Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.03.2026
Share:

By Village Missionary Movement

Thursday, 12-Mar-2026

ಧೈನಂದಿನ ಧ್ಯಾನ(Kannada) – 12.03.2026

 

ಪ್ರಯಾಸವು ವ್ಯರ್ಥವಾಗುವುದಿಲ್ಲ 

 

"....ಯೇಸು ಅವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯುರೋಗಿಗೆ - ಮಗನೇ, ಧೈರ್ಯವಾಗಿರು, ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಎಂದು ಹೇಳಿದನು." - ಮತ್ತಾಯ. 9:2

 

ಒಂದು ಲಕ್ಷ ಯೌವನಸ್ಥರಿಗಿಂತ ಹೆಚ್ಚಾಗಿ ಭಾಗವಹಿಸುವ ನಮ್ಮ ಯೌವನಸ್ಥರ ಕೂಟಕ್ಕೆ, ಈರೋಡ್ ಜಿಲ್ಲೆಯ ಒಬ್ಬ ಸಹೋದರಿಯು ನಾನು ಸಹ ನನ್ನಿಂದ ಸಾಧ್ಯವಾದಷ್ಟು ದೇವರಿಗಾಗಿ ಮಾಡುತ್ತೇನೆ ಎಂದು ತನ್ನ ಹೃದಯದಲ್ಲಿ ನಿರ್ಧರಿಸಿ, ವ್ಯಾನ್ ಒಂದನ್ನು ತೆಗೆದುಕೊಂಡು ತನಗೆ ತಿಳಿದಿರುವ ಯೌವನಸ್ಥರನ್ನೆಲ್ಲಾ ಕರೆತಂದರು. ತನ್ನ ಸಮಯ, ದೈಹಿಕ ಶ್ರಮ ಮತ್ತು ಹಣವನ್ನು ಖರ್ಚು ಮಾಡಿದರು. ಎಂತಹ ಆಶ್ಚರ್ಯ! ದೇವರು ಇವರ ಕಾರ್ಯಗಳನ್ನು ನೋಡಿ 16 ವರ್ಷಗಳಿಂದ ಮಕ್ಕಳಿಲ್ಲದ ಈ ಸಹೋದರಿಗೆ ದೇವರು ಗರ್ಭಧರಿಸುವಂತೆ ಕೃಪೆ ತೋರಿದರು. ದೇವರಿಗೆ ಮಹಿಮೆಯುಂಟಾಗಲಿ.

 

ಹೌದು, ಬೈಬಲ್‌ನ ಮೂರು ಸುವಾರ್ತೆಗಳಲ್ಲಿ, ತನ್ನ ಹಾಸಿಗೆಯ ಮೇಲೆ ಮಲಗಿದ್ದ ಪಾರ್ಶ್ವವಾಯು ರೋಗಿಯೊಬ್ಬರು ಗುಣಮುಖರಾದ ಅದ್ಭುತವಿದೆ. ನಾಲ್ಕು ಜನರು ಆ ಪಾರ್ಶ್ವವಾಯು ರೋಗಿಯನ್ನು ಗುಣಪಡಿಸಲು ಒಮ್ಮನಿಸ್ಸಿನಿಂದ ಕೂಡಿದರು. ಅವರಿಗೆ ಆ ರೋಗಿಯ ಬಗ್ಗೆ ಕರುಣೆ ಮತ್ತು ಕಾಳಜಿ ಇತ್ತು. ಅವರು ತಮ್ಮ ಶ್ರಮದಿಂದ ಪ್ರಯಾಸಪಟ್ಟರು. ಜನಸಮೂಹವು ಆ ಮನೆಯ ಮುಂದೆ ನಿಂತಿದ್ದರೂ, ಸೋತು ಹೋಗದೆ ನಾಲ್ವರೂ ಬಹಳ ತಾಳ್ಮೆಯಿಂದ ಪ್ರಯತ್ನಿಸುತ್ತಲೇ ಇದ್ದರು. ಮನೆಯ ಮೇಲ್ಛಾವಣಿಯನ್ನು ತೆಗೆದು ಹೇಗಾದರೂ ಅವನನ್ನು ಯೇಸುವಿನ ಬಳಿಗೆ ಕರೆದುಕೊಂಡು ಹೋಗಬೇಕು ಎಂದು ಪ್ರಯತ್ನಿಸಿದರು. ಅದಕ್ಕಾಗಿ, ಮನೆಯ ಮಾಲೀಕರಿಗೆ ಮನೆಯ ಮೇಲ್ಛಾವಣಿಯನ್ನು ತೆಗೆಯಲು ಬೆಲೆಯನ್ನು ಪಾವತಿಸಲು ಮುಂದೆ ಬಂದಿರಬಹುದು. ಅವರು ಕಷ್ಟಪಟ್ಟು ಕೆಲಸ ಮಾಡಿ ಅವನನ್ನು ಯೇಸುವಿನ ಬಳಿಗೆ ಕರೆದೊಯ್ದು ಪಾರ್ಶ್ವವಾಯು ರೋಗಿಗೆ ಸ್ವಸ್ಥತೆಯನ್ನು ಕೊಡಿಸಿದರು. ಯೇಸು ಕ್ರಿಸ್ತನು ಸಹ ಆ ನಾಲ್ವರ ನಂಬಿಕೆಯನ್ನು ಹೊಗಳಿದರು. ಜನರು ಆಶ್ಚರ್ಯಚಕಿತರಾದರು ಮತ್ತು ದೇವರನ್ನು ಮಹಿಮೆಪಡಿಸಿದರು.

 

ಪ್ರಿಯರೇ, ಆ ಸಹೋದರಿ ಯಾರೋ ಯುವ ಶಿಬಿರವನ್ನು ನಡೆಸುತ್ತಿದ್ದಾರೆ ನಮಗೇನು ಎಂದು ಭಾವಿಸಿದ್ದರೆ, ಆಗಿ ಯೌವನಸ್ಥರು ಆಶೀರ್ವದಿಸಲ್ಪಡುತ್ತಿದ್ದರಾ? ಅವರ ಜೀವನದಲ್ಲೂ ಅದ್ಭುತ! ಬಹುಶಃ ನಿಮ್ಮ ಪ್ರಯಾಸವು ಮನುಷ್ಯರಿಗೆ ತಿಳಿಯದೇ ಇರಬಹುದು, ಇತರರು ಅದನ್ನು ಹೊಗಳದೆಯೂ ಇರಬಹುದು. ನಮ್ಮಿಂದ ಒಳ್ಳೆಯದನ್ನು ಪಡೆದವರೇ ನಮಗೆ ಹಾನಿ ಮಾಡಿರುವುದರಿಂದ ಬಹುಶಃ ಹೃದಯವೂ ದಣಿದಿರಬಹುದು. ಆದರೆ ದೇವರು ನಿಮ್ಮ ಪ್ರೀತಿಯ ಪ್ರಯಾಸವನ್ನು ಮರೆಯಲು ಅನ್ಯಾಯಸ್ಥನಲ್ಲ. ಅವರು ಖಂಡಿತವಾಗಿಯೂ ನಿಮ್ಮ ಹೃದಯದ ಆಲೋಚನೆಗಳನ್ನು ತಿಳಿದಿದ್ದಾರೆ. ಈ ಲೋಕದಲ್ಲೂ ಪರಲೋಕದಲ್ಲೂ ಆತನು ನಿಮಗೆ ಅದಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತಾರೆ. ಪೂರ್ಣ ಹೃದಯದಿಂದ ಕರ್ತನಿಗಾಗಿ ಪ್ರಯಾಸಪಡಿರಿ. ನಿಮ್ಮ ಸಮಯ, ಪ್ರತಿಭೆ ಮತ್ತು ಸಂಪತ್ತು ಕರ್ತನಿಗೆ ಉಪಯೋಗವಾಗಲಿ.

- Sis. G. ಎಸ್ತೇರ್ ಸೆಲ್ವಿ

 

ಪ್ರಾರ್ಥನಾ ಅಂಶ:

 7 ಸಾವಿರ ಮಿಷನರಿಗಳು ಮತ್ತು 1 ಲಕ್ಷ ಹಳ್ಳಿಗಳು ಎಂಬ ಗುರಿಯನ್ನು ತಲುಪಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş