Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.03.2026
Share:

By Village Missionary Movement

Wednesday, 11-Mar-2026

ಧೈನಂದಿನ ಧ್ಯಾನ(Kannada) – 11.03.2026

 

ಮೋಶೆಯ ಕೋಲು 

 

"ಯೆಹೋವನು ಅವನನ್ನು - ಅದೇನು ನಿನ್ನ ಕೈಯಲ್ಲಿರುವದು ಎಂದು ಕೇಳಿದನು. ಅವನು - ಇದು ಕೋಲು ಅಂದನು" - ವಿಮೋಚನ. 4:2

 

ದೇವರು ಇಸ್ರಾಯೇಲ್ ಜನರ ಕೂಗನ್ನು ಕೇಳಿ, ಮೇಸ್ತ್ರಿಗಳ ನಿಮಿತ್ತವಾಗಿ ಅವರು ಅನುಭವಿಸುತ್ತಿರುವ ಪಾಡುಗಳನ್ನು ಕಂಡು, ಅವರನ್ನು ಬಿಡಿಸಲು ದೇವರು ಮೋಶೆ ಎಂಬ ರಕ್ಷಕನನ್ನು ಆರಿಸಿಕೊಂಡರು. ಆಗ ಮೋಶೆಯು ಕರ್ತನ ಬಳಿ ನೀವೇ ನನ್ನನ್ನು ಕಳುಹಿಸಿದ್ದು ಎಂದು ಜನರು ಹೇಗೆ ನಂಬುತ್ತಾರೆ ಎಂದು ಕೇಳಿದನು. ಆಗ ಕರ್ತನು ಮೋಶೆಗೆ, ನಿನ್ನ ಕೈಯಲ್ಲಿರುವುದು ಏನು ಎಂದು ಕೇಳಿದರು. ಅದಕ್ಕೆ ಮೋಶೆ ಕೋಲು ಎಂದು ಹೇಳಿದನು. ಅದನ್ನು ನೆಲದ ಮೇಲೆ ಹಾಕು ಎಂದರು. ಅವನು ಅದನ್ನು ನೆಲದ ಮೇಲೆ ಎಸೆದಾಗ, ಅದು ಸರ್ಪವಾಯಿತು. ನಂತರ ಕರ್ತನು ಮೋಶೆಗೆ, ನಿನ್ನ ಕೈಯನ್ನು ಚಾಚಿ ಬಾಲವನ್ನು ಹಿಡಿದುಕೋ ಎಂದರು. ಅವನು ಅದನ್ನು ಹಿಡಿದುಕೊಂಡಾಗ, ಅದು ಅವನ ಕೈಯಲ್ಲಿ ಕೋಲಾಯಿತು. ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಆಗಿರುವ ಕರ್ತನು ನಿನಗೆ ಕಾಣಿಸಿಕೊಂಡಿದ್ದಾರೆ ಎಂಬುದರ ಸೂಚನೆ ಇದುವೇ, ಇದರಿಂದ ಅವರು ನಂಬುತ್ತಾರೆ ಎಂದರು. ಅವನ ಕೈಯಲ್ಲಿದ್ದ ಕೋಲಿನಿಂದ ಫರೋಹನ ಮುಂದೆಯೂ, ಐಗುಪ್ತ ಜನರ ಮುಂದೆಯೂ, ಇಸ್ರಾಯೇಲ್ ಜನರ ಮುಂದೆಯೂ ದೇವರು ಅನೇಕ ಅದ್ಭುತಗಳನ್ನು ಮಾಡಿದರು. ಹೌದು, ಮೋಶೆಯ ಕೈಯಲ್ಲಿದ್ದದ್ದನ್ನು ಬಳಸಿ ದೇವರು ಕ್ರಿಯೆ ಮಾಡಿದರು. 

 

ಅದೇ ರೀತಿ, ಯೌವನಸ್ಥನಾದ ದಾವೀದನು ಗೊಲ್ಯಾತನನ್ನು ಮುಖಾಮುಖಿಯಾಗಿ ಎದುರಿಸಿದಾಗ, ಅವನ ಕೈಯಲ್ಲಿ ಕತ್ತಿ ಇರಲಿಲ್ಲ ಎಂದು ಬೈಬಲ್ ಹೇಳುತ್ತಿದೆ. ಆದರೆ ದಾವೀದನ ಕೈಯಲ್ಲಿ ತನ್ನದೇ ಆದ ಕವಣೆ ಮತ್ತು ಕಲ್ಲು ಇತ್ತು. ದೇವರು ಅದರ ಮೂಲಕ ದೊಡ್ಡ ಗೊಲ್ಯಾತನನ್ನು ಬೀಳಿಸಿದರು ನೋಡಿ! ನಮ್ಮ ಕೈಯಲ್ಲಿರುವುದನ್ನು ದೇವರಿಗೆ ನಮ್ಮ ಪಾಲಾಗಿ ನೀಡಿದರೆ ಸಾಕು. ಇಲ್ಲದಿರುವ ಅಥವಾ ನಾವು ಸ್ವೀಕರಿಸದಿರುವ ಯಾವುದೋ ಒಂದು ವಿಷಯದ ಬಗ್ಗೆಯೋ ನೆನೆಸುತ್ತಾ ಇದು ನನಗಿಲ್ಲವೇ ಎಂದು ಚಿಂತಿಸುತ್ತಾ, ಅದು ಇದ್ದಿದ್ದರೆ ನಾನು ದೇವರಿಗಾಗಿ ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿತ್ತು ಎಂದು ಸೋತುಹೋಗಬೇಕಾದ ಅವಶ್ಯಕತೆ ಇಲ್ಲ. ಮೋಶೆಯ ಕೈಯಲ್ಲಿರುವ ಕೋಲಿನಂತೆ, ದಾವೀದನ ಕೈಯಲ್ಲಿರುವ ಕವಣೆಯಂತೆ, ಕರ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಏನೋ ಒಂದನ್ನು ನೀಡಿ, ತನ್ನ ನಾಮದ ಮಹಿಮೆಗಾಗಿ ಬಳಸಬೇಕೆಂದು ಬಯಸುತ್ತಿದ್ದಾರೆ. ನನ್ನ ಬಳಿ ಏನೂ ಇಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಪ್ರತಿಭೆ ಇಲ್ಲದವರು ಯಾರೂ ಇಲ್ಲ.

 

ಆದ್ದರಿಂದ, ದೇವರ ರಾಜ್ಯವನ್ನು ನಿರ್ಮಿಸಲು ಸಾಧ್ಯವಾಗುವಂತೆ, ನಮ್ಮ ಕೈಯಲ್ಲಿರುವುದನ್ನು ಬಳಸಿ ನಾವು ದೇವರಿಗೆ ಪಾಲು ನೀಡಿ ದೇವರ ರಾಜ್ಯವು ಕಟ್ಟಲ್ಪಡುವಂತೆ, ಲೋಕವನ್ನು ಸುವಾರ್ತಾ ಕೇಂದ್ರವಾಗಿಸಲು ಸಾಧ್ಯವಾದಷ್ಟು ಮಾಡೋಣ. ದೇವರು ಮಹಿಮೆ ಹೊಂದುತ್ತಾರೆ.

- Mrs.ಶೀಲಾ ಜಾನ್

 

ಪ್ರಾರ್ಥನಾ ಅಂಶ:

ಒಡಿಶಾದಲ್ಲಿ ಮಿಷನ್ ಆಕ್ಷನ್ ಸೆಂಟರ್‌ಗಾಗಿ ಸ್ಥಳ ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin