Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.03.2026
Share:

By Village Missionary Movement

Monday, 23-Mar-2026

ಧೈನಂದಿನ ಧ್ಯಾನ(Kannada) – 23.03.2026

 

ಮನೆವಾರ್ತೆಯವರು

 

“...ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಲ್ಲವೇ" - 1 ಕೊರಿಂಥ. 4:2

 

ಕಬ್ಬಿಣದ ವ್ಯಾಪಾರಿಯೊಬ್ಬರು ಅನೇಕ ದಿನಗಳು ಬೇರೆ ಊರಿಗೆ ಹೋಗಬೇಕಾಯಿತು. ಆಗ ಹತ್ತಿರದ ಮರಗೆಲಸಗಾರನಿಗೆ, "ನನ್ನ ಅಂಗಡಿಯನ್ನು ನೋಡಿಕೊಳ್ಳಿ" ಎಂದು ಹೇಳಿಬಿಟ್ಟು ಹೋದರು. ಅವರು ಸಹ ಒಪ್ಪಿಕೊಂಡರು. ಕಬ್ಬಿಣ ವ್ಯಾಪಾರಿ ಹೊರಗಿನ ಊರಿಗೆ ಹೋಗಿ ಕೆಲಸ ಮುಗಿಸಿ ಹಿಂತಿರುಗಿ ಬಂದಾಗ, ಅವರು ಆಘಾತಕ್ಕೊಳಗಾದರು. ಏಕೆಂದರೆ ಇವರ ಅಂಗಡಿಯಲ್ಲೆಲ್ಲಾ ಮರದ ಪೀಠೋಪಕರಣಗಳು ಜೋಡಿಸಲ್ಪಟ್ಟಿದ್ದವು. ಕಬ್ಬಿಣದ ವ್ಯಾಪಾರಿ ಅದನ್ನು ನೋಡಿ, ನನ್ನ ಅಂಗಡಿಯಲ್ಲಿದ್ದ ಸಾಮಾನುಗಳೆಲ್ಲಾ ಎಲ್ಲಿ ಎಂದು ಕೇಳಿದಾಗ ಮರದ ವ್ಯಾಪಾರಿ ಇರುವೆಗಳು ಎಲ್ಲಾ ಕಬ್ಬಿಣವನ್ನು ತಿಂದುಬಿಟ್ಟಿತು ಎಂದು ಹೇಳಿದರು. ಆದ್ದರಿಂದ ಮರದ ಸಾಮಾನುಗಳನ್ನು ಜೋಡಿಸಿಬಿಟ್ಟೆ ಎಂದರು. ತಕ್ಷಣ, ಪ್ರಕರಣವು ತನಿಖೆಗಾಗಿ ರಾಜನ ಬಳಿಗೆ ಬಂದಿತು. ಆಗ ರಾಜನು, "ಇರುವೆಗಳು ಕಬ್ಬಿಣವನ್ನು ತಿಂದರೆ ಅವರು ಏನು ಮಾಡುತ್ತಾರೆ? ಬಿಟ್ಟುಬಿಡು ಎಂದು ಹೇಳಿದರು. ಕಬ್ಬಿಣದ ವ್ಯಾಪಾರಿ ದಿಗ್ಭ್ರಮೆಗೊಂಡರು. ರಾಜನ ಹೃದಯದಲ್ಲಿ ಮರದ ವ್ಯಾಪಾರಿಯ ತಪ್ಪನ್ನು ಹೇಗಾದರೂ ತಿಳಿಸಬೇಕೆಂಬ ಯೋಚನೆ ಓಡುತ್ತಿತ್ತು. ರಾತ್ರಿಯಲ್ಲಿ, ಸೈನಿಕರು ಕಬ್ಬಿಣದ ವ್ಯಾಪಾರಿಯ ಮನೆಯ ಹಿಂಭಾಗದಲ್ಲಿ ಮರ ಮತ್ತು ಮರದ ವಸ್ತುಗಳನ್ನು ತಂದಿಟ್ಟರು. ಅವರಿಗೆ ಏನು ಅರ್ಥವಾಗದೆ ಸುಮ್ಮನೆ ನಿಂತರು. ಮರುದಿನ, ಮರದ ವ್ಯಾಪಾರಿಯ ಅಂಗಡಿಯಲ್ಲಿ ಏನೂ ಇಲ್ಲ. ಅದಕ್ಕೆ ಕಾರಣ ಕಬ್ಬಿಣದ ವ್ಯಾಪಾರಿಯೇ, ಎಂದು ಆ ವಿಷಯವನ್ನು ರಾಜನ ಬಳಿಗೆ ಕೊಂಡೊಯ್ದರು. ನಿನ್ನೆ ರಾತ್ರಿ ಏನಾಯಿತು ಎಂದು ಕಬ್ಬಿಣದ ವ್ಯಾಪಾರಿಗೆ ಅರ್ಥವಾಯಿತು. ನಂತರ ಅವರು ಇಲಿ ಎಲ್ಲಾ ಮರ ಮತ್ತು ಮರದ ವಸ್ತುಗಳನ್ನು ತೆಗೆದುಕೊಂಡು ಹೋಗಿದೆ ಎಂದು ಹೇಳಿದರು. ಮರದ ವ್ಯಾಪಾರಿ ಕೋಪಗೊಂಡರು, ಇಲಿ ಎಲ್ಲಾ ಮರವನ್ನು ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ ಎಂದು ಆಶ್ಚರ್ಯಪಟ್ಟರು. ಇರುವೆಗಳು ಕಬ್ಬಿಣವನ್ನು ತಿಂದಿವೆ ಎಂದು ಒಪ್ಪಿಕೊಂಡಂತೆ ಇದನ್ನೂ ಒಪ್ಪಿಕೊಳ್ಳಬೇಕೆಂದು ರಾಜನು ಅವರಿಗೆ ಹೇಳಿದರು. ತನಗೆ ವಹಿಸಿಕೊಟ್ಟದ್ದಕ್ಕೆ ನಿಷ್ಠನಾಗಿರದೇ ಹೋದ ಮರದ ವ್ಯಾಪಾರಿಯನ್ನು ರಾಜನು ಸೆರೆಮನೆಗೆ ಹಾಕಿದರು.

 

ಇದೇ ರೀತಿ, ಈ ಲೌಕಿಕ ಜೀವನವು ದೇವರು ನಮಗೆ ನೀಡಿದ ಉಡುಗೊರೆಯಾಗಿದೆ. ಇದರಲ್ಲಿ, ಮನೆ, ಆಸ್ತಿ, ಸಂಪತ್ತು, ಪ್ರತಿಭೆಗಳು, ಸ್ಥಾನಮಾನ ಮತ್ತು ಕುಟುಂಬ ಎಲ್ಲವೂ ನಮ್ಮ ಜವಾಬ್ದಾರಿಯಡಿಯಲ್ಲಿ ನಮಗೆ ನೀಡಲಾಗಿದೆ. ಅವು ನಮಗೆ ಸ್ವಂತವಾದವುಗಳಲ್ಲ. ನಾವು ಅದನ್ನು ಹೇಗೆ ಬಳಸುತ್ತೇವೆ ಎಂಬುದರ ಆಧಾರದ ಮೇಲೆ ಅದನ್ನು ನಾವು ಉಳಿಸಿಕೊಳ್ಳುತ್ತೇವೆ. ಸತ್ಯವೇದವು ಅದನ್ನೇ ಮನೆವಾರ್ತೆಯವನು ಎಂದು ಕರೆಯುತ್ತದೆ. ಒಂದು ತಲಾಂತನ್ನು ತೆಗೆದುಕೊಂಡ ವ್ಯಕ್ತಿಯಂತೆ ನಾವು ಬೇಜವಾಬ್ದಾರಿ ಮತ್ತು ಅಜಾಗರೂಕರಾಗಿದ್ದರೆ ಅಥವಾ ನೆಬೂಕದ್ನೇಚ್ಚರನಂತೆ ಅದು ನನ್ನದು ಎಂದು ಭಾವಿಸಿದರೆ, ನಾವು ಶಿಕ್ಷೆಗೆ ಒಳಗಾಗುತ್ತೇವೆ ಮತ್ತು ಅದರಿಂದ ವಂಚಿತರಾಗುತ್ತೇವೆ. ಆದ್ದರಿಂದ, ನಮ್ಮ ಪಾಲು ಏನೆಂದರೆ, ಈ ಎಲ್ಲಾ ವಸ್ತುಗಳನ್ನು ನಮಗೆ ನೀಡಿದ ದೇವರಿಗಾಗಿ ಅದನ್ನು ಖರ್ಚು ಮಾಡುವುದು. ಏಕೆಂದರೆ ದೇವರು ನಮಗೆ ಕೊಟ್ಟದ್ದನ್ನು ನಾವು ಆತನಿಗಾಗಿ ಖರ್ಚು ಮಾಡಿದಾಗ, ಆತನ ರಾಜ್ಯವು ಭೂಮಿಯ ಮೇಲೆ ಬರುತ್ತದೆ. ದೇವರು ನಮಗೆ ಪ್ರಾರ್ಥಿಸಲು ಕಲಿಸಿದಾಗ ಅದನ್ನೇ ಹೇಳಿದರು. ಪ್ರಿಯರೇ, ನಾವು ಲೋಕದಲ್ಲಿ ನಮಗೆ ಕೊಡಲ್ಪಟ್ಟದ್ದಕ್ಕೆಲ್ಲಾ ಮಾಲೀಕರಲ್ಲ, ಆದರೆ ಮೇಲ್ವಿಚಾರಕರು. ಮಾಲೀಕರು ದೇವರು. ಒಂದು ದಿನ ನಾವು ಅವರಿಗೆ ಲೆಕ್ಕ ಕೊಡಬೇಕಾಗುತ್ತದೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ದೇವರು ನಮಗೆ ಕೊಟ್ಟಿರುವ ಸಮಯ, ಸ್ಥಾನಮಾನ, ಸಂಪತ್ತು, ಮಕ್ಕಳು ಮತ್ತು ಪ್ರತಿಭೆಗಳನ್ನು ಆತನಿಗಾಗಿ ಮತ್ತು ಭೂಮಿಯ ಮೇಲೆ ಆತನ ರಾಜ್ಯದ ವಿಸ್ತರಣೆಗಾಗಿ ಖರ್ಚು ಮಾಡೋಣ ಮತ್ತು ದೇವರ ಆಶೀರ್ವಾದವನ್ನು ಪಡೆಯೋಣ. ನಾವು ದೇವರಿಂದ ಪಡೆದದ್ದನ್ನು ಆತನ ರಾಜ್ಯದ ವಿಸ್ತರಣೆಗೆ ಪಾಲು ನೀಡೋಣ. ಆತನು ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ಕೊಡುತ್ತಾರೆ. ಆತನಿಗಾಗಿ ನೀಡಲು ಮುಂದೆ

- ಬರೋಣ!

 

ಪ್ರಾರ್ಥನಾ ಅಂಶ:

ಮಿಷನರಿ ತರಬೇತಿ ಕಟ್ಟಡವನ್ನು ನಿರ್ಮಿಸಲು ಸರ್ಕಾರದ ಅನುಮತಿ ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al