Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.03.2026
Share:

By Village Missionary Movement

Saturday, 14-Mar-2026

ಧೈನಂದಿನ ಧ್ಯಾನ(Kannada) – 14.03.2026

 

ದೇವರಿಗೆ ನಿಮ್ಮ ಪಾಲು ಏನು? 

 

"ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ;..." - ಮತ್ತಾಯ 25:23

 

ಒಬ್ಬ ಯಜಮಾನನು ವಿದೇಶಕ್ಕೆ ಹೋಗುವಾಗ, ತನ್ನ ಸೇವಕರಿಗೆ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಐದು ತಲಾಂತುಗಳನ್ನು, ಒಬ್ಬರಿಗೆ, ಎರಡು ತಲಾಂತುಗಳನ್ನು ಮತ್ತು ಇನ್ನೊಬ್ಬರಿಗೆ ಒಂದು ತಲಾಂತನ್ನು ಕೊಟ್ಟು ಪ್ರಯಾಣ ಬೆಳೆಸಿದರು. ಅವರು ಹಿಂದಿರುಗಿ ಬಂದಾಗ, ಐದು ತಲಾಂತುಗಳನ್ನು ಪಡೆದವನು ಇನ್ನೂ ಐದು ತಲಾಂತುಗಳನ್ನು ಗಳಿಸಿದ್ದನು. ಅದೇ ರೀತಿ, ಎರಡು ತಲಾಂತುಗಳನ್ನು ಪಡೆದವನು ಇನ್ನೂ ಎರಡು ತಲಾಂತುಗಳನ್ನು ಗಳಿಸಿದ್ದನು. ಆದರೆ ಒಂದು ತಲಾಂತನ್ನು ಪಡೆದವನು ಸೋಮಾರಿಯಾಗಿದ್ದು ಅದನ್ನು ನೆಲದಲ್ಲಿ ಬಚ್ಚಿಟ್ಟನು. ಆದ್ದರಿಂದ ಯಜಮಾನನು ಅವನನ್ನು ಹೊರಗೆ ಕತ್ತಲೆಗೆ ಹಾಕಿಬಿಡಿರಿ ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು ಎಂದು ಆದೇಶಿಸಿದನು. ಅವನು ಎಷ್ಟು ದೊಡ್ಡ ದಂಡನೆಯನ್ನು ಹೊಂದಿದನು!

 

ಇದೇ ರೀತಿಯಲ್ಲಿ, ಕರ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಪ್ರತಿಭೆಗಳು, ಸಾಮರ್ಥ್ಯಗಳು ಮತ್ತು ಅವಕಾಶಗಳನ್ನು ನೀಡುತ್ತಾರೆ ಮತ್ತು ದೇವರಿಗಾಗಿ ಕೆಲಸ ಮಾಡಲು ನಮ್ಮನ್ನು ಕರೆಯುತ್ತಾರೆ. ನಾವು ಅವರಿಗಾಗಿ ಏನು ಮಾಡುತ್ತಿದ್ದೇವೆ? ನಾವು ದೇವರಿಗಾಗಿ ನಮ್ಮ ಸಮಯವನ್ನು ನೀಡುತ್ತಿದ್ದೇವಾ, ಸುವಾರ್ತೆಯನ್ನು ಸಾರುತ್ತಿದ್ದೇವೆಯೇ? ಅಥವಾ ಆತ್ಮಗಳನ್ನು ಸಂಪಾದಿಸಲು ಕರಪತ್ರಗಳನ್ನು ನೀಡುತ್ತಿದ್ದೇವೆಯೇ? ಅಥವಾ ನಾವು ಕಷ್ಟದಲ್ಲಿರುವವರಿಗೆ ಸಂಕಟದಲ್ಲಿರುವವರಿಗೆ ಸಹಾಯ ಮಾಡಲು ಕೈಚಾಚುತ್ತಿದ್ದೇವೆಯೇ? ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣ. ಬೈಬಲ್‌ನಲ್ಲಿ, ಯೇಸುವಿಗಾಗಿ ತಮ್ಮ ಜೀವನವನ್ನು ಮತ್ತು ವಸ್ತುಗಳನ್ನು ಅರ್ಪಿಸಿದ ಕೆಲವರ ಕುರಿತು ನೋಡೋಣ.

 

ಯೇಸು ಶಿಲುಬೆಯನ್ನು ಹೊತ್ತುಕೊಂಡು ಹೋಗುತ್ತಿರುವಾಗ, ಕುರೇನೆ ಪಟ್ಟಣದ ಸೀಮೋನನು ತನ್ನ ಶಿಲುಬೆಯನ್ನು ಹೊತ್ತುಕೊಂಡು ಬರುವಂತೆ ಒತ್ತಾಯಿಸಲ್ಪಟ್ಟನು. ತನ್ನ ಸಮಯವನ್ನು ಮತ್ತು ಪ್ರಯಾಸವನ್ನು ಯೇಸುವಿಗಾಗಿ ಉಪಯೋಗಿಸಿದ್ದು ಅವನ ಪಾಲಾಗಿತ್ತು. ನಂತರ, ಯೇಸು ಯೆರೂಸಲೇಮ್ ಗೆ ಮೆರವಣಿಗೆ ಹೋಗಬೇಕಾದಾಗ, ಒಂದು ಕತ್ತೆಯ ಅಗತ್ಯವಿತ್ತು. ಒಂದು ಕುಟುಂಬವು ತಮ್ಮ ಪಾಲಾಗಿ ಕತ್ತೆಯನ್ನು ನೀಡಿತು. ಅದೇ ರೀತಿ, ಯೇಸುವಿಗೆ ಬೇಕಾಗಿರುವುದು ನಮ್ಮಂತಹ "ಕತ್ತೆ" ಯೇ ಆಗಿರಬಹುದು. ನಾವು ಆತನಿಗೆ ನಮ್ಮನ್ನು ಅರ್ಪಿಸಿಕೊಳ್ಳೋಣ. ಆ ಕತ್ತೆ ಯೇಸುವನ್ನು ಹೊತ್ತಂತೆ, ಯೇಸುವನ್ನು ಹೊರುವ ಕತ್ತೆಗಳಾಗಿ ನಮ್ಮನ್ನು ಅರ್ಪಿಸಿಕೊಳ್ಳೋಣ.

 

ಯೇಸು ಶಿಲುಬೆಯ ಮೇಲೆ ಮರಣಹೊಂದಿದ ನಂತರ, ಅರಿಮಥಾಯಾದ ಯೋಸೇಫನು ಯೇಸುವಿಗೆ ಸಮಾಧಿ ಮಾಡಲು ತನಗಾಗಿ ಅಗೆದ ಹೊಸ ಸಮಾಧಿಯನ್ನು ಕೊಟ್ಟನು. ಅದು ಇಂದಿಗೂ ನೆನಪಾಗುತ್ತದೆ. ಅದೇ ರೀತಿಯಲ್ಲಿ, ನಾವು ದೇವರಿಗೆ ನಮ್ಮ ಪಾಲನ್ನು ನೀಡೋಣ ಮತ್ತು ಆತನನ್ನು ಮಹಿಮೆಪಡಿಸೋಣ! ಆಮೆನ್. 

- Mrs. ಭುವನ ಧನಪಾಲನ್

 

ಪ್ರಾರ್ಥನಾ ಅಂಶ:

ಆಸ್ಪತ್ರೆ ಸೇವೆಗಳಲ್ಲಿ ದೇವರು ನಮ್ಮ ಸೇವಕರನ್ನು ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino