By Village Missionary Movement
Tuesday, 24-Mar-2026ಧೈನಂದಿನ ಧ್ಯಾನ(Kannada) – 24.03.2026
ಮಾದರಿಯ ಜೀವನ
"ಸೇನಾಧೀಶ್ವರನೇ, ಯೆಹೋವನೇ, ನಿನ್ನನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ;..." - ಕೀರ್ತನೆ 69:6
ನಿರ್ಮಲಾ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಉನ್ನತ ಪದವಿಗೆ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ, ಅವಳು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಳು. ಏಕೆಂದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮಾತ್ರ Placement ಹಾಕುತ್ತಾರೆ. ಅದಕ್ಕಾಗಿ ಸಮಯ ಬಂದಿತು. ಅನೇಕರನ್ನು ವರ್ಗಾಯಿಸಲಾಯಿತು, ಅನೇಕರು ಉನ್ನತ ಪದವಿ ಹೊಂದಿದರು. ಆದರೆ ನಿರ್ಮಲಾಗೆ ಉನ್ನತ ಪದವಿ ಸಿಗಲಿಲ್ಲ. ಮೇರಿಯನ್ನು ಆ ಸ್ಥಳದಲ್ಲಿ ನೇಮಿಸಲಾಯಿತು. ಆದರೆ ಆ ಸ್ಥಾನಕ್ಕೆ ಯಾವುದೇ ಅನುಭವವಿಲ್ಲದೆ ಅವಳನ್ನು ಹೇಗೆ ನೇಮಿಸಲಾಯಿತು ಎಂದು ನಿರ್ಮಲಾ ವಿಚಾರಿಸಿದಾಗ, ಆ ಸ್ಥಾನವನ್ನು ಬಹಳಷ್ಟು ಹಣ ಕೊಟ್ಟು ತೆಗೆದುಕೊಂಡಳು ಎಂದು ಕಂಡುಕೊಂಡಳು. ಆಗ ನಿರ್ಮಲಾ ಅಳುತ್ತಾ ಮನೆಗೆ ಬಂದು ಕ್ರೈಸ್ತರೇ ಹೀಗೇ. ಹೇಳುತ್ತಾರೆ ಆದರೆ ಮಾಡುವುದಿಲ್ಲ ಎಂದು ಪ್ರಲಾಪಿಸುತ್ತಾ ಅತ್ತಳು. ಅದರೊಂದಿಗೆ ಅವಳಿಗೆ ಕ್ರೈಸ್ತರ ಮೇಲೆ ದ್ವೇಷ ಉಂಟಾಯಿತು. ಲೋಕವು ಕ್ರೈಸ್ತರಿಂದ ಸತ್ಯ ಮತ್ತು ಸಾಕ್ಷಿ ಜೀವನವನ್ನು ನಿರೀಕ್ಷಿಸುತ್ತದೆ. ಸಾಕ್ಷಿಗಳಾಗಿ ಬದುಕುವುದು ದೇವರ ರಾಜ್ಯವನ್ನು ನಿರ್ಮಿಸಲು ನಮ್ಮ ಪಾಲು ಎಂಬುದನ್ನು ನಾವು ಮರೆತುಬಿಡುತ್ತೇವೆ.
ಅವರು ಪುನರುತ್ಥಾನವಾದ ಕೂಡಲೇ ತಮ್ಮ ಶಿಷ್ಯರಿಗೆ ಕಾದಿರಲು ಹೇಳಿ, ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ನನಗೆ ಸಾಕ್ಷಿಗಳಾಗಿರಬೇಕು ಅಂದನು. ಅದೇ ರೀತಿ, ಶಿಷ್ಯರು ಪವಿತ್ರಾತ್ಮವನ್ನು ಹೊಂದಿ ಸಾಕ್ಷಿಗಳಾಗಿ ಬದುಕುವಾಗ, ತಾವು ಕ್ರೈಸ್ತರು ಎಂದು ಹೆಸರುಗೊಂಡರು. ಆದರೆ ಇಂದು, ಕ್ರೈಸ್ತರು ಎಂಬುದನ್ನು ಹೊದಿಕೆಯಾಗಿ ಧರಿಸುತ್ತೇವೆ. ಅಗತ್ಯವಿಲ್ಲದಿದ್ದಾಗ ಅದನ್ನು ಬದಿಗಿಟ್ಟು ಲೋಕದವರಂತೆ ಬದುಕುತ್ತೇವೆ.
ಅನೇಕ ಜನರು ಸತ್ಯವೇದವನ್ನು ಓದಿದರೂ ಮತ್ತು ಯೇಸುವನ್ನು ಪ್ರೀತಿಸಿದರೂ, ಕ್ರೈಸ್ತರ ಹಾಗೆ ಜೀವಿಸದೇ ಇದ್ದಾರೆ. ಶಿಷ್ಯರು ಸಾಕ್ಷಿ ಜೀವನವನ್ನು ಜೀವಿಸಿದ್ದರಿಂದಲೇ ಉಜ್ಜೀವನ ಉಂಟಾಯಿತು. ಇಂದು ಉಜ್ಜೀವನವು ಬರದಿರಲು ಕಾರಣ ಸಾಕ್ಷಿ ಜೀವನ ಇಲ್ಲದಿರುವುದೇ. ಪೌಲನು ತಿಮೊಥೆಯನಿಗೆ ಆಲೋಚನೆ ಹೇಳುವಾಗ, ಮಾತಿನಲ್ಲಿ, ನಡವಳಿಕೆಯಲ್ಲಿ, ಪ್ರೀತಿಯಲ್ಲಿ, ಆತ್ಮದಲ್ಲಿ, ನಂಬಿಕೆಯಲ್ಲಿ ಮತ್ತು ಪರಿಶುದ್ಧತೆಯಲ್ಲಿ ಮಾದರಿಯಾಗಿರು ಎನ್ನುತ್ತಾರೆ. ಅದು ಸಹ ಯಾತಕ್ಕಾಗಿ ಅಂದರೆ ಒಬ್ಬನೂ ನಿನ್ನನ್ನು ತಿರಸ್ಕರಿಸದೇ ಇರುವುದಕ್ಕಾಗಿ ಎನ್ನುತ್ತಾರೆ.
ಇದನ್ನು ಓದುತ್ತಿರುವ ಪ್ರಿಯರೇ, ನಮ್ಮನ್ನು ಪರೀಕ್ಷಿಸಿಕೊಳ್ಳೋಣ. ನಮ್ಮ ಜೀವನವು ಯಾರಿಗೂ ಅಡ್ಡಿಯಾಗದಂತೆ ನೋಡಿಕೊಳ್ಳೋಣ. ಪೌಲನು ಹೇಳಿದಂತೆ, ನಮ್ಮ ಎಲ್ಲಾ ಮಾತುಗಳು ಮತ್ತು ಕಾರ್ಯಗಳಲ್ಲಿ ದೇವರನ್ನು ತೋರಿಸುವವರಾಗಿ ಬದುಕೋಣ. ಅವನವನ ಕ್ರಿಯೆಗಳಿಗೆ ತಕ್ಕ ಪ್ರತಿಫಲವು ನನ್ನೊಂದಿಗೆ ಬರುತ್ತದೆ ಎಂದು ಹೇಳಿ, ಫಲದೊಂದಿಗೆ ಕಾಯುತ್ತಿರುವ ನಮ್ಮ ದೇವರಿಗೆ ಕೊಡುಗೆಯಾಗಿ ನಮ್ಮ ಜೀವನದಲ್ಲಿ ಇತರರಿಗೆ ಆತನನ್ನು ತೋರಿಸೋಣ. ನಾವು ಮಾತನಾಡುವ ಮಾತುಗಳಿಗಿಂತ ಹೆಚ್ಚಾಗಿ ಕ್ರಿಸ್ತನನ್ನು ಪ್ರತಿಬಿಂಬಿಸೋಣ. ಆತನ ಪ್ರತಿನಿಧಿಗಳಾಗಿ ಬದುಕೋಣ ಮತ್ತು ಆಶೀರ್ವಾದಗಳನ್ನು ಪಡೆಯೋಣ.
- Mrs. ಅನ್ಬು ಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482