Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.03.2026
Share:

By Village Missionary Movement

Monday, 09-Mar-2026

ಧೈನಂದಿನ ಧ್ಯಾನ(Kannada) – 09.03.2026

 

ಒಬ್ಬ ಯುವಕನ ಪಾಲು

 

"...ಆತನ ಚಿತ್ತದಂತೆ ನಡೆದರೆ ಅವನ ಪ್ರಾರ್ಥನೆಯನ್ನು ಆತನು ಕೇಳುತ್ತಾನೆಂದು ನಾವು ಬಲ್ಲೆವು" - ಯೋಹಾನ 9:31

 

ಹೊವಾರ್ಡ್ ಕೆಲ್ಲಿ ಚಿಕ್ಕವರಿದ್ದಾಗ, ತನ್ನ ಶಿಕ್ಷಣಕ್ಕಾಗಿ ಹಣ ಪಾವತಿಸಲು ಮನೆ-ಮನೆಗೆ ವಸ್ತುಗಳನ್ನು ಮಾರಾಟ ಮಾಡುವ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಒಂದು ದಿನ, ಅವರು ತುಂಬಾ ದಣಿದು ಒಂದು ಮನೆಯ ಬಾಗಿಲು ತಟ್ಟಿ ನೀರು ಕೇಳಿದರು. ಆ ಮನೆಯಲ್ಲಿದ್ದ ಮಹಿಳೆ ಅವರಿಗೆ ನೀರಿನ ಬದಲು ಒಂದು ದೊಡ್ಡ ಲೋಟ ಹಾಲು ಕೊಟ್ಟರು. ಅದನ್ನು ಸ್ವೀಕರಿಸಿದ ನಂತರ, ಹೊವಾರ್ಡ್, ನಿಮ್ಮ ದಯೆಯ ಕಾರ್ಯಕ್ಕಾಗಿ ನಾನು ನಿಮಗೆ ಋಣಿಯಾಗಿದ್ದೇನೆ ಎಂದು ಹೇಳಿದರು. ಹಲವು ವರ್ಷಗಳ ನಂತರವೂ, ಹೊವಾರ್ಡ್ ಆ ಘಟನೆಯನ್ನು ನೆನಪಿಸಿಕೊಂಡರು. ಬಹಳ ಕಠಿಣ ಪರಿಶ್ರಮದಿಂದ ಡಾಕ್ಟರ್ ಗೆ ಓದಿ ಮುಗಿಸಿ ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಒಬ್ಬ ಮಹಿಳೆ ತೀವ್ರ ಅಸ್ವಸ್ಥಳಾಗಿದ್ದಾಳೆ ಮತ್ತು ವೈದ್ಯಕೀಯ ವೆಚ್ಚ ಅಧಿಕವಾಗುತ್ತಿರುವುದರಿಂದ ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾಳೆ ಎಂಬುದು ಅವರಿಗೆ ಗೊತ್ತಾಯಿತು. ಅವರು ತಕ್ಷಣ ಆ ಮಹಿಳೆಯನ್ನು ನೋಡಲು ಹೋದರು. ಅವರು ಆ ಮಹಿಳೆಯನ್ನು ನೋಡಿದ ಕೂಡಲೇ, ನೀರಿನ ಬದಲು ಹಾಲು ಕೊಟ್ಟವರು ಇವರೇ ಎಂದು ಅವರು ಅರಿತುಕೊಂಡು ಅವರ ವೈದ್ಯಕೀಯ ವೆಚ್ಚವನ್ನು ಭರಿಸಲು ಮುಂದಾದರು. ಚಿಕಿತ್ಸೆಯ ನಂತರ ತನಗೆ ಹಣ ನೀಡಿದ ವ್ಯಕ್ತಿಯನ್ನು ನೋಡಲು ಮಹಿಳೆ ಬಯಸಿದ್ದಳು. ಆಗ ಡಾ. ಹೊವಾರ್ಡ್ ಕೆಲ್ಲಿ ಮುಗುಳ್ನಗುತ್ತಾ, ಒಂದು ಲೋಟ ಹಾಲಿಗೆ ಕೃತಜ್ಞತೆಯ ಋಣ ಎಂದು ಹೇಳಿದರು. ಲೌಕಿಕ ಜನರು ಕೃತಜ್ಞತೆಯ ಋಣವನ್ನು ಅರ್ಪಿಸುವ ಮೂಲಕ ಪ್ರತಿಕ್ರಿಯಿಸುತ್ತಾರೆ. ಕರ್ತನ ಮಕ್ಕಳಾಗಿ, ಯೇಸು ಕ್ರಿಸ್ತನು ನಮಗೆ ದಯಪಾಲಿಸಿರುವ ಅಸಂಖ್ಯಾತ ಆಶೀರ್ವಾದಗಳನ್ನು ನಾವು ಮರುಪಾವತಿಸಲು ಸಾಧ್ಯವೇ ಇಲ್ಲ. ಆದರೆ ನಾವು ನಮ್ಮ ಪಾಲನ್ನು ಸಲ್ಲಿಸಲು ಜವಾಬ್ದಾರಿಯುಳ್ಳವರಾಗಿದ್ದೇವೆ.

 

ಯೋಹಾನ 9 ನೇ ಅಧ್ಯಾಯದಲ್ಲಿ, ಯೇಸು ಕ್ರಿಸ್ತನು ಹುಟ್ಟಿನಿಂದಲೇ ಕುರುಡನಾಗಿದ್ದ ಯುವಕನ ಕಣ್ಣುಗಳನ್ನು ತೆರೆಯುವ ಮೂಲಕ ಒಂದು ಅದ್ಭುತವನ್ನು ಮಾಡಿದರು. ಕುರುಡನಾಗಿದ್ದ ಮತ್ತು ದೃಷ್ಟಿಯನ್ನು ಮರಳಿ ಪಡೆದ ಮನುಷ್ಯನು ಯೇಸುವಿನ ಬಗ್ಗೆ ಸಾಕ್ಷಿ ಹೇಳಲು ಮತ್ತು ಯೇಸುವಿಗಾಗಿ ಪಾಡುಪಡಲು ಸಾಕಷ್ಟು ಧೈರ್ಯಶಾಲಿಯಾಗಿದ್ದನು. ನಿನ್ನ ಕಣ್ಣುಗಳು ಹೇಗೆ ತೆರೆಯಲ್ಪಟ್ಟಿತು ಎಂದು ಕೇಳಿದವರ ಬಳಿ, ಯೇಸು ಎಂಬ ಮನುಷ್ಯನು ಕೆಸರನ್ನು ಮಾಡಿ ನನ್ನ ಕಣ್ಣುಗಳ ಮೇಲೆ ಹಚ್ಚಿ, ನೀನು ಹೋಗಿ ಸಿಲೋಮ್ ಕೊಳದಲ್ಲಿ ತೊಳೆದುಕೋ ಎಂದು ಹೇಳಿದರು. ಹಾಗೆಯೇ ನಾನು ಹೋಗಿ ತೊಳೆದುಕೊಂಡೆ, ನನಗೆ ದೃಷ್ಟಿ ಬಂತು ಎಂದನು. ಆದರೆ ದೃಷ್ಟಿ ಹೊಂದಿದವನ ಹೆತ್ತವರು, ಅವನ ಕಣ್ಣುಗಳನ್ನು ಯಾರು ತೆರೆದರು ಎಂದು ನಮಗೆ ಗೊತ್ತಿಲ್ಲ ಎಂದು ಹೇಳಿದರು. ಯೆಹೂದ್ಯರ ಭಯದಿಂದ ಅವರು ಇದನ್ನು ಹೇಳಿದರೆಂದು ಬರೆಯಲ್ಪಟ್ಟಿದೆ. ದೃಷ್ಟಿ ಹೊಂದಿದವನು ಧೈರ್ಯವಾಗಿ, ಅವರು ನನ್ನ ಕಣ್ಣುಗಳನ್ನು ತೆರೆದದ್ದು ಮತ್ತು ಅವರು ಎಲ್ಲಿಂದ ಬಂದವರೆಂದು ನಿಮಗೆ ತಿಳಿಯದೇ ಇರುವುದು ಆಶ್ಚರ್ಯವಾದ ಸಂಗತಿ ಎಂದನು. ಅವನು ಯೇಸುವಿನ ಬಗ್ಗೆ ಸಾಕ್ಷಿ ಹೇಳಿದ್ದರಿಂದ ಅವನನ್ನು ಹೊರಗೆ ಹಾಕಲಾಯಿತು ಎಂದು ನಾವು ನೋಡುತ್ತೇವೆ. ಯೇಸು ಅವನ ಪಾಲನ್ನು ನೋಡಿ, ಅವನ ಬಳಿಗೆ ಬಂದು, ಅವನೊಂದಿಗೆ ಮಾತನಾಡಿ ತನ್ನನ್ನು ತಾನು ಬಹಿರಂಗಪಡಿಸಿಕೊಂಡರು. ದೃಷ್ಟಿ ಹೊಂದಿದ ಮನುಷ್ಯನು ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು, ಅವರಲ್ಲಿ ನಂಬಿಕೆ ಇಟ್ಟು ಅವರನ್ನು ಆರಾಧಿಸಿದನು. ನಾವು ನಮ್ಮ ಪಾಲನ್ನು ಯಾವ ರೀತಿ ಕರ್ತನಿಗೆ ಸಲ್ಲಿಸುತ್ತಿದ್ದೇವೆ ಎಂಬುದನ್ನು ಅವರು ಗಮನಿಸುತ್ತಾರೆ ಎಂಬುದನ್ನು ಈ ಸತ್ಯವೇದ ಭಾಗದಲ್ಲಿರುವ ಸಂಭವ ನಮಗೆ ಸ್ಪಷ್ಟವಾಗಿ ವಿವರಿಸುತ್ತಿದೆ. ನಾವು ಎಷ್ಟು ದೊಡ್ಡ ಪಾಲನ್ನು ಸಲ್ಲಿಸುತ್ತೇವೋ ಅದಕ್ಕೆ ತಕ್ಕ ಪ್ರತಿಫಲವನ್ನು ಭೂಲೋಕದಲ್ಲೂ ಪರಲೋಕದಲ್ಲೂ ನಿಶ್ಚಯವಾಗಿ ಪಡೆದುಕೊಳ್ಳುತ್ತೇವೆ.

- Rev. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯಗಳಲ್ಲಿನ ನಮ್ಮ ಸೇವಕರ ಸುರಕ್ಷತೆ ಮತ್ತು ಸೌಖ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin