Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.03.2026
Share:

By Village Missionary Movement

Saturday, 07-Mar-2026

ಧೈನಂದಿನ ಧ್ಯಾನ(Kannada) – 07.03.2026

 

ಆಸ್ತಿಗಳ ಮೂಲಕ ಪಾಲು

 

"...ಬೇರೆ ಅನೇಕರು ತಮ್ಮ ಸೊತ್ತಿನಿಂದ ಆತನನ್ನು ಉಪಚರಿಸಿದವರು ಆತನೊಂದಿಗೆ ಇದ್ದರು" - ಲೂಕ 8:3

 

C. T. ಸ್ಟಡ್ ಇಂಗ್ಲೆಂಡ್‌ನಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ಅವರು ತುಂಬಾ ಪ್ರತಿಭಾನ್ವಿತರಾಗಿದ್ದರು. 18 ನೇ ವಯಸ್ಸಿನಲ್ಲಿ, ಅವರು ಕರ್ತನಾದ ಯೇಸು ಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದರು. 1860 ರ ದಶಕದಲ್ಲಿ ಅವರ ತಂದೆಯ ಆಸ್ತಿ ಎರಡೂವರೆ ಕೋಟಿಯಾಗಿತ್ತು. ಅವರ ಆಸ್ತಿಗಳನ್ನು ತಮ್ಮ ಮಕ್ಕಳಿಗೆ ಹಂಚಿದಾಗ, ಇವರಿಗೂ ದೊಡ್ಡ ಮೊತ್ತವು ಬಂತು. ಆದರೆ ಅವರು ಮಿಷನರಿಯಾಗಿ ಹೋಗಲು ನಿರ್ಧರಿಸಿದ ನಂತರ ಏನು ಮಾಡಿದರು ಗೊತ್ತಾ? ತಮ್ಮ ಆಸ್ತಿಗಳನ್ನು ಸೇವಕರಾದ ಡಿ.ಎಲ್. ಮೂಡಿ ಮತ್ತು ಜಾರ್ಜ್ ಮುಲ್ಲರ್, ವಿಲಿಯಂ ಬೂತ್‌ರಂತಹವರಿಗೆ ಹಂಚಿದರು. ಅವರು ತನಗಾಗಿ ಒಂದು ಸಣ್ಣ ಮೊತ್ತವನ್ನು ಮಾತ್ರ ಇಟ್ಟುಕೊಂಡರು. ಅವರ ಪತ್ನಿ ಪ್ರಿಸ್ಕಿಲ್ಲಾ ಆ ಸ್ವಲ್ಪ ಮೊತ್ತದಲ್ಲೂ ಮಿಷನರಿಗಳಿಗೆ ಕೊಡುವಂತೆ ಒತ್ತಾಯಿಸಿದರು. ಆದ್ದರಿಂದ ಅವರು ಬಹಳ ಕಡಿಮೆ ಹಣವನ್ನು ಇಟ್ಟುಕೊಂಡು ಉಳಿದೆಲ್ಲವನ್ನೂ ಸೇವೆಗಳಿಗೆ ನೀಡಿದರು.

 

ಅವರು ಚೀನಾಕ್ಕೆ ಹೋಗಿ 10 ವರ್ಷಗಳ ಕಾಲ ದೇವರ ಸೇವೆ ಮಾಡಿದರು. ಅವರು ಉತ್ತಮ ಕ್ರಿಕೆಟಿಗರಾಗಿದ್ದರೂ, ಅದನ್ನು ತ್ಯಜಿಸಿ ಯೇಸುವಿಗಾಗಿ ಮತ್ತು ಅವರ ಪರಲೋಕ ರಾಜ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡರು. ಈ ದೇವರ ಮನುಷ್ಯನು ಆಗಾಗ್ಗೆ ಹೇಳುತ್ತಿದ್ದ ಮಾತು, "ಒಂದೇ ಒಂದು ಜೀವನ, ಅದು ಕೂಡ ಬೇಗನೆ ಗತಿಸಿ ಹೋಗುತ್ತದೆ; ನೀವು ಕರ್ತನಿಗಾಗಿ ಮಾಡುವ ಕೆಲಸಗಳು ಮಾತ್ರ ಉಳಿಯುತ್ತವೆ" ಎಂದು! 

 

ಯೇಸುಕ್ರಿಸ್ತನು ಭೂಮಿಯ ಮೇಲೆ ವಾಸಿಸುತ್ತಿದ್ದ ದಿನಗಳಲ್ಲಿ, ಅನೇಕ ಮಹಿಳೆಯರು ಆತನೊಂದಿಗೆ ಸೇರಿ ದೇವರ ಸೇವೆ ಮಾಡುತ್ತಿದ್ದರು. ಅದರಲ್ಲೂ ಮರಿಯಳು, ಯೋಹಾನಳೂ ಸುಸನ್ನಳೂ ಮತ್ತು ಬೇರೆ ಅನೇಕರು ತಮ್ಮ ಸೊತ್ತಿನಿಂದ ಆತನನ್ನು ಉಪಚರಿಸಿದರು ಎಂದು ನೋಡುತ್ತೇವೆ. 

 

ಇದನ್ನು ಓದುತ್ತಿರುವ ಪ್ರಿಯರೇ! ಈ ಲೋಕದಲ್ಲಿ ನಮಗೆ ಎಷ್ಟೇ ದೊಡ್ಡ ಸ್ಥಾನವಿದ್ದರೂ ಅಥವಾ ನಮಗೆ ಎಷ್ಟೇ ಆಸ್ತಿ ಇದ್ದರೂ, ನಾವು ದೇವರಿಂದ ಇದನ್ನೆಲ್ಲಾ ಪಡೆದಿದ್ದೇವೆ. ಕರ್ತನು ದಯೆಯಿಂದ ನಮಗೆ ನೀಡಿದ ಸಂಪತ್ತನ್ನು ಆತನ ಸೇವೆಗಾಗಿ ಖರ್ಚು ಮಾಡೋಣ. ಯೇಸುವಿಗೆ ತಮ್ಮ ಆಸ್ತಿಯನ್ನು ಕೊಟ್ಟ ಯಾರನ್ನೂ ಆತನು ಬಡವರಾಗಿ ಬಿಡುವುದಿಲ್ಲ. ಆದ್ದರಿಂದ, ನಮ್ಮ ಆಸ್ತಿಯಿಂದ ಯೇಸುವಿನ ಸೇವೆ ಮಾಡಲು ಮುಂದೆ ಬರೋಣ. ಸಮರ್ಪಿಸಿ ಸಂತೋಷಪಡೋಣ. 

- Mrs. ವನಜ ಪಾಲ್ ರಾಜ್ 

 

ಪ್ರಾರ್ಥನಾ ಅಂಶ:

ಸಹ ಸೇವಕರು ಭೇಟಿಯಾಗುವ ಆಲಯಗಳಿಲ್ಲದ ಹಳ್ಳಿಗಳಲ್ಲಿ ಆಲಯವು ಕಟ್ಟಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş