Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.03.2026 (Kids Special)
Share:

By Village Missionary Movement

Sunday, 01-Mar-2026

ಧೈನಂದಿನ ಧ್ಯಾನ(Kannada) – 01.03.2026 (Kids Special)

 

ಅತ್ಯುತ್ತಮ ಪಾಲು

 

"ಕೊಡಿರಿ, ಆಗ ನಿಮಗೂ ಕೊಡುವರು;..." - ಲೂಕ 6:38

 

ಹಲೋ ಪುಟಾಣಿಗಳೇ! ಇಂದು ನಿಜವಾಗಿ ನಡೆದಂತಹ ಒಂದು ಸಂಭವವನ್ನು ಕೇಳಲಿದ್ದೇವೆ. ಗಮನವಿಟ್ಟು ಆಲಿಸಿ. O.K ನಾ. ಎಲ್ಲೆಡೆ ನೀರಿರಲಿಲ್ಲ, ಹಳ್ಳಿಗಳಲ್ಲಿನ ಹೊಲ ಗದ್ದೆಗಳು ಒಣಗಿದ್ದವು. ಕೆಲಸವಿರಲಿಲ್ಲ, ಮತ್ತು ಮಳೆಯೂ ಇರಲಿಲ್ಲ. ಕ್ಷಾಮ ತೀವ್ರವಾಗಿತ್ತು. ಜನರು ತಿನ್ನಲು ದಾರಿಯಿಲ್ಲದೆ ತುಂಬಾ ಬಳಲುತ್ತಿದ್ದರು. ಈ ಪರಿಸ್ಥಿತಿಯಲ್ಲಿ, ಪ್ರವಾದಿಯಾದ ಎಲೀಯನು ಕರ್ತನ ಆಜ್ಞೆಯಂತೆ, ಚಾರೆಪ್ತಾ ಎಂಬ ಊರಿಗೆ ಹೋದರು. ಆ ಊರುಬಾಗಲಿನ ಸಮೀಪದಲ್ಲಿ ಒಬ್ಬ ವಿಧವೆ ಸೌದೆಯನ್ನು ಆಯ್ದುಕೊಳ್ಳುತ್ತಿದ್ದರು. ನನಗೆ ಸ್ವಲ್ಪ ಕುಡಿಯುವದಕ್ಕೆ ನೀರು ತೆಗೆದುಕೊಂಡು ಬಾ ಎಂದು ಎಲೀಯ ತಾತ ಕೇಳಿದರು. ಆ ಅಮ್ಮ ಸರಿ ಎಂದು ಹೋಗುವಾಗ, ನನಗೆ ಹೊಟ್ಟೆ ಹಸಿವಾಗುತ್ತಿದೆ ಸ್ವಲ್ಪ ರೊಟ್ಟಿ ಕೊಡು ಎಂದರು. ತಕ್ಷಣ ಆ ವಿಧವೆ ತಾಯಿ ನನ್ನ ಮನೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವದಿಲ್ಲ ಎಂದಳು. ನಾನು ನನ್ನ ಮಗ ಅದನ್ನು ತಿಂದ ಮೇಲೆ ಸಾಯಬೇಕೇ ಹೊರತು ಬೇರೆ ಗತಿಯಿಲ್ಲ ಎಂದು ಉತ್ತರಕೊಟ್ಟಳು. ಅದಕ್ಕೆ ಎಲೀಯ ತಾತ ಮೊದಲು ನನಗೆ ಒಂದು ರೊಟ್ಟಿಯನ್ನು ಮಾಡಿಕೊಂಡು ಬಾ. ದೇಶದಲ್ಲಿ ಮಳೆ ಬರುವವರೆಗೂ ನಿನ್ನ ಮನೆಯಲ್ಲಿ ಹಿಟ್ಟು ಮತ್ತು ಎಣ್ಣೆ ತೀರುವುದಿಲ್ಲ ಎಂದು ಹೇಳಿದರು.

 

ಏನು ಪುಟಾಣಿಗಳೇ! ಆ ತಾಯಿ ಎಷ್ಟು ನೋವನ್ನು ಅನುಭವಿಸಿರಬೇಕು. ಮುಂದಿನ ಹೊತ್ತಿಗೆ ಊಟಕ್ಕೇ ದಾರಿಯಿಲ್ಲ. ಆದರೆ ಆ ಎಲೀಯ ಪ್ರವಾದಿ ಕೇಳಿದಂತೆ, ಮೊದಲ ರೊಟ್ಟಿಯನ್ನು ಮಾಡಿಕೊಂಡು ಬಂದು ಕೊಟ್ಟರು. ಎಂಥಾ ಒಂದು ಅದ್ಭುತ ನಡೆಯಿತು ಗೊತ್ತಾ? ಅವರು ಮನೆಗೆ ಹಿಂತಿರುಗಿ ಮತ್ತೆ ರೊಟ್ಟಿ ಮಾಡಲು ಹಿಟ್ಟು ತೆಗೆದುಕೊಂಡರೆ ಕಡಿಮೆಯಾಗಲೇ ಇಲ್ಲ, ಇನ್ನೂ ಸ್ವಲ್ಪ ಹಿಟ್ಟು ತೆಗೆದುಕೊಂಡರೂ ಹಾಗೆಯೇ ಇತ್ತು. ಎಣ್ಣೆಯು ಸಹ ಹಾಗೆಯೇ ಕಡಿಮೆಯಾಗದೇ ಇತ್ತು. ಆ ದೇಶದಲ್ಲಿ ಮಳೆ ಬರುವವರೆಗೆ, ಅಂದರೆ, ಕ್ಷಾಮ ಮುಗಿಯುವವರೆಗೆ, ಚಾರೆಪ್ತದ ವಿಧವೆಯ ಮನೆಯಲ್ಲಿ ಹಿಟ್ಟು ಮತ್ತು ಎಣ್ಣೆ ಖಾಲಿಯಾಗಲೇ ಇಲ್ಲ ಪುಟಾಣಿಗಳೇ. ಎಲೀಯ ಪ್ರವಾದಿ ಹೇಳಿದಂತೆಯೇ ನಡೆಯಿತು. ಪುಟಾಣಿಗಳೇ, ಕೇಳೋದಕ್ಕೆ ಆಶ್ಚರ್ಯವಾಗಿದೆಯಲ್ಲಾ. ಈ ಅದ್ಭುತವನ್ನು ನೇರವಾಗಿ ನೋಡಿದವರು ಎಷ್ಟು ಸಂತೋಷಪಟ್ಟಿರಬೇಕು. ಅಷ್ಟೇನಾ? ಆ ಅದ್ಭುತವನ್ನು ನೋಡಲು ಅನೇಕ ಜನರು ಬಂದು ಕರ್ತನ ನಾಮವನ್ನು ಮಹಿಮೆಪಡಿಸಿರುತ್ತಾರೆ ಹೌದಲ್ವಾ.

 

ಪ್ರೀತಿಯ ತಮ್ಮ ತಂಗಿ, ಮುಂದಿನ ಹೊತ್ತಿನ ಊಟಕ್ಕೂ ದಾರಿ ಇಲ್ಲದೇ ಇರುವ ಪರಿಸ್ಥಿತಿಯಲ್ಲಿದ್ದರೂ, ತನ್ನ ಹಸಿವನ್ನು ನೀಗಿಸಿಕೊಳ್ಳಲು ಇದ್ದ ಆಹಾರವನ್ನು ಕೊಟ್ಟರು. ಎಂತಹ ದೊಡ್ಡ ಹೃದಯ. ಆ ಹಂಚಿಕೊಳ್ಳುವಿಕೆಯನ್ನು ಮರೆಯದ ದೇವರು ಚಾರೆಪ್ತಾ ವಿಧವೆಗೆ ಮರೆಯಲಾಗದ ಅದ್ಭುತವನ್ನು ಮಾಡಿದರು. ಪ್ರಿಯರೇ, ನೀವು ಯೇಸುವಿಗೆ ಏನು ಕೊಡಲಿದ್ದೀರಿ? ಯೋಚಿಸಿ ಮತ್ತು ಕಾರ್ಯನಿರ್ವಹಿಸಿ. ಕರ್ತನ ಕೃಪೆ ನಿಮ್ಮೊಂದಿಗಿರಲಿ. ಆಮೆನ್.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş