Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.03.2026
Share:

By Village Missionary Movement

Monday, 16-Mar-2026

ಧೈನಂದಿನ ಧ್ಯಾನ(Kannada) – 16.03.2026

 

ಫಲದಾಯಕ ಜೀವನ 

 

"ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ" - 1 ಪೇತ್ರ 4:10

 

ಕ್ರಿಸ್ತನಿಗಾಗಿ ಬದುಕುವ ಜೀವನ ಎಂಬುದು ಪದಗಳಲ್ಲಿ ಅಲ್ಲ, ಸಮರ್ಪಣೆಯಲ್ಲಿ ವ್ಯಕ್ತವಾಗುತ್ತದೆ. ದೇವರು ಪ್ರತಿಯೊಬ್ಬ ನಂಬಿಕೆಯುಳ್ಳವರಿಗೂ ಮೂರು ಅಮೂಲ್ಯ ಉಡುಗೊರೆಗಳನ್ನು ನೀಡಿದ್ದಾರೆ: ಸಮಯ, ಪ್ರತಿಭೆ ಮತ್ತು ಸಂಪತ್ತು. ನಾವು ಈ ಮೂರನ್ನು ದೇವರ ಮಹಿಮೆಗಾಗಿ ಬಳಸಿದಾಗ, ನಮ್ಮ ಜೀವನವು ಫಲಪ್ರದವಾಗುತ್ತದೆ.

 

ಒಬ್ಬ ಬುದ್ಧಿವಂತ ರೈತನು ಉತ್ತಮ ಫಸಲನ್ನು ಕೊಯ್ಯಲು ಸಮಯ, ಉಪಕರಣ ಮತ್ತು ನೀರು ಈ ಮೂರನ್ನು ಕಳೆದುಕೊಳ್ಳುವುದಿಲ್ಲ. ಅದೇ ರೀತಿ, ನಂಬಿಕೆಯುಳ್ಳವನ ಜೀವನದಲ್ಲಿ, ಸಮಯವು ಬೀಜದಂತೆ, ಪ್ರತಿಭೆಯು ಸಾಧನದಂತೆ ಮತ್ತು ಸಂಪತ್ತು ಜೀವ ನೀಡುವ ನೀರಿನಂತೆ. ಈ ಮೂರು ಒಟ್ಟಿಗೆ ಸೇರಿದಾಗ ಮಾತ್ರವೇ ಆಧ್ಯಾತ್ಮಿಕ ಸುಗ್ಗಿಯು ಸಿಗುತ್ತದೆ.

 

ಸಮಯ ಎಂಬುದು ತಿರುಗಿ ಸಿಗದಂತಹ ದೇವರ ವರವಾಗಿದೆ. ಈ ಸಮಯವನ್ನು ಪ್ರಾರ್ಥನೆ, ಬೈಬಲ್ ಓದುವಿಕೆ ಮತ್ತು ಸೇವೆಗಾಗಿ ಮೀಸಲಿಡಬೇಕು. ಸಮಯವು ಬಿತ್ತಿದ ಬೀಜದಂತೆ (ಎಫೆಸ 5:16). ಪ್ರತಿಭೆ ಎಂಬುದು ದೇವರು ಕೊಟ್ಟ ತಲಾಂತುಗಳಾಗಿದೆ. ಹಾಡುವುದಾಗಲಿ, ಬೋಧನೆಯಾಗಲಿ, ಬರಹವಾಗಲಿ, ಆಡಳಿತವಾಗಲಿ ಅದನ್ನು ಕ್ರಿಸ್ತನಿಗಾಗಿ ಬಳಸಿದಾಗ, ಅದು ಅನೇಕರಿಗೆ ಆಶೀರ್ವಾದವಾಗುತ್ತದೆ. ಸಂಪತ್ತು ಕೇವಲ ಹಣವಲ್ಲ; ಅದು ದೇವರು ಕೊಟ್ಟ ಎಲ್ಲಾ ಸಂಪನ್ಮೂಲಗಳು! ಅವುಗಳನ್ನು ದೇವರ ರಾಜ್ಯಕ್ಕಾಗಿ ಹಂಚುವಾಗ, ಅದು ಬೀಜಕ್ಕೆ ನೀರು ಹಾಕಿದಂತೆ ಕಾರ್ಯನಿರ್ವಹಿಸುತ್ತದೆ. (ಮತ್ತಾಯ 6:21).

 

ಈ ಮೂರನ್ನು ಸರಿಯಾಗಿ ಉಪಯೋಗಿಸಿದ ಸತ್ಯವೇದದ ಮನುಷ್ಯರು ಅಪೊಸ್ತಲನಾದ ಪೌಲ ಮತ್ತು ನೆಹೆಮಿಯ! ಪೌಲನು ತನ್ನ ಎಲ್ಲಾ ಸಮಯ, ಜ್ಞಾನ ಮತ್ತು ಶ್ರಮವನ್ನು ಸುವಾರ್ತೆಗಾಗಿ ಸಮರ್ಪಿಸಿ "ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ" ಎಂಬ ಸಾಕ್ಷಿಯನ್ನು ಬಿಟ್ಟು ಹೋದರು (2 ತಿಮೊ. 4:7). ನೆಹೆಮಿಯ ಪ್ರಾರ್ಥನೆಯಲ್ಲಿ ಸಮಯವನ್ನು ಕಳೆದರು, ನಾಯಕತ್ವ ಕೌಶಲ್ಯಗಳೊಂದಿಗೆ ಕೆಲಸ ಮಾಡಿದರು, ಜನರಿಗೆ ತಮ್ಮ ಸಂಪನ್ಮೂಲಗಳನ್ನು ಹಂಚಿ, ಕುಸಿದ ಗೋಡೆಯನ್ನು ಕಡಿಮೆ ಸಮಯದಲ್ಲಿ ಪುನರ್ನಿರ್ಮಿಸಿದರು.(ನೆಹೆಮಿಯ 6:15).

 

ಸಮಯವನ್ನು ಬಿತ್ತಿದರೆ, ಪ್ರತಿಭೆಯಿಂದ ಕೆಲಸ ಮಾಡಿದರೆ, ಸಂಪತ್ತನ್ನು ಹಂಚಿಕೊಂಡರೆ - ಒಬ್ಬ ವಿಶ್ವಾಸಿಯ ಜೀವನ ಪೂರ್ಣ ಸುಗ್ಗಿಯಾಗಿ ಮಾರ್ಪಡುತ್ತದೆ. ಕ್ರಿಸ್ತನಿಗೆ ಸಮರ್ಪಿತವಾದ ಈ ಮೂರು ಉಡುಗೊರೆಗಳು ಭೂಮಿಯ ಮೇಲೆ ಫಲ ನೀಡುತ್ತವೆ ಮತ್ತು ನಿತ್ಯತ್ವದಲ್ಲಿ ಫಲವನ್ನು ಕೂಡಿಸುತ್ತದೆ. ಸಮಯವನ್ನು ಬಿತ್ತಿ, ಪ್ರತಿಭೆಯನ್ನು ಹೂಡಿಕೆ ಮಾಡಿದರೆ ಮತ್ತು ಸಂಪತ್ತನ್ನು ಹಂಚಿಕೊಂಡರೆ, ನಿಮ್ಮ ಜೀವನವು ಫಲಪ್ರದವಾಗುತ್ತದೆ.

- Mrs. ಬೆರ್ಲಿನ್ ಸೆಲ್ಲಾಬಾಯ್

 

ಪ್ರಾರ್ಥನಾ ಅಂಶ:

ಆಸ್ಪತ್ರೆಯಲ್ಲಿರುವವರು ಪರಿಹಾರಕನಾದ ಕ್ರಿಸ್ತನನ್ನು ಅರಿತುಕೊಳ್ಳಲು ಮತ್ತು ನಮ್ಮ ಸೇವಕರನ್ನು ದೇವರು ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet