Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.03.2026
Share:

By Village Missionary Movement

Tuesday, 03-Mar-2026

ಧೈನಂದಿನ ಧ್ಯಾನ(Kannada) – 03.03.2026

 

ಶೂನ್ಯವನ್ನು ತುಂಬುವ ಕೊಡುಗೆ

 

"...ಚೀಟು ಮತ್ತೀಯನಿಗೆ ಬಂದದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರ ಸಂಗಡ ಸೇರಿ ಎಣಿಸಲ್ಪಟ್ಟನು." - ಅಪೊಸ್ತಲ. 1:26

 

ಆಸ್ಟ್ರೇಲಿಯನ್ ಕ್ರಿಕೆಟ್ ತಂಡದಲ್ಲಿ ಅತ್ಯುತ್ತಮ ಬೌಲರ್‌ಗಳು ಶೂನ್ಯವನ್ನು ಕಂಡ ಸಮಯವದು. ಎದುರಾಳಿ ತಂಡವನ್ನು ನಿಭಾಯಿಸಲು ತಂಡವು ಹೆಣಗಾಡುತ್ತಿತ್ತು. ಆಗಲೇ ಗ್ಲೆನ್ ಮೆಕ್‌ಗ್ರಾತ್ ಎಂಬವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಒಂದು ಬೌಲರ್ ಆಗಿ ಸೇರಿಕೊಂಡರು. ಅವರ ಬೌಲಿಂಗ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಬಹಳ ಮಹತ್ವದ್ದಾಗಿದೆ. ಅವರು ತಂಡದ ಯಶಸ್ಸಿಗೆ ಶ್ರಮಿಸಿದರು. ಅವರು ಸತತ ಮೂರು ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಅವರು ಇದ್ದ ತಂಡವು ಆ ದಿನಗಳಲ್ಲಿ ಅಚಲ ಕ್ರಿಕೆಟ್ ತಂಡವಾಯಿತು ಮತ್ತು ಇಡೀ ಜಗತ್ತಿಗೆ ಸವಾಲು ಹಾಕಿತು ಎಂಬುದು ಗಮನಾರ್ಹ.

 

ಸತ್ಯವೇದದಲ್ಲಿ ಅಪೊಸ್ತಲ ಮೊದಲನೇ ಅಧ್ಯಾಯದಲ್ಲಿ, ಒಂದು ಘಟನೆಯನ್ನು ನೋಡುತ್ತೇವೆ. 12 ಶಿಷ್ಯರಲ್ಲಿ, ಕೇವಲ 11 ಮಂದಿ ಮಾತ್ರವೇ ಇದ್ದರು. ಒಬ್ಬರು ಇಲ್ಲ. ನಾವು 11 ಜನ ಮಾತ್ರವೇ ಇರೋಣ ಅಂದುಕೊಳ್ಳದೇ ಇನ್ನೊಬ್ಬರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದರು. ಆಗಲೇ ಮತ್ತೀಯನ ಹೆಸರಿನಲ್ಲಿ ಚೀಟು ಬಿದ್ದಿರುವುದನ್ನು ನೋಡುತ್ತೇವೆ. ಆ ಮತ್ತೀಯ 11 ಶಿಷ್ಯರೊಂದಿಗೆ ತಾನು ಸೇರಿಕೊಂಡು ಸುವಾರ್ತೆಯ ಹರಡುವಿಕೆಗೆ ತನ್ನ ಅತ್ಯುತ್ತಮ ಕೊಡುಗೆ ನೀಡಿದರು.

 

ಪ್ರಿಯರೇ, ಇಂದು ದೇವರ ರಾಜ್ಯವನ್ನು ಕಟ್ಟಲು ಕೊಡುಗೆ ನೀಡುವವರ ಶ್ರೇಣಿಯಲ್ಲಿ ಬಹಳಷ್ಟು ಶೂನ್ಯತೆಯಿದೆ. ಬೆಳಿಗ್ಗೆ ಬೇಗನೆ ಎದ್ದು ಪ್ರಾರ್ಥಿಸಲು, ಮಧ್ಯಸ್ಥಿಕೆ ವಹಿಸಿ ಪ್ರಾರ್ಥಿಸಲು, ಪ್ರತಿದಿನ ಹಳ್ಳಿಗಳಿಗೆ ಹೋಗಿ ಸೇವೆ ಮಾಡಲು, ಮನೆ ಪ್ರಾರ್ಥನಾ ಗುಂಪನ್ನು ನಡೆಸಲು ಒಂದು ಶೂನ್ಯತೆ ಇದೆ. ಚರ್ಚುಗಳು ಮತ್ತು ಸೇವಾ ಸಂಸ್ಥೆಗಳು ಸಂಖ್ಯೆಯಲ್ಲಿ ಹೆಚ್ಚುತ್ತಿದ್ದರೂ, ಜನರನ್ನು ಇನ್ನೂ ಭೇಟಿಯಾಗಿಲ್ಲ. ಸುವಾರ್ತೆಯನ್ನು ಇನ್ನೂ ಎಲ್ಲಾ ಸ್ಥಳಗಳಿಗೆ ಘೋಷಿಸಲಾಗಿಲ್ಲ. ಇದನ್ನು ಓದುವ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಈ ಶೂನ್ಯವನ್ನು ತುಂಬಲು ಮತ್ತೊಂದು ಅವಕಾಶವನ್ನು ನೀಡಲಾಗುತ್ತಿದೆ ಎಂದು ಅರಿತುಕೊಳ್ಳಿ. ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ಗ್ರಾಮ ಮಿಷನರಿ ಚಳುವಳಿಯಲ್ಲಿ ಒಬ್ಬ ಸೇವಕ ಮತ್ತು ಕ್ರೈಸ್ತರು ಏನೆಲ್ಲಾ ಕೊಡುಗೆ ನೀಡಬಹುದು ಎಂದು ಹೇಳಲು ನಾವು ಅನೇಕ ಯೋಜನೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ನೀವು ಸಹ ಒಟ್ಟಾಗಿ ಸೇರಿ ಕೆಲಸ ಮಾಡಲು ಸಿದ್ಧರಿದ್ದೀರಾ? ಈ ದೇಶದಲ್ಲಿ ಸೇವೆಯಲ್ಲಿನ ಶೂನ್ಯವನ್ನು ತುಂಬಲು ನಿಮ್ಮ ಪಾತ್ರವನ್ನು ಕೊಡುಗೆ ನೀಡಲು ನೀವು ಮುಂದೆ ಬರುತ್ತೀರಾ? ಈ ವರ್ಷವನ್ನು "ನನ್ನ ಕೊಡುಗೆಯ ವರ್ಷ" ಎಂದು ಈ ವರ್ಷದಲ್ಲಿ ಕೆಲಸ ಮಾಡಲು ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತೇವೆ. ಆಮೆನ್.

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ನಮ್ಮೊಂದಿಗೆ ಸೇರಿಕೊಂಡಿರುವ ದೆಬೋರಾಳ್ ಗಳನ್ನು ಕರ್ತನು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş