Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.03.2026
Share:

By Village Missionary Movement

Wednesday, 25-Mar-2026

ಧೈನಂದಿನ ಧ್ಯಾನ(Kannada) – 25.03.2026

 

ತಿಳಿದಿರುವುದನ್ನು ಹೇಳೋಣ

 

"...ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ?..." - ರೋಮಾ 10:14

 

ಕ್ರಿಸ್ಮಸ್ ಸಮಯದಲ್ಲಿ, ಒಂದು ಮನೆಯಲ್ಲಿ ಚಿಕ್ಕ ಮಕ್ಕಳಿಗಾಗಿ ಸುಂದರವಾದ ಗೋದಲಿಯನ್ನು ಸ್ಥಾಪಿಸಲಾಗಿತ್ತು. ಅದನ್ನು ಶಿಶು ಯೇಸುವಿನ ಜನನವನ್ನು ಚಿತ್ರಿಸುವ ಸಣ್ಣ ಆಟಿಕೆಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು ಮತ್ತು ಅಲಂಕಾರಿಕ ದೀಪಗಳಿಂದ ಸುಂದರವಾಗಿ ಬೆಳಗಿಸಲಾಗಿತ್ತು. ಮನೆಯಲ್ಲಿರುವ ಪುಟ್ಟ ಹುಡುಗಿ ತನ್ನ ತಾಯಿಯನ್ನು "ಈ ಗೋದಲಿಯಲ್ಲಿ ಏನಿದೆ?" ಎಂದು ಕೇಳಿದಳು ತಾಯಿ ಯೇಸು ಜನಿಸಿದ ಸ್ಥಳ, ಕುರುಬರ ಸಂತೋಷ ಮತ್ತು ಜ್ಞಾನಿಗಳ ಉಡುಗೊರೆಗಳನ್ನು ವಿವರಿಸಿದಳು. ಅವಳು ಎಲ್ಲವನ್ನೂ ಆಸಕ್ತಿಯಿಂದ ಗಮನಿಸಿದಳು. ಮರುದಿನ ಬೆಳಿಗ್ಗೆ, ಎಂದಿನಂತೆ ಅವರ ಬೀದಿಗೆ ಬರುತ್ತಿದ್ದ ಪೌರ ಕಾರ್ಮಿಕರು ತಮ್ಮ ಕೆಲಸವನ್ನು ಮಾಡುತ್ತಿದ್ದರು. ಈ ಪುಟ್ಟ ಹುಡುಗಿಯ ಮನೆಯಲ್ಲಿ ಗೋದಲಿಯನ್ನು ನೋಡಿ, ಅದು ಏನು ಎಂದು ಕೇಳಿದರು. ಮಗುವಿನ ಹೃದಯದಿಂದ ಆ ಪುಟ್ಟ ಹುಡುಗಿ ತನ್ನ ತಾಯಿ ತನಗೆ ಕಲಿಸಿದ್ದನ್ನು ಪೌರಕಾರ್ಮಿಕರಿಗೆ ವಿವರಿಸಿ ಹೇಳಿದಳು. ಮರುದಿನ, ಪೌರಕಾರ್ಮಿಕರು ತನ್ನ ಮಗಳನ್ನು ಕರೆತಂದು ಅಲ್ಲಿರುವ ಆಟಿಕೆಗಳನ್ನು ತೋರಿಸಿ ಕ್ರಿಸ್ತನ ಜನನವನ್ನು ತಿಳಿಸಿದರು. ಹೀಗೆ, ಸುವಾರ್ತೆಯು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಅತ್ಯಂತ ಸರಳ ರೀತಿಯಲ್ಲಿ ಹರಡಲು ಪ್ರಾರಂಭಿಸಿತು. ಕಾರಣವೇನೆಂದರೆ, ಆ ಪುಟ್ಟ ಹುಡುಗಿ ತನಗೆ ತಿಳಿದಿದ್ದನ್ನು ಹೇಳಲು ಹಿಂಜರಿಯಲಿಲ್ಲ!

 

ಸತ್ಯವೇದದಲ್ಲಿ, ಆದಿಕಾಂಡ 37:15 ರಲ್ಲಿ ನಾವು ಒಬ್ಬ ವ್ಯಕ್ತಿಯ ಬಗ್ಗೆ ಓದುತ್ತೇವೆ. ಅದರಲ್ಲಿ ಯೋಸೇಫನು ತನ್ನ ಸಹೋದರರ ಯೋಗಕ್ಷೇಮವನ್ನು ತಿಳಿದುಕೊಂಡು ಬರಲು ತನ್ನ ತಂದೆಯಾದ ಯಾಕೋಬನು ಕಳುಹಿಸಲು, ತನ್ನ ಸಹೋದರರನ್ನು ಕಾಣದೆ ಅಲೆದಾಡುತ್ತಿರುವುದನ್ನು ನೋಡಿದ ಅನಾಮಧೇಯ ವ್ಯಕ್ತಿ, "ಏನು ಹುಡುಕುತ್ತಿದ್ದೀಯ?" ಎಂದು ವಿಚಾರಿಸುತ್ತಾರೆ. ನಂತರ ತನಗೆ ತಿಳಿದ ವಿಷಯಗಳನ್ನು ಅಂದರೆ "ದೋತಾನ್‌ಗೆ ಹೋಗೋಣ ಎಂದು ಹೇಳುವುದನ್ನು ಕೇಳಿದೆ" ಎಂದು ಹೇಳಿ, ದಾರಿ ತಿಳಿಯದೇ ತವಕಿಸುತ್ತಿದ್ದ ಯೋಸೇಫನಿಗೆ ದಾರಿ ತೋರಿಸುತ್ತಾರೆ. ದೇವರ ಯೋಜನೆಗೆ ನೇರವಾಗಿ ಯೋಸೇಫನು ನಡೆಸಲ್ಪಡಲು ಇವರೂ ಒಂದು ಕಾರಣ. ತನ್ನ ಪಾಲನ್ನು ಕೊಟ್ಟು ಬಿಟ್ಟರು. ಇದೇ ರೀತಿ, ನಮ್ಮ ಜೀವನದಲ್ಲೂ ದೇವರ ಬಗ್ಗೆ ನಮಗೆ ತಿಳಿದಿರುವ ವಿಷಯಗಳನ್ನು ಇತರರಿಗೆ ಹೇಳಲು ಹಿಂಜರಿಯಬಾರದು. ನಾಮಾನನ ಮನೆಯಲ್ಲಿ ಗುಲಾಮಳಾಗಿದ್ದ ಪುಟ್ಟ ಹುಡುಗಿ ನಾಮಾನನಿಗೆ ಸ್ವಸ್ಥವಾಗಲು ತನಗೆ ತಿಳಿದಿದ್ದ ಬಹು ಸತ್ಯವಾದ ಕಾರ್ಯವನ್ನು ಹೇಳಿದಳು. ಆದ್ದರಿಂದ ಸಿರಿಯಾಕ್ಕೆ ರಕ್ಷಣೆ ಬಂತು.

 

ನೀವು ನಿಮಗೆ ತಿಳಿದಿರುವುದನ್ನು ಮತ್ತು ದೇವರು ನಿಮ್ಮ ಜೀವನದಲ್ಲಿ ಏನು ಮಾಡಿದ್ದಾರೆ ಎಂಬುದನ್ನೂ ಸಂಪೂರ್ಣ ಖಚಿತವಾಗಿ ಹೇಳಿರಿ. ನಿಶ್ಚಯವಾಗಿ ದೇವರು ಕೇಳುಗರ ಹೃದಯದಲ್ಲಿ ಕ್ರಿಯೆ ಮಾಡುತ್ತಾರೆ. ಬದಲಾಗಿ, ದೊಡ್ಡ ದೊಡ್ಡ ಸೇವಕರುಗಳನ್ನು ಕಣ್ಣು ಮುಂದೆ ನಿಲ್ಲಿಸಿ ಅವರಂತೆ, ಇವರಂತೆ ನನಗೆ ಮಾತಾಡಲು ಗೊತ್ತಿಲ್ಲ ಎಂದು ಭಾವಿಸಿ ಹಿಂಜರಿಯಬೇಡಿ, ಆದರೆ ನಿಮ್ಮ ಜ್ಞಾನವನ್ನು ಹಂಚಿಕೊಳ್ಳಲು ಮತ್ತು ದೇವರ ರಾಜ್ಯಕ್ಕೆ ಕೊಡುಗೆ ನೀಡಲು ಮುಂದೆ ಬನ್ನಿ. ಹೆಸರಿಸದ ವ್ಯಕ್ತಿಯನ್ನು ಬೈಬಲ್‌ನಲ್ಲಿ ಉಲ್ಲೇಖಿಸಲಾಗಿದೆ ಏಕೆಂದರೆ ಅವರು ಯೋಸೇಫನಿಗೆ ಮಾರ್ಗದರ್ಶನ ನೀಡಿದರು. ನಾವೂ ಸಹ ಕತ್ತಲೆಯಲ್ಲಿರುವ ಜನರನ್ನು ಬೆಳಕಿಗೆ ಕರೆದೊಯ್ದು ಪರಲೋಕಕ್ಕೆ ಪಾಲುಗಾರರಾಗಿ ಮಾರ್ಪಡೋಣ. ಆಮೆನ್! 

- Mrs. ಐಡಾ ಕಿಂಗ್ ಡೇವಿಡ್

 

ಪ್ರಾರ್ಥನಾ ಅಂಶ:

ಎಲ್ಲಾ ತಾಲೂಕುಗಳಲ್ಲಿ ಮಕ್ಕಳ ಶಿಬಿರಗಳು ಮತ್ತು ಯುವ ಶಿಬಿರಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al