By Village Missionary Movement
Sunday, 22-Mar-2026ಧೈನಂದಿನ ಧ್ಯಾನ(Kannada) – 22.03.2026 (Kids special)
ಸಮಯವು ನಿಮ್ಮ ಕೈಯಲ್ಲಿದೆ
"ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ." - ಕೊಲೊಸ್ಸೆ 4:5
Hai ಪುಟಾಣಿಗಳೇ ಚೆನ್ನಾಗಿದ್ದೀರಾ? Home work ಏನೂ ಮಾಡಿಲ್ವಾ? ಎಲ್ಲರ ಕೈಯಲ್ಲಿಯೂ ಮೊಬೈಲ್ ಫೋನ್ ಇದೆ. ಸರಿ... ಸರಿ... ಅಕ್ಕ ನಿಮಗೊಂದು ಕಥೆ ಹೇಳಲಿದ್ದೇನೆ.
ರಾಜ ಎಂಬ ಒಬ್ಬ ಶ್ರೀಮಂತ ಅಣ್ಣ ಇದ್ದರು. ಅವರ ತಂದೆ ದೊಡ್ಡ ಕೋಟ್ಯಾಧಿಪತಿ ಮತ್ತು ಉದ್ಯಮಿ ಆಗಿದ್ದರು. ಆ ರಾಜ ಅಣ್ಣ ಏನು ಕೇಳಿದ್ರೂ, ಅವರ ಅಪ್ಪ ತೆಗೆದುಕೊಡುತ್ತಿದ್ದರು. ಯಾವುದೇ ಕೊರತೆಗಳಿಲ್ಲದೆ ಬೆಳೆದು ದೊಡ್ಡ ವ್ಯಕ್ತಿಯಾದರು. ಅಪ್ಪ ನಮ್ಮ ಮಗ ಜವಾಬ್ದಾರಿಯುತನಾಗಿರಬೇಕು ಎಂದು ಭಾವಿಸಿ ತರಬೇತಿ ಇಟ್ಟರು. ಅದು ಏನು ಗೊತ್ತಾ? ಪ್ರತಿದಿನ 24 ಸಾವಿರ ರೂಪಾಯಿಗಳನ್ನು ಕೊಟ್ಟರು. ಅದು ಎಷ್ಟು ಸಂತೋಷ ಎಂದು ತಾನೇ ನೀವು ಭಾವಿಸುತ್ತಿದ್ದೀರ. ಆ ಹಣವನ್ನು ವ್ಯರ್ಥವಾಗಿ ಖರ್ಚು ಮಾಡದೇ, ಅದನ್ನು ಉಪಯುಕ್ತವಾಗಿ ಖರ್ಚು ಮಾಡಬೇಕು. ಆ ಒಂದು ದಿನದಲ್ಲಿ ನೀನು 24 ಸಾವಿರ ರೂಪಾಯಿಗಳನ್ನು ಖರ್ಚು ಮಾಡದಿದ್ದರೆ, ಅದು ಆ ಖಾತೆಯಲ್ಲಿ ಇರುವುದಿಲ್ಲ. ಅದು ನಿಷ್ಪ್ರಯೋಜಕ ಹಣವಾಗುತ್ತದೆ. ಹಾಗಾಗಿ ಆ ರಾಜ ಅಣ್ಣ, ನಿದ್ದೆ ಮಾಡದೆ, ಸೋಮಾರಿಯಾಗಿರದೆ, ಸಮಯ ವ್ಯರ್ಥ ಮಾಡದೆ, ಪ್ರತಿದಿನ ಈ ಹಣವನ್ನು ಉಪಯುಕ್ತವಾಗಿ ಹೇಗೆ ಖರ್ಚು ಮಾಡೋಣ. ಯಾರಿಗೆ ಸಹಾಯ ಮಾಡೋಣ ಎಂದು ಯೋಚಿಸಿ ಕ್ರಿಯೆ ಮಾಡಿದರು. ಕೊನೆಗೆ ಏನಾದ್ರು ಗೊತ್ತಾ? ಒಂದು ದೊಡ್ಡ ಉದ್ಯಮಿ ಆಗಿಬಿಟ್ಟರು.
ಹೌದು, ಪುಟಾಣಿಗಳೇ! ಯೇಸಪ್ಪ ನಮ್ಮ ಕೈಗಳಲ್ಲೂ ದಿನಕ್ಕೆ 24 ಗಂಟೆಗಳನ್ನು ಕೊಟ್ಟಿದ್ದಾರೆ. ನೀವು ಇದನ್ನು ಹೇಗೆ ಬಳಸುತ್ತಿದ್ದೀರಿ? ಎಂದು ಯೇಸಪ್ಪ check ಮಾಡ್ತಾರೆ. ಪರಿಶೀಲಿಸುತ್ತಿದ್ದಾರೆ. ಆ ಸುವರ್ಣ ದಿನ ಕಳೆದುಹೋದರೆ, ಪುನಃ ಅದು ನಮಗೆ ಸಿಗುವುದಿಲ್ಲ. ಆದ್ದರಿಂದ ನಾವು ಪ್ರತಿ ಗಂಟೆಯನ್ನು ಉಪಯುಕ್ತವಾಗಿ ಕಳೆಯಬೇಕು ಪುಟಾಣಿಗಳೇ. ನಿನ್ನ ಸಮಯವನ್ನು ನೀನು ಹೇಗೆ ಉಪಯೋಗಿಸುತ್ತಿದ್ದೀಯ? ಯೇಸಪ್ಪ ನಿನಗೆ ಕೊಟ್ಟಿರುವ ಸಮಯದಲ್ಲಿ ಅವರಿಗೆ ಪ್ರಯೋಜನವಾಗುವಂತೆ ಏನು ಮಾಡಲಿದ್ದೀಯ? ನೀನು ಕಳೆಯುವ ಸಮಯವನ್ನು ನೋಡಿ ಯೇಸಪ್ಪ ಸಂತೋಷಪಡುತ್ತಾರಾ? ಅಥವಾ ಅವರು ದುಃಖಪಡುತ್ತಾರಾ? ನೀನೇ ಯೋಚಿಸಿ ನೋಡು. ಗಂಟೆಗಟ್ಟಲೆ ಟಿವಿ ನೋಡುತ್ತಾ, ಸೆಲ್ ಫೋನ್ ನೋಡುತ್ತಾ, ನಿನ್ನ ಸಮಯವನ್ನು ವೇಸ್ಟ್ ಮಾಡದೇ, Home work ಬರೆಯಲು, ಆಟವಾಡಲು, ನಿಮ್ಮ ಹೆತ್ತವರಿಗೆ ಸಹಾಯ ಮಾಡಲು, ಹೀಗೆ ಚುರು ಚುರುಕಾಗಿ ಇರಬೇಕು ಸೋಮಾರಿಯಾಗಿ ಇರಬಾರದು. ನೀವು ಹೀಗೆ ಮಾಡಿದರೆ, ಯೇಸಪ್ಪ ಸಂತೋಷಪಡುತ್ತಾರೆ O.K ನಾ ಪುಟಾಣಿಗಳೇ!
- Sis.ಎಸ್ತೇರ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482