Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.03.2026
Share:

By Village Missionary Movement

Tuesday, 17-Mar-2026

ಧೈನಂದಿನ ಧ್ಯಾನ(Kannada) – 17.03.2026

 

80 ವರ್ಷ ವಯಸ್ಸಿನ ವೃದ್ಧನ ಪಾಲು 

 

"...ಜನರು ಅರಣ್ಯಪ್ರಯಾಣದಿಂದ ಹಸಿದವರೂ ದಣಿದವರೂ ಬಾಯಾರಿದವರೂ ಆಗಿದ್ದಾರೆ ಅಂದುಕೊಂಡು ಇವುಗಳನ್ನು ತಂದರು" - 2 ಸಮು. 17:29 

 

ಅರಸನಾದ ದಾವೀದನು ತನ್ನ ಮಗನಾದ ಅಬ್ಷಾಲೋಮನ ನಿಮಿತ್ತ ಪಟ್ಟಣದಿಂದ ಮಹನಯಿಮಿಗೆ ಓಡಿಹೋದಾಗ, ಬರ್ಜಿಲ್ಲೈ ಎಂಬ 80 ವರ್ಷ ವಯಸ್ಸಿನ ವ್ಯಕ್ತಿ ದಾವೀದನನ್ನು ಮತ್ತು ಅವನ ಜನರನ್ನು ಪೋಷಿಸಲು ಹಾಸಿಗೆಗಳು, ಗೋಧಿ, ಬಾರ್ಲಿ, ದ್ವಿದಳ ಧಾನ್ಯಗಳು, ಜೇನುತುಪ್ಪ, ಬೆಣ್ಣೆ ಮತ್ತು ಮೊಸರನ್ನು ತಂದರು. ಆ ಸಮಯದಲ್ಲಿ, ದಾವೀದನು ರಾಜ ಸ್ಥಾನದಲ್ಲಿರಲಿಲ್ಲ, ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರು. ಅಂದರೆ, ಹಿಂದಿನ ರಾಜ. ಆದಾಗ್ಯೂ, 80 ವರ್ಷ ವಯಸ್ಸಿನ ಬರ್ಜಿಲ್ಲೈ ನಿರ್ಲಕ್ಷಿಸಲಿಲ್ಲ ಮತ್ತು ಎಲ್ಲಾ ರೀತಿಯ ವಸ್ತುಗಳನ್ನು ತಂದು ದಾವೀದನನ್ನು ಬೆಂಬಲಿಸಿದರು.

 

ನಮ್ಮ ಪಾಲು ನೀಡಲು ವಯಸ್ಸು ಮುಖ್ಯವಲ್ಲ. ನಾನು ಮಾಡಬೇಕೆಂಬ ಆಲೋಚನೆಯನ್ನು ಹೊಂದಿದ್ದರೆ ಸಾಕು. 80 ವರ್ಷ ವಯಸ್ಸಿನ ಬರ್ಜಿಲ್ಲೈ ಹಿಂದಿನ ರಾಜ ದಾವೀದನಿಗಾಗಿ ತನ್ನಿಂದ ಸಾಧ್ಯವಾದದ್ದನ್ನು ಮಾಡುತ್ತೇನೆ ಎಂದು ಭಾವಿಸಿದಾಗ, ರಾಜಾಧಿರಾಜನು, ಕರ್ತಾಧಿ ಕರ್ತನೂ ಆಗಿರುವ ದೇವರಿಗಾಗಿಯೂ ಮತ್ತು ಇಂದಿನ ಆತನ ಸೇವೆಗಾಗಿಯೂ ನಿಮ್ಮ ಪಾಲು ಎಷ್ಟು ಮುಖ್ಯ ಎಂದು ಯೋಚಿಸಿ ನೋಡಿ.

 

ಸೇವೆಯಲ್ಲಿ ಇಂತಹ ಅಗತ್ಯ ಪರಿಸ್ಥಿತಿಗಳು ಉದ್ಭವಿಸಬಹುದು. ಹಾಗಾದರೆ ನಿಮ್ಮ ಕೊಡುಗೆ ತುಂಬಾ ಅವಶ್ಯಕ. ಈ ಬರ್ಜಿಲ್ಲೈ ಯಾವುದೇ ನಿರೀಕ್ಷೆಗಳೊಂದಿಗೆ ದಾವೀದನಿಗಾಗಿ ಈ ಕೆಲಸಗಳನ್ನು ಮಾಡಲಿಲ್ಲ. ದಾವೀದನು ತನ್ನ ಪರಿಸ್ಥಿತಿ ಸರಿಯಾದ ನಂತರ ತನ್ನ ಊರಿಗೆ ಹಿಂತಿರುಗಿದರು. ಹೊರಡುವಾಗ ದಾವೀದನು ಈ 80 ವರ್ಷ ವಯಸ್ಸಿನ ಬರ್ಜಿಲ್ಲೈಯನ್ನು ಕರೆದರು. ನೀವು ನನ್ನೊಂದಿಗೆ ಬರಬೇಕು, ನಾನು ನಿಮ್ಮನ್ನು ನನ್ನೊಂದಿಗೆ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ಆಗ ಬರ್ಜಿಲ್ಲೈ, ಒಳ್ಳೆಯದಾಯ್ತು, ಇವರೊಂದಿಗೆ ಹೋಗೋಣ ಎಂದು ಅಂದುಕೊಳ್ಳಲಿಲ್ಲ. ಏಕೆಂದರೆ ಆ ಮನುಷ್ಯನು ಯಾವುದೇ ಪ್ರತಿಫಲವನ್ನು ನಿರೀಕ್ಷಿಸಿ ತನ್ನ ಪಾಲನ್ನು ಮಾಡಲಿಲ್ಲ. 

 

ನನಗೆ ಪ್ರಿಯರಾದವರೇ! ನಾವು ಕರ್ತನಿಗಾಗಿ ನಮ್ಮ ಪಾಲನ್ನು ಮಾಡಿದರೆ, ತಕ್ಕ ಸಮಯದಲ್ಲಿ ಖಂಡಿತವಾಗಿಯೂ ನಮ್ಮ ಪಾಲಿಗೆ ಸರಿಯಾದ ಪ್ರತಿಫಲವನ್ನು ಪಡೆಯುತ್ತೇವೆ. ಆದ್ದರಿಂದ, ದೇವರಿಗಾಗಿ ಕೆಲಸ ಮಾಡಲು ವಯಸ್ಸು ಅಡ್ಡಿಯಾಗಬಾರದು, ಅಥವಾ ನಾವು ಅವಕಾಶಕ್ಕಾಗಿ ಕಾಯಬಾರದು. ನಾವು ಯಾವಾಗಲೂ ಸ್ವಾರ್ಥವಿಲ್ಲದೆ ದೇವರಿಗಾಗಿ ಕೆಲಸ ಮಾಡಲು ಸಿದ್ಧರಾಗಿರುವಾಗ, ನಾವು ದೇವರಿಂದ ಆಶೀರ್ವಾದಗಳನ್ನು ಪಡೆಯುತ್ತೇವೆ. ಇದನ್ನು ಇಬ್ರಿಯ 6:10 ರಲ್ಲಿ "ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ" ಎಂದು ಸುಂದರವಾಗಿ ಹೇಳಲ್ಪಟ್ಟಿದೆ. ಆದ್ದರಿಂದ, ಉತ್ಸಾಹವಾಗಿ ದೇವರಿಗಾಗಿ ಕೆಲಸ ಮಾಡೋಣ. 

- Mrs. ಹೆಪ್ಸಿಬಾ ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ದಯವಿಟ್ಟು ಪ್ರತಿ ತಾಲ್ಲೂಕಿನಲ್ಲಿರುವ ಸುವಾರ್ತಾಬೋಧಕರು ನಮ್ಮೊಂದಿಗೆ ಸೇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al