Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.03.2026 (Kids Special)
Share:

By Village Missionary Movement

Sunday, 15-Mar-2026

ಧೈನಂದಿನ ಧ್ಯಾನ(Kannada) – 15.03.2026 (Kids Special)

 

ನಮ್ಮನ್ನು ಮರೆಯದ ದೇವರು

 

"...ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ." - ಇಬ್ರಿಯ 4:13

 

ಪ್ರೀತಿಯ ಮುದ್ದು ಪುಟಾಣಿಗಳೇ... ಹೇಗಿದ್ದೀರ? ಚೆನ್ನಾಗಿದ್ದೀರಾ? ಈ ವರ್ಷ ತುಂಬಾ ಚಳಿ ಇತ್ತು ಅಲ್ವಾ? ಈಗ ನಿಧಾನವಾಗಿ ಬೇಸಿಗೆ ಕಾಲ ಪ್ರಾರಂಭವಾಗುತ್ತಿದೆ. ಈ ವರ್ಷ ಬಿಸಿಲು ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ಹೇಳುತ್ತಿದ್ದಾರೆ. ಬೇಸಿಗೆ ಕಾಲ ಬಂದರೆ ತುಂಬಾ ನೀರು ಕುಡಿಯಬೇಕು. ಆಗ ಮಾತ್ರ ನಮ್ಮ ದೇಹವು ಆರೋಗ್ಯಕರವಾಗಿರುತ್ತದೆ ಮತ್ತು ನಾವು ಸಂತೋಷವಾಗಿರಬಹುದು. ನಾವು ಚಿಕ್ಕವರಾಗಿದ್ದಾಗ, ನಮ್ಮ ತಂದೆ ಮತ್ತು ತಾಯಿ ನಮ್ಮನ್ನು ನೋಡಿಕೊಳ್ಳುತ್ತಾರೆ. ಆದರೆ ನೀವು ಬೆಳೆದ ನಂತರ, ನಿಮ್ಮ ಬಗ್ಗೆ ನೀವೇ ಕಾಳಜಿ ವಹಿಸಬೇಕು. ನೀರಿನ ಬಾಟಲ್ ತೆಗೆದುಕೊಂಡು ಹೋಗಿ ಕುಡಿಯದೆ ವಾಪಸ್ ಹಾಗೆ ಎತ್ತಿಕೊಂಡು ಬರಬಾರದು. ನೀವು ಚೆನ್ನಾಗಿ ನೀರು ಕುಡಿಯಬೇಕು, ಸರೀನಾ, ಪುಟಾಣಿಗಳೇ?

 

ಈಗ ಒಂದು ಸಣ್ಣ ಕಥೆ ಹೇಳುತ್ತೇನೆ. Chair ನೋಡಿದ್ದೀರಾ? ಈಗ ಪ್ಲಾಸ್ಟಿಕ್ chair ಗಳನ್ನು ಉಪಯೋಗಿಸುತ್ತಿದ್ದೇವೆ. ಆದರೆ ಆ ಕಾಲದಲ್ಲಿ ಮರದ ಕುರ್ಚಿಗಳನ್ನು ಬಳಸುತ್ತಿದ್ದರು. ಕುರ್ಚಿ ಎಂದರೆ ನಾಲ್ಕು ಕಾಲುಗಳು, ಕುಳಿತುಕೊಳ್ಳಲು ಒಂದು ಆಸನ ಮತ್ತು ಒರಗಿಕೊಳ್ಳಲು ಒಂದು back ಇದೆಲ್ಲವನ್ನು ಒಂದಾಗಿ ಹಿಡಿದಿಟ್ಟುಕೊಳ್ಳುವುದು ಒಂದು ಚಿಕ್ಕ Nut ಅದು ಹೊರಗೆ ಕಾಣುವುದಿಲ್ಲ. ಆದರೆ ಅದುವೇ ಎಲ್ಲವನ್ನೂ ಒಟ್ಟಿಗೆ ಹಿಡಿದುಕೊಂಡಿದೆ. ಒಂದು ದಿನ ಆ Nut ಯೋಚಿಸಿತಂತೆ: "ಎಲ್ಲರಿಗೂ ಕಾಲುಗಳೇ ಕಾಣುತ್ತದೆ, Seat ಮಾತ್ರ ಕಾಣುತ್ತದೆ. ನಾನು ಮರೆಯಾಗಿದ್ದೇನೆ, ಯಾರೂ ನನ್ನನ್ನು ಗಮನಿಸಲೇ ಇಲ್ಲ. ನಾನೇ ಇಲ್ಲದೇ ಹೋಗುತ್ತೇನೆ" ಎಂದು ಅದು ಕಳಚಿ ಕೆಳಗೆ ಬಿದ್ದಿತಂತೆ. ಯಾರಿಗೂ ಅದು ಗೊತ್ತಾಗಲಿಲ್ಲ. ಆಗ ಒಬ್ಬರು ಅತಿಥಿ ಮನೆಗೆ ಬಂದ ಕೂಡಲೇ, Chair ಹಾಕಿದರು. ಅತಿಥಿ ಕುಳಿತ ಕೂಡಲೇ ಏನಾಯಿತು? ಕುರ್ಚಿಯ ಕಾಲು ಮುರಿದು... ಕೆಳಗೆ ಬಿತ್ತು. ಅದು ಅತಿಥಿಗೆ ಅವಮಾನ ಮತ್ತು ಮನೆಯವರಿಗೆ ಅವಮಾನ. ನಂತರ, ಅವರು ಅದನ್ನು ನೋಡಿದಾಗ, "ಓಹ್! ಆ Nut ಬಿದ್ದುಹೋಗಿದೆ" ಎಂದು ಅರಿತುಕೊಂಡರು. ಆಗಲೇ ಈ ಸಣ್ಣ Nut ಇಲ್ಲದೆ ಈ ದೊಡ್ಡ ಕುರ್ಚಿ ನಿಷ್ಪ್ರಯೋಜಕ ಎಂದು ಎಲ್ಲರೂ ಅರಿತುಕೊಂಡರು.

 

ಇದು ನಮ್ಮ ಜೀವನದಲ್ಲೂ ನಡೆಯುತ್ತಿದೆ. ಅನೇಕ ಜನರು ಯೇಸುವಿನ ಬಳಿಗೆ ಬಂದರು. ಯೋಹಾನನು, "ಇವರು ದೇವರ ಮಗ" ಎಂದು ಹೇಳಿದರು. ಅಂದ್ರೆಯ, "ನಾವು ಕರ್ತನನ್ನು ಕಂಡಿದ್ದೇವೆ" ಎಂದು ಹೇಳಿದರು. ನತಾನಯೇಲನು ಕೊನೆಯದಾಗಿ ಬಂದರು. ಯೇಸು ಅವರನ್ನು "ಕಪಟವಿಲ್ಲದ ಉತ್ತಮ ಇಸ್ರಾಯೇಲ್" ಎಂದು ಹೇಳಿದರು. ನೋಡುದ್ರಾ ಪುಟಾಣಿಗಳೇ, ಎಷ್ಟು ದೊಡ್ಡ ಆಶೀರ್ವಾದ! ಉಳಿದವರೆಲ್ಲರೂ ಹೊರಗೆ ಪರಿಚಿತರು. ಆದರೆ ಕೊನೆಯದಾಗಿ ಬಂದ ಒಬ್ಬರನ್ನೂ ದೇವರು ಮರೆಯಲಿಲ್ಲ. ಕೆಲವರು ನಿಮ್ಮನ್ನು ನೋಡಿ ಹೀಗೆ ಹೇಳಬಹುದು: 'ನೀನು ವ್ಯರ್ಥ, ನಿನ್ನಿಂದ ಯಾರಿಗೂ ಯಾವುದೇ ಪ್ರಯೋಜನವಿಲ್ಲ'. ಅದೆಲ್ಲದರ ಬಗ್ಗೆ ನೀನು ಚಿಂತಿಸಬೇಡ. ನೀನು ಹೊರಗೆ ಕಾಣಲಿಲ್ಲ ಅಂದರೂ, ನೀನು ಬಹಳ ಮುಖ್ಯ. ಕುರ್ಚಿಯಲ್ಲಿರುವ Nut ನ ಹಾಗೆ ನೀನು ಮರೆಯಾಗಿರಬಹುದು. ಆದರೆ ದೇವರ ದೃಷ್ಟಿಯಲ್ಲಿ, ನೀನು ಮರೆಯಾಗಿಲ್ಲ. ಆತನು ನಿನ್ನನ್ನೂ ಆಶೀರ್ವದಿಸಿ, ತನಗಾಗಿ ನಿನ್ನನ್ನು ಬಳಸಿಕೊಳ್ಳುತ್ತಾರೆ. ಸರೀನಾ Bye ಪುಟಾಣಿಗಳೇ.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet