ್ಲಿ ಸಿಕ್ಕಿ ಕೊಳ್ಳಬಾರದೆಂಬ ಭಯದಲ್ಲೂ, ಚಿಂತೆಯಲ್ಲೂ, ಜೀವಿಸುತ್ತಿರುವ ವರು ಉಳಿದವರು. ಇದು ಯೇಸುಕ್ರಿಸ್ತನ ಎರಡನೇ ಬರೋಣಕ್ಕೆ ಮುನ್ನೆಚ್ಚರಿಕೆಯಾಗಿ ಸತ್ಯವೇದದಲ್ಲಿ ಹೇಳಲ್ಪಟ್ಟಿದೆ, "ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು;...." ಎಂದು ಲೂಕ 21:11 ರಲ್ಲಿ ಬರೆಯಲ್ಪಟ್ಟಿದೆ.
ಕೆಲವು ದಿನಗಳ ಮುಂಚೆ ನಾನು, ನನ್ನ ತಾಯಿಯವರು ಈ ಘೋರ ವ್ಯಾಧಿಯಿಂದ ಬಾಧಿಸಲ್ಪಟ್ಟು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದು ಬಂದೆವು. ಶರೀರವು ಬಹಳ ಬಲಹೀನವಾಗಿ ಎಲ್ಲೋ ಆಳದಲ್ಲಿ ಇಳಿಯುತ್ತಿರುವ ಹಾಗೆ ತೋಚಿತು. "ದೇವರೇ ನೀವು ಎಲ್ಲಿದ್ದೀರ. ನನ್ನ ಕೈಯನ್ನು ಹಿಡಿದುಕೊಳ್ಳಿರಿ. ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು; ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಣುಗಿಸವು; ಉರಿಯಲ್ಲಿ ನಡೆಯುವಾಗ ನೀನು ಕಂದದಿರುವಿ, ಜ್ವಾಲೆಯು ನಿನ್ನನ್ನು ದಹಿಸದು ಎಂದು ಹೇಳಿದ್ದೀರಲ್ಲ ಎಂದು ಪ್ರಾರ್ಥಿಸಿದೆನು. ಜಲರಾಶಿಯನ್ನು ಬೆಂಕಿಯನ್ನು ದಾಟಿ ಬರುವ ಹಾಗೆ ನಾವು ಕೊರೋನಾ ರೋಗವನ್ನು ದಾಟಿ ಬಂದೆವು. ದೇವರೇ! ನಾನು ಇನ್ನೂ ನಿಮಗಾಗಿ ಸೇವೆ ಮಾಡಲು ಬಯಸುತ್ತೇನೆ. ನನ್ನನ್ನು ಉಪಯೋಗಿಸು ಎಂದು ರಾತ್ರಿ-ಹಗಲು ಬೇಡಿಕೊಂಡೆನು. ದೇವರು, "ಇಗೋ ನಾನು ನಿನ್ನೊಂದಿಗೇ ಇದ್ದೇನೆ. ನೀನು ಭಯ ಪಡಬೇಡ" ಎಂಬ ಅವರ ಮಾತುಗಳ ಮೂಲಕ ನಮ್ಮನ್ನು ಸಂತೈಸಿದರು. ನನ್ನನ್ನೂ, 93 ವಯಸ್ಸುಳ್ಳ ನನ್ನ ತಾಯಿಯನ್ನು ಕೊರೋನಾ ರೋಗದಿಂದ ಬಿಡಿಸಿ ಮನೆಗೆ ಬರಲು ಕೃಪೆ ತೋರಿಸಿದರು.
ಕ್ರಿಸ್ತನಲ್ಲಿ ಪ್ರಿಯರೇ! ಹೌದು, ಕೋರೋನ ಎಂಬ ಸಿಂಹದ ಮೇಲೆಯೂ ಸರ್ಪದ ಮೇಲೆಯೂ ನಡೆದು ಹೋಗಲು ದೇವರು ಸಹಾಯ ಮಾಡುತ್ತಾರೆ. ಆ ರೋಗವು ಮುಟ್ಟದೇ ಇದ್ದರೆ ಅದಕ್ಕಾಗಿ ಕೋಟ್ಯಾನುಕೋಟಿ ಕೃತಜ್ಞತೆಯನ್ನು ಹೇಳಿರಿ. ಅದನ್ನೂ ಮೀರಿ ಈ ಉಪದ್ರವದ ಮಾರ್ಗದಲ್ಲಿ ನಡೆಯುವಂತಹ ಪರಿಸ್ಥಿತಿ ಏರ್ಪಟ್ಟರೂ, ದೇವರನ್ನು ಮಾತ್ರವೇ ಗಟ್ಟಿಯಾಗಿ ಹಿಡಿದುಕೊಳ್ಳಿರಿ. ಯೋಬನ ಹಾಗೆ, "ಅವರು ನನ್ನನ್ನು ಸಾಯಿಸಿದರೂ ಅವರ ಮೇಲೆ ನಂಬಿಕೆಯಿಂದಲೇ ಇರುತ್ತೇನೆ" ಎಂದು ಧೈರ್ಯವಾಗಿ ದೇವರನ್ನು ಹಿಡಿದುಕೊಳ್ಳಿರಿ. ಭಯಪಡಬೇಡಿರಿ. ಸೈತಾನನು ಭಯವನ್ನು ಕೊಡುತ್ತಾನೆ. ಆದರೂ ದೃಢವಾಗಿರಿ. ದೇವರ ಹಸ್ತವು ಕೊರೋನಾಗಿಂತ ಬಲವುಳ್ಳದ್ದು. ಬೆಂಕಿಯನ್ನು ಜಲರಾಶಿಯನ್ನು ಹಾದುಹೋಗಲು ದೇವರೇ ಬಲ ಕೊಟ್ಟು ನಮ್ಮನ್ನು ಬಿಡಿಸುತ್ತಾರೆ. ಆಮೆನ್.
- Mrs. ಭುವನ ಧನಪಾಲನ್
ಪ್ರಾರ್ಥನಾ ಅಂಶ:-
ಒಂದು ಗ್ರಾಮವನ್ನು ರೂ.2000/- ಕೊಟ್ಟು ದತ್ತು ತೆಗೆದುಕೊಳ್ಳುವ 1 ಲಕ್ಷ ಕುಟುಂಬಗಳನ್ನು ಕರ್ತನು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482