Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.02.2026
Share:

By Village Missionary Movement

Saturday, 28-Feb-2026

ಧೈನಂದಿನ ಧ್ಯಾನ(Kannada) – 28.02.2026

 

ಸೋತುಹೋಗಬೇಡ! 

 

"ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ..." - ಲೂಕ 18:1

 

ನಮ್ಮಲ್ಲಿ ಅನೇಕರಿಗೆ ಪ್ರಾರ್ಥನಾ ಯೋಧ ಜಾರ್ಜ್ ಮುಲ್ಲರ್ ಬಗ್ಗೆ ತಿಳಿದಿರಬಹುದು. ಅವರ ಮರಣಶಯ್ಯೆಯಲ್ಲಿಯೂ ಅವರು ಪ್ರಾರ್ಥಿಸುತ್ತಿದ್ದರು. ನಿರ್ದಿಷ್ಟವಾಗಿ ಹೇಳುವುದಾದರೆ, ಅವರ ಇಬ್ಬರು ಸ್ನೇಹಿತರು ಮನಸಾಂತರ ಹೊಂದಿ ಯೇಸು ಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಬೇಕೆಂದು ಹಲವು ವರ್ಷಗಳಿಂದ ಪ್ರಾರ್ಥಿಸುತ್ತಿದ್ದರು. ದೇವರು ಜಾರ್ಜ್ ಮುಲ್ಲರ್ ರವರ ನಿರಂತರ ಪ್ರಾರ್ಥನೆಯನ್ನು ಕೇಳಿದರು. ಅವರು ಸಾಯುವ ಮೊದಲು, ಅವರಲ್ಲಿ ಒಬ್ಬರು ದೇವರನ್ನು ಸ್ವೀಕರಿಸಿದರು. ಮುಲ್ಲರ್ ನಿಧನರಾದ ಕೆಲವು ತಿಂಗಳುಗಳ ನಂತರ, ಇನ್ನೊಬ್ಬ ಸ್ನೇಹಿತ ಕೂಡ ದೇವರನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದರು. ಜಾರ್ಜ್ ಮುಲ್ಲರ್ ರವರು ಅವರ ಮಾನಸಾಂತರಕ್ಕಾಗಿ 53 ವರ್ಷಗಳಿಂದ ಪ್ರಾರ್ಥಿಸುತ್ತಿದ್ದರಂತೆ. ನೋಡಿ, ಬೇಸರಗೊಳ್ಳದೇ ಪ್ರಾರ್ಥಿಸಿದ ಪ್ರಾರ್ಥನೆಗೆ ಉತ್ತರ ಸಿಕ್ಕಿತು. 

 

ಇಂದಿನ ಸತ್ಯವೇದಭಾಗದಲ್ಲಿ ಹೇಳಲಾದ ಘಟನೆಯನ್ನು ನೋಡೋಣ. ಒಬ್ಬ ವಿಧವೆಯು ನ್ಯಾಯಾಧಿಪತಿಯ ಬಳಿಗೆ ಹೋಗಿ, ನನ್ನ ಪ್ರತಿ ವಾದಿಗೂ ನನಗೂ ನ್ಯಾಯತೀರಿಸು ಎಂದು ಹೇಳಿ ಕೊಳ್ಳುತ್ತಿದ್ದಳು. ಅವನು ಸ್ವಲ್ಪಕಾಲದವರೆಗೆ ಮನಸ್ಸಿಲ್ಲ ದವನಾಗಿದ್ದನು; ತರುವಾಯ ಅವನು ತನ್ನೊಳಗೆ--ನಾನು ದೇವರಿಗೆ ಭಯಪಡುವದಿಲ್ಲ, ಮನುಷ್ಯರನ್ನು ಲಕ್ಷ್ಯಮಾಡುವದೂ ಇಲ್ಲ. ಅದಾಗ್ಯೂ ಈ ವಿಧವೆಯು ನನಗೆ ತೊಂದರೆ ಕೊಟ್ಟು ಪದೇ ಪದೇ ನನ್ನ ಬಳಿಗೆ ಬಂದು ನನ್ನನ್ನು ದಣಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು ಎಂದು ಅಂದುಕೊಂಡನು. ಅದರಂತೆಯೇ ದೇವರಾದು ಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡು ವಾಗ ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಎಂದು ಯೇಸುಕ್ರಿಸ್ತನು ಹೇಳಿದ್ದಾರೆ. 

 

ಪ್ರಿಯರೇ! ಸೋತುಹೋಗುವಿಕೆ ಮಾನವರಾಗಿ ಜನಿಸಿದ ನಮ್ಮೆಲ್ಲರಿಗೂ ಬರುವ ಒಂದು ವಿಷಯವೇ. ಅದರಲ್ಲೂ ವಿಶೇಷವಾಗಿ ಪ್ರಾರ್ಥನೆಯಲ್ಲಿ ಆಯಾಸಗೊಳ್ಳುವುದು ಸಹಜವೇ. ಆಯಾಸಗೊಳ್ಳದ ಜೀವಿ ಇಲ್ಲ ಎಂದು ಸಹ ಹೇಳಬಹುದು. ಮಹಾನ್ ಪ್ರವಾದಿಯಾದ ಎಲೀಯನನ್ನು ಸಹ ಈ ದಣಿವು ಬಿಡಲಿಲ್ಲ? ನಾವು ದಣಿಯುವಾಗೆಲ್ಲಾ ಪರಿಶುದ್ಧಾತ್ಮನನ್ನು ಒರಗಿಕೊಳ್ಳೋಣ. ನಮ್ಮಲ್ಲಿ ಅನೇಕರು ತಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗದಿದ್ದಾಗ ನಿರುತ್ಸಾಹಗೊಳ್ಳುತ್ತೇವೆ ಮತ್ತು ಪ್ರಾರ್ಥನೆಯನ್ನು ಬಿಟ್ಟುಬಿಡುತ್ತೇವೆ. ಅಷ್ಟೇ ಅಲ್ಲ, ಕೆಲವೊಮ್ಮೆ ಪ್ರಾರ್ಥಿಸುವುದನ್ನು ಸಹ ಮರೆತುಬಿಡುತ್ತೇವೆ. ತಡವಾದರೂ, ಯೇಸು ಖಂಡಿತವಾಗಿಯೂ ನಮಗೆ ಉತ್ತರಿಸುತ್ತಾರೆ. ಆದ್ದರಿಂದ ನಾವು ನಿರುತ್ಸಾಹಗೊಂಡಾಗಲೆಲ್ಲಾ, ಪರಿಶುದ್ಧಾತ್ಮನನ್ನು ಒರಗಿಕೊಳ್ಳೋಣ, ಹೊಸ ಶಕ್ತಿಯನ್ನು ಪಡೆಯೋಣ ಮತ್ತು ಪ್ರಾರ್ಥನೆಯಲ್ಲಿ ಹೋರಾಡುವುದನ್ನು ಮುಂದುವರಿಸೋಣ, ಗೆಲ್ಲೋಣ.

- Sis. ಮೆರ್ಸಿ

 

ಪ್ರಾರ್ಥನಾ ಅಂಶ:

ಮಕ್ಕಳ ಶಿಬಿರಗಳ ಮೂಲಕ ನಾವು ಭೇಟಿಯಾದ ಮಕ್ಕಳು, ಯೇಸುವಿಗಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet