Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.06.2021
Share:

By Village Missionary Movement

Thursday, 17-Jun-2021

ಧೈನಂದಿನ ಧ್ಯಾನ(Kannada) – 17.06.2021

 

ಒಣ ಗೌರವ

 

"...ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ;..." - ಮತ್ತಾಯ 5:37

 

ಆಂಧ್ರ ಪ್ರದೇಶದಲ್ಲಿ ಬಹು ಅದ್ಭುತವಾಗಿ ಸೇವೆಮಾಡಿದ ಸಹೋದರ ಏಸನ್ನ ರವರು ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ಹೀಗೆ ಹಂಚಿಕೊಳ್ಳುತ್ತಿದ್ದಾರೆ.

 

"ನನಗೆ ಬಾಳೆಹಣ್ಣು ಎಂದರೆ ಇಷ್ಟ. ರಾತ್ರಿ ಊಟದ ನಂತರ ಒಂದು ಬಾಳೆಹಣ್ಣು ಇದ್ದರೆ ಚೆನ್ನಾಗಿರುತ್ತದೆ ಎಂದು ಯೋಚಿಸುವುದುಂಟು. ಒಂದು ಬಾರಿ ಒಂದು ನಿರ್ದಿಷ್ಟವಾದ ಪಟ್ಟಣಕ್ಕೆ ಸಂದೇಶ ಕೊಡಲು ಹೋಗಿದ್ದೆನು.ಅಲ್ಲಿ ಕೂಟವು ಮುಗಿದ ಕೂಡಲೇ ರಾತ್ರಿ ಊಟವನ್ನು ಸಿದ್ಧ ಮಾಡಿದರು. ನನಗೆ ಬಾಳೆಹಣ್ಣು ಇಷ್ಟ ವೆಂಬುದು ಹೇಗೋ ತಿಳಿದುಕೊಂಡು ಒಂದು ಕುಟುಂಬದವರು ನನಗೆ ಬಾಳೆಹಣ್ಣನ್ನು ತೆಗೆದುಕೊಂಡು ಬಂದಿದ್ದರು. ನಾನೋ ನನ್ನನ್ನು ತಪ್ಪಾಗಿ ತಿಳಿದುಕೊಳ್ಳಬಾರದೆಂದು ಹಿಂಜರಿಕೆಯಿಂದ "ಬೇಡ, ಪರವಾಗಿಲ್ಲ" ಎಂದು ಹೇಳಿಬಿಟ್ಟೆನು. ಬಾಯಿ ಹೇಳಿತೇ ಹೊರತು ಮನಸ್ಸು ಬೇಕೆಂದು ಹೇಳುತ್ತಿತ್ತು. ಅಷ್ಟರೊಳಗೆ ಆ ಕುಟುಂಬದವರು ಅಯ್ಯನವರಿಗೆ ಬಾಳೆಹಣ್ಣು ಇಷ್ಟವಿಲ್ಲವೋ ಏನೋ? ಬಲವಂತ ಮಾಡಬಾರದು ಎಂದು ನೆನೆಸಿ ಹೋಗಿಬಿಟ್ಟರು. ಬಾಳೆಹಣ್ಣು ಹೋಗಿಬಿಟ್ಟಿತೇ ಎಂದು ದುಃಖ ಪಟ್ಟೆನು. ಯಾವುದಕ್ಕೂ ಪ್ರಯೋಜನವಿಲ್ಲದ ಮನುಷ್ಯ ಗೌರವಕ್ಕಾಗಿ ಇಂದು ಬಾಳೆಹಣ್ಣನ್ನು ಕಳೆದುಕೊಂಡೆನು." ಎಂದರು. ನಿಮ್ಮ ಜೀವನದಲ್ಲಿ ಇದರಂತೆ ಒಣ ಗೌರವದಿಂದ ದೇವರು ಕೊಡುವ ಯಾವುದೊಂದು ಆಶೀರ್ವಾದವನ್ನು ಕಳೆದುಕೊಳ್ಳಬಾರದು ಎಂದು ಮರುದಿನ ಸಂದೇಶ ಕೊಟ್ಟರಂತೆ.

 

ಸತ್ಯವೇದದಲ್ಲಿ 2 ಅರಸುಗಳು 5 ನೇ ಅಧ್ಯಾಯದಲ್ಲಿ ನಾಮಾನನ ಬಗ್ಗೆ ಓದುತ್ತೇವೆ. ನಾಮಾನನು ಬಹಳ ದೂರ ನಂಬಿಕೆಯಿಂದ ಪ್ರಯಾಣ ಮಾಡಿ ಎಲೀಷನ ಮನೆ ಬಾಗಲಿನವರೆಗೆ ಬಂದುಬಿಟ್ಟನು. "ಹೋಗಿ ಯೊರ್ದನ್ ಹೊಳೆಯಲ್ಲಿ ಏಳು ಬಾರಿ ಸ್ನಾನ ಮಾಡು" ಎಂದು ಎಲೀಷನ ಕೆಲಸದವನ ಮುಖಾಂತರ ಹೇಳಲ್ಪಟ್ಟದ್ದನ್ನು ಕೇಳಿ ಬಹು ಕೋಪಗೊಂಡನು ಎಂದು ಬರೆಯಲ್ಪಟ್ಟಿದೆ. ಆದರೂ ತನ್ನ ಕೆಲಸದವನ ಮಾತು ಕೇಳಿ ಯೊರ್ದನ್ ಹೊಳೆಯಲ್ಲಿ ಸ್ನಾನ ಮಾಡಿದ್ದರಿಂದ ಕುಷ್ಟರೋಗಿಯಾದ ಅವನ ಶರೀರವು ಚಿಕ್ಕ ಮಗುವಿನ ಶರೀರದ ಹಾಗೆ ಮಾರ್ಪಟ್ಟಿತು ಎಂದು ಓದುತ್ತೇವೆ.

 

ಇದನ್ನು ಓದುತ್ತಿರುವ ಪ್ರೀತಿಯ ಸಹೋದರ, ಸಹೋದರಿಯೇ, ನಾವು ಕೂಡ ಅನೇಕ ಕಾರ್ಯಗಳಲ್ಲಿ, ಮುಕ್ಕಾಲು ಕಾರ್ಯಗಳನ್ನು ಮಾಡಿ ಬಿಟ್ಟು ಮನಸ್ಸಿನ ಆಳದಲ್ಲಿರುವ ಒಣ ಗೌರವದಿಂದ ಅನೇಕ ಆಶೀರ್ವಾದಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಸಹಾಯ ಪಡೆದುಕೊಳ್ಳಲು ಬಾಗಲಿನವರೆಗೂ ಬಂದು ಬಿಟ್ಟೋ, ಇನ್ನು ಯಾಕೆ ಹಿಂಜರಿಕೆ. ಒಣ ಗೌರವವನ್ನು, ನಾನು ಎಂಬ ಹೆಮ್ಮೆಯನ್ನು ತೊಲಗಿಸೋಣ. ಆಶೀರ್ವಾದಗಳನ್ನು ಹೊಂದಿಕೊಳ್ಳೋಣ. ಮತ್ತೊಬ್ಬರಿಗೆ ಆಶೀರ್ವಾದಕರವಾಗಿ ಮಾರ್ಪಡೋಣ.

 

ಪ್ರಾರ್ಥನಾ ಅಂಶ:-

ಸೈತಾನನಿಂದ, ರೋಗದಿಂದ ಕಟ್ಟಲ್ಪಟ್ಟ ಜನರಿಗೆ Healing service ನಡೆಸಲ್ಪಡಲು, ಇದರ ಮುಖಾಂತರ ಅನೇಕರು ಅದ್ಭುತವಾದ ಬಿಡುಗಡೆಯನ್ನು ಹೊಂದಿಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş